NEWS

ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ಜಾಬಾ ಖಮೇನಿ ಮೃತಪಟ್ಟಿರುವ ಶಂಕೆ

ಪಾಲನೆ ನ್ಯೂಸ್

ನವದೆಹಲಿ: ಮಶ್ಚಾದ್ ನಗರದಲ್ಲಿ ಕಂಡುಬಂದಿರುವ ಭಿತ್ತಿಚಿತ್ರದಲ್ಲಿ (ಮ್ಯೂರಲ್) ಮೊಜ್ವಾಬಾ ಅವರ ಚಿತ್ರವೂ ಇರುವುದು ಇದಕ್ಕೆ ಕಾರಣವಾಗಿದ್ದು ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಇಸ್ಲಾಮಿಕ್ ಗಣರಾಜ್ಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ಭಿತ್ತಿಚಿತ್ರ ಪ್ರದರ್ಶನಗೊಂಡಿದೆ. ಮೊಜ್ಜಾಬಾ ತಂದೆ ಅಲಿ ಖಮೇನಿ ಸಹಿತ ಇತ್ತೀಚಿನ ದಾಳಿಗಳಲ್ಲಿ ಮೃತಪಟ್ಟ ಹಲವು ಪ್ರಮುಖ ಇರಾನಿ ನಾಯಕರ ಫೊಟೋಗಳು ಈ ಕಲಾಕೃತಿಯಲ್ಲಿವೆ. ಗೋಡೆ ಮೇಲೆ ಬಿಡಿಸುವ ದೊಡ್ಡ ಕಲಾಕೃತಿಯನ್ನು ಮ್ಯೂರಲ್ ಎನ್ನುತ್ತಾರೆ. ಸಾಮಾನ್ಯವಾಗಿ ಜನರನ್ನು ಗೌರವಿಸಲು, ಕಥೆ ಹೇಳಲು ಅಥವಾ ಸಾರ್ವಜನಿಕ ಸಂದೇಶ ಹಂಚಿಕೊಳ್ಳಲು ಇದನ್ನು ರಚಿಸಲಾಗುತ್ತದೆ. ಈ ಮ್ಯೂರಲ್ ಅನಾವರಣಗೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದೆ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಖಾಲಿ‌ ಇರುವ ಹುದ್ದೆಗೆ ಭರ್ತಿ, ನೇಮಕಾತಿಗೆ ಅಕ್ರಮ ತಡೆ ಆಗ್ರಹ

2028ರಲ್ಲಿ ಮತ್ತೆ ಎಚ್‌ಡಿಕೆ‌ ಮುಖ್ಯಮಂತ್ರಿ ಆಗುತ್ತಾರೆ : ಜಿ.ಡಿ.ಹರೀಶ್‌ ಗೌಡ

ಸಾರ್ವಜನಿಕ ಪ್ರದೇಶದಲ್ಲಿಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸಲು ಆದೇಶ

Leave a Comment