NEWS

ತಾನೂ ಗುಂಡು ಹಾರಿಸಿಕೊಂಡು ತರಗತಿಯಲ್ಲೇ ಸಹಪಾಠಿಗೆ ಗುಂಡಿಕ್ಕಿ ಕೊಂದ ವಿದ್ಯಾರ್ಥಿ

ಪ್ರೇಮ ವೈಫಲ್ಯ ಕಾರಣ

ಪಾಲನೆ ನ್ಯೂಸ್

ಚಂಡೀಗಢ: ಕಾನೂನು ವಿದ್ಯಾರ್ಥಿಯೊಬ್ಬಸಹಪಾಠಿಗೆ ಕ್ಲಾಸಲ್ಲೇ ಗುಂಡು ಹಾರಿಸಿ ಕೊಂದು, ಬಳಿಕ ತಾನೂ ಗುಂಡು ಹೊಡೆದುಕೊಂಡು ಗಾಯಗೊ೦ಡ’ ಘಟನೆ ಸೋಮವಾರ ಪಂಜಾಬ್‌ನ ತರಣ್ ತಾರಣ್‌ ಜಿಲ್ಲೆಯಲ್ಲಿ ನಡೆದಿದೆ. ಪ್ರೇಮ ವೈಫಲ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ವಿದ್ಯಾರ್ಥಿ ಪ್ರಿನ್ಸ್ ರಾಜ್ ತರಗತಿ ಪ್ರಾರಂಭದ ವೇಳೆ ಅಲ್ಲಿಗೆ ಬಂದು ಹಾರಿಸಿದ ಗುಂಡಿನಿಂದ, ಸಹಪಾಠಿ ಸಂದೀಪ್ ಕೌರ್ ಮೃತಪಟ್ಟಿದ್ದಾರೆ.

ಬಳಿಕ ಸ್ವತಃ ಗುಂಡು ಹಾರಿಸಿಕೊಂಡ ರಾಜ್‌ನನ್ನು ಆಸ್ಪತ್ರೆಗೆ ದಾಖಲಿ ಸಲಾಗಿದ್ದು ಸ್ಥಿತಿ ಗಂಭೀರವಾಗಿದೆ. ತರಣ್ ತಾರಣ್ ಜಿಲ್ಲೆಯ ಉಸ್ಮಾ ಗ್ರಾಮದಲ್ಲಿಯ ಕಾನೂನು ಕಾಲೇಜಿನಲ್ಲಿ ರಾಜ್, ಸಂದೀಪ್ ಮೊದಲ ವರ್ಷದ ವಿದ್ಯಾರ್ಥಿಗಳಾಗಿದ್ದರು. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವಿಕೆಟ್ ಕೀಪರ್ -ಆರಂಭಿಕ ಸಂಜು ಸ್ಯಾಟ್ಸನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಪ್ರಶಸ್ತಿ ರೇಸ್‌ನಲ್ಲಿ

ಗಿಲ್ಲಿಗೆ ಸಿಎಂ ಅಭಿನಂದನೆ

ಕೆಎಂಎಫ್ ಅಧಕ್ಷರ ಎಲೆಕ್ಷನ್ ?

Leave a Comment