NEWS

ಭಾರತ -‌ ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ

ಪಾಲನೆ ನ್ಯೂಸ್

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಏ. 27ರಂದು ಸಹಿ ಬೀಳಲಿದೆ. ಭಾರತ್ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್ ಸಚಿವ ಟಾಡ್ ಮೆಕ್ಲಾಯ್ ಭಾಗವಹಿಸಲಿದ್ದಾರೆ. ಈ ಒಪ್ಪಂದ ಮುಂದಿನ 15 ವರ್ಷಗಳಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ತರುವ ಗುರಿ ಹೊಂದಿದೆ. ಭಾರತದ ಐಟಿ ವೃತ್ತಿಪರರು, ಆಯುಷ್ ವೈದ್ಯರು ಮತ್ತು ಬಾಣಸಿಗರಿಗೆ ನ್ಯೂಜಿಲೆಂಡ್ ವರ್ಷಕ್ಕೆ 5,000 ಉದ್ಯೋಗ ವೀಸಾಗಳನ್ನು ನೀಡಲಿದೆ. ಆದರೆ, ರೈತರ ಹಿತದೃಷ್ಟಿಯಿಂದ ಡೇರಿ ಉತ್ಪನ್ನಗಳ ಮೇಲಿನ ಸುಂಕವನ್ನು ಭಾರತ ಕಡಿತಗೊಳಿಸಿಲ್ಲ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪ್ರಾಚೀನ ಗಮಕ ಕಲೆಗೆ ಪ್ರೋತ್ಸಾಹ ಅಗತ್ಯ: ಡಾ. ನಾಗರಾಜ್ ಭೈರಿ

ಎಐಟಿಎ 14 ವರ್ಷದೊಳಗಿನವರ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕಿತರಾಗಿರುವ ಪದ್ಮಪ್ರಿಯಾ

ಶಿವಗಂಗೆಯಲ್ಲಿ ಜಾತ್ರಾ ಮಹೋತ್ಸವ

Leave a Comment