NEWS

ಮಂಡ್ಯ ವಿವಿಯ ಕರ್ಮಕಾಂಡ ಬಯಲಿ ಗೆಳೆಯುವ ಸಂಬಂಧ ಸಮಗ್ರ ತನಿಖೆ

ಪಾಲನೆ ನ್ಯೂಸ್

ಮಂಡ್ಯ : ಮಂಡ್ಯ ವಿವಿಯ ಪ್ರಭಾರ ಕುಲಪತಿಗಳ ನೇಮಕ ಕಾನೂನು ಬಾಹಿರವಾಗಿದ್ದು ಅವರನ್ನು ವಜಾಗೊಳಿಸಿ, ವಿವಿ ಯಲ್ಲಿ ನಡೆಸಿರುವ ಕರ್ಮಕಾಂಡ ಬಯಲಿ ಗೆಳೆಯುವ ಸಂಬಂಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಮಾಜಿ ಸಭಾಪತಿ ಮರಿತಿಬ್ಬೇಗೌಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಬಾಲಕರ ಮಹಾವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಆರಂಭಗೊಂಡು ೭ ವರ್ಷಗಳು ಕಳೆದಿವೆ. ಆರಂಭಗೊಂಡ ದಿನದಿಂದ ಮೈಸೂರು ವಿವಿಯ ಎಲ್ಲ ಹಕ್ಕುಗಳನ್ನು ಕಳೆದುಕೊಂಡಿದೆ ಎಂದರು. ಯುಜಿಸಿ ನಿಯಮಾನುಸಾರ ಇದು ವರೆಗೂ ಮಂಡ್ಯ ವಿವಿಗೆ ತನ್ನದೇ ಆದ ಶಾಸನಗಳನ್ನು ಮಾಡಿಕೊಳ್ಳದೇ, ಅವು ಗಳನ್ನು ರಚಿಸಿ ರಾಜ್ಯಪಾಲರು ಹಾಗೂ ರಾಜ್ಯ ಸರಕಾರದಿಂದ ಅನುಮೋದನೆಯನ್ನೂ ಪಡೆದುಕೊಂಡಿಲ್ಲ.

ವಿವಿಯಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟು ವಟಿಕೆಗಳನ್ನು ನಿರ್ವಹಿಸುತ್ತಿಲ್ಲ ಎಂದು ದೂರಿದರು. ಆದ್ದರಿಂದ ಸದರಿ ವಿವಿಯಿಂದ ಪ್ರದಾನ ಮಾಡುವ ಪದವಿಗಳು ಮಾನ್ಯತೆ ಪಡೆದಿರುವುದಿಲ್ಲ. ವಿವಿಗೆ ಸಂಯೋಜನೆಗೊಂಡ ಕಾಲೇಜುಗಳಲ್ಲಿ ಹೊಸ ಕೋರ್ಸ್ಗಳಿಗೆ ಅನುಮತಿ ನೀಡುವುದು, ಸಂಶೋಧನಾ ಕೇಂದ್ರ ಸ್ಥಾಪನೆ, ಸಂಶೋಧನಾ ವಿಧ್ಯಾರ್ಥಿಗಳಿಗೆ ಮಾರ್ಗದರ್ಶಕರ ನೇಮಕ, ಪಿಎಚ್‌ಡಿಗೆ ಪ ್ರವೇಶ ಪರೀಕ್ಷೆ ನಡೆಸುವುದು ಕಾನೂನುಬಾಹಿರವಾಗಿದೆ ಎಂದರು. ಮಂಡ್ಯ ವಿವಿಗೆ ಪ ್ರಭಾರ ಕುಲಪತಿಗಳ ನೇಮಕ ಮಾಡಲು ಸೇವಾ ಜೇಷ್ಠತೆಯಲ್ಲಿ ಮೊದಲನೆಯವರಾದ ಡಾ.ಎಚ್.ಆರ್. ಉಮಾ ಅವರನ್ನು ಬಿಟ್ಟು, ಕಾನೂನು ಬಾಹಿರವಾಗಿ ಪ್ರೊ.ಶಿವಚಿತ್ತಪ್ಪ ಅವರ ಹೆಸರನ್ನು ಹಿಂದಿನ ಪ್ರಭಾರ ಕುಲಪತಿ ಪ್ರೊ.ಪುಟ್ಟರಾಜು ಶಿಫಾರಸು ಮಾಡಿರುವುದು ನಿಯಮ ಬಾಹಿರವೆಂದರು. ಈ ಸಂಬಂಧ ಉನ್ನತ ಶಿಕ ್ಷಣ ಸಚಿವರು ಹಾಗೂ ಅವರ ಕಾರ್ಯದರ್ಶಿ ಗಳಿಗೆ ಇದುವರೆಗೆ ೬ ಪತ ್ರಗಳನ್ನು ಬರೆದಿ ದ್ದರೂ ಯಾವುದೇ ಕ್ರಮ ಜರುಗಿಸಿಲ್ಲ.

ಅಲ್ಲದೇ ಸ್ವಂತ ಶಾಸನಗಳಿಲ್ಲದ ವಿವಿಯ ದ್ವಾರ ಬಾಗಿಲಿಗೆ ಬಡ ವಿದ್ಯಾರ್ಥಿಗಳಿಂದ ಪಡೆದ ಹಣದಲ್ಲಿ ೩ ಕೋಟಿ ರೂ.ನಷ್ಟು ವೆಚ್ಚ ಮಾಡಿರುವುದು ಸರಿಯೇ ಎಂದು ಪ ್ರಶ್ನಿಸಿದರು. ಪುಸ್ತಕ ಖರೀದಿಯಲ್ಲಿ ಅವ್ಯವಹಾರ ಪ್ರೊ.ಶಿವಚಿತ್ತಪ್ಪ ಅವರು ಪ ್ರಭಾರ ಕುಲಪತಿ ಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಾರಂಭವಾಗದ ಎಂಬಿಎ ಮತ್ತು ಎಂಸಿಎ ಕೋರ್ಸ್ಗಳ ವಿದ್ಯಾರ್ಥಿಗಳಿ ಗಾಗಿ ಗ್ರಂಥಾಲಯಕ್ಕೆ ೨೨ ಲಕ್ಷ ರೂ. ವೆಚ್ಚದಲ್ಲಿ ಹಾಗೂ ಘಟಕ ಕಾಲೇಜಿನ ಗ್ರಂಥಾಲಯಕ್ಕೆಂದು ೪೦ ಲಕ್ಷ ರೂ ವೆಚ್ಚದಲ್ಲಿ ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ.

ಕಂಪ್ಯೂಟರ್‌ಗಳನ್ನು ಖರೀದಿ ಮಾಡದೇ ಲಕ್ಷಾಂತರ ರೂ ವೆಚ್ಚದಲ್ಲಿ ಅದರ ಪರಿಕರ ಗಳ ಖರೀದಿ ಹಾಗೂ ಪುಟ್ಟರಾಜು ಅವಧಿಯಲೆ ೫ ಕೋಟಿ ರೂ ವೆಚ್ಚದ ಪೀಠೋಪಕರಣ ಖರೀದಿ ಮಾಡಿದ್ದರೂ ಮತ್ತೇ ಪೀಠೋಪಕರಣಗಳನ್ನು ಖರೀದಿ ಮಾಡಿ ಕೊಠಡಿಯಲ್ಲಿ ಸಂಗ ್ರಹಿಸಿಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದರು. ನಿಯಮಬಾಹಿರ ನೇಮಕ ಕಾಲೇಜಿನ ಕಾವಲುಗಾರರು ಮತ್ತು ಇತರೆ ಸಿಬ್ಬಂದಿಗಳನ್ನು ನಿಯಮ ಬಾಹಿರವಾಗಿ ನೇಮಕ ಮಾಡಿಕೊಳ ್ಳ ಲಾಗಿದೆ. ೨೦ ಮಂದಿ ಕೆಲಸ ಮಾಡಿದರೆ.

೫೦ ಮಂದಿ ನೌಕರರ ಹೆಸರಿನಲ್ಲಿ ವೇತನ ನೀಡುತ್ತಿದ್ದಾರೆ. ಮೈಸೂರು ವಿವಿಯಿಂದ ೭ ಮಂದಿ ಅತಿಥಿ ಉಪನ್ಯಾಸಕರನ್ನು ಕರೆಸಿಕೊಳ್ಳಲಾಗಿದ್ದು, ಕೆಲಸ ನೀಡದೇ ಸುಮ್ಮನೆ ಕೂರಿಸಿ ಅವರಿಗೆ ಲಕ್ಷಾಂತರ ರೂ. ವೇತನ ನೀಡುತ್ತಿದ್ದಾರೆ. ಅತಿಥಿ ಶಿಕ್ಷಕರು ಸೇರಿದಂತೆ ಕಾಲೇಜಿನ ಶಿಕ್ಷಕರಿಗೂ ಸರಕಾರವೇ ವೇತನ ನೀಡುತ್ತಿದೆ. ಆದರೆ ಮಂಡ್ಯ ವಿವಿ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಹೇಳಿಕೆ ನೀಡುವುದು ಹಾಸ್ಯಾಸ ್ಪದವಾಗಿದೆ ಎಂದು ವ್ಯಂಗ್ಯ ವಾಡಿದರು. ವಿವಿ ವೆಬ್‌ಸೈಟ್‌ನಲ್ಲಿ ಬಾಲಕರ ಕಾಲೇಜು ಪಡೆದಿದ್ದ ೧೨ ಬಿಗ್ರೆಡ್ ಅನ್ನು ಮಂಡ್ಯ ವಿವಿ ಗೆ ಬಳಸಿಕೊಳ್ಳಲಾಗಿದೆ.

ಈಗಿನ ವ್ಯವಸ್ಥೆಯಲ್ಲಿ ಮಂಡ್ಯ ವಿವಿ ೧೨ಬಿ ಗ್ರೇಡ್ ತಲುಪಲು ದಶಕಗಳೇ ಬೇಕಾಗು ತ್ತದೆ. ತಮಗೆ ಬೇಕಾದ ಮಾಹಿತಿಗಳನ್ನು ಮಾತ್ರ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿ ಸಾಂಸ್ಕೃತಿಕ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಆಪಲ್ ಲ್ಯಾಬ್ ಇದೆ ಎಂದು ಹೇಳಿಕೊಳ್ಳುವ ವಿವಿ ಆಡಳಿತ ಮಂಡಳಿ ಅದಕ್ಕೆ ಬೀಗ ಜಡಿದಿರುವುದು ಎಷ್ಟು ಸಮಂಜಸ ಎಂದರು. ವಿವಿ ಯಲ್ಲಿರುವ ೧೨ ಪಿಜಿ ಕೋರ್ಸ್ಗಳಲ್ಲಿ ೯ ಕೋರ್ಸ್ ಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿಹೋಗಿವೆ. ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗಕ್ಕೆ ೫,೦೦೦ ರೂ.ಶುಲ್ಕವಿದ್ದರೆ, ಮಂಡ್ಯ ವಿವಿಯಲ್ಲಿ ೯,೦೦೦ ರೂ. ನಿಗದಿ ಗೊಳಿಸಿರುವುದು ಎಷ್ಟು ಸರಿ? ವಿದ್ಯಾರ್ಥಿ ಗಳಿಗೆ ಅಂಕಪಟ್ಟಿಯನ್ನು ವಿತರಿಸದೆ ಇದ್ದರು ಸಹ ಅಂಕಪಟ್ಟಿ ಶುಲ್ಕ ಎಂದು ೪೧೬ ರೂ. ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಸಂಶೋಧನಾ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಲೋಪ ಯುಜಿಸಿ ನಿಯಮಾವಳಿಗಳ ಪ್ರಕಾರ ಅರ್ಹತೆ ಇಲ್ಲದಿದ್ದರೂ ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಶೇ.೯೫ರಷ್ಟು ಫಲಿತಾಂಶ ಪ್ರಕಟಿಸಿದ್ದು, ೧೮೬ ಪರೀಕ್ಷಾರ್ಥಿ ಗಳ ಪೈಕಿ ೧೩೬ ಮಂದಿ ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲೆ ್ಲಯವರೇ ಆಗಿದ್ದು, ಅವರಿಂದ ಲಕ್ಷಾಂತರ ಹಣ ಸಂಗ್ರಹಿಸ ಲಾಗಿದೆ. ಕೂಡಲೇ ರಾಜ್ಯಪಾಲರು ಮತ್ತು ರಾಜ್ಯ ಸರಕಾರ ಈ ಸಂಬಂಧ ಕಾನೂನು ಕ ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಲೋಕಾಯುಕ ್ತ ಅಥವಾ ಕಾನೂನು ಸಮರ ಸಾರುವುದಾಗಿ ಎಚ್ಚರಿಸಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮುಖ್ಯಶಿಕ್ಷಕಿ ಅಮಾನತ್ತು; ಮಕ್ಕಳಿಗೆ ಕಳಪೆ ಊಟ

ಹೊನ್ನೇಕೊಡಿಗೆ ಸಂಪರ್ಕ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಲೋಕಾರ್ಪಣೆಗೊಳಿಸಲಿದ್ದಾರೆ.

ಭಾರತಕ್ಕೆ ಜಿಂಬಾಬೆ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು

Leave a Comment