ಪಾಲನೆ ನ್ಯೂಸ್
ಸೋಮವಾರಪೇಟೆ: ಜಮ್ಮು ಕಾಶ್ಮೀರದಲ್ಲಿ ಆತ್ಮಹತ್ಯೆಗೆ ಶರಣಾದ ಸಿಆರ್ಪಿಎಫ್ ಯೋಧ ಕೆ.ಜೆ. ನವೀನ್ ಕುಮಾರ್ (40) ಅವರ ಪಾರ್ಥಿವ ಶರೀರಮಂಗಳವಾರ ರಾತ್ರಿ 11 ಗಂಟೆಗೆ ಸ್ವಗ್ರಾಮಕ್ಕೆ ತಲುಪಿದ್ದು, ಬುಧವಾರ 12 ಗಂಟೆಗೆ ಯಡವಾರೆ ಗ್ರಾಮ ದ ಅವರ ಸ್ವಂತ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ 180ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಸೋಮವಾರ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಯಡವಾರೆ ಗ್ರಾಮದ ಕಾಫಿ ಬೆಳೆಗಾರ ಕೀಜನ ಜೋಯಪ್ಪ ಅವರ ಪುತ್ರರಾಗಿದ್ದಾರೆ. ಮೃತರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಇದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
