NEWS

‘ಆಪ್ತ ಸಂವಾದ’ದ ಮೊದಲ ಸಂಚಿಕೆ ಫೆಬ್ರವರಿ 1

ಪಾಲನೆ ನ್ಯೂಸ್

ಮಂಡ್ಯ: ‘ಆಪ್ತ ಸಂವಾದ’ದ ಮೊದಲ ಸಂಚಿಕೆ ಫೆಬ್ರವರಿ 1, 2026 ಬೆಳಗ್ಗೆ 10:30ಕ್ಕೆ ಮಂಡ್ಯದ ಗಾಂಧಿ ಭವನದಲ್ಲಿ ನಡೆಯಲಿದೆ.

‘ಕನ್ನಡತಿ‘ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾದ ಚಲನಚಿತ್ರ ನಟಿ, ಇದೀಗ ಚಿತ್ರ ನಿರ್ದೇಶಕಿಯಾಗಿಯೂ ಕ್ರಿಯಾಶೀಲರಾಗಿರುವ ರಂಜನಿ ರಾಘವನ್ ತಮ್ಮ ಕಥೆ ಡಬ್ಬಿ ಪುಸ್ತಕ ಹೊತ್ತು ಬರುತ್ತಿದ್ದಾರೆ. ಆ ಪುಸ್ತಕದ ನೆವದಲ್ಲಿ ಅವರ ಒಟ್ಟಾರೆ ಸಾಹಿತ್ಯ ಕೃಷಿ, ಸಮಕಾಲೀನ ಸಾಹಿತ್ಯ ಸಂದರ್ಭದ ಕುರಿತು ಆಳವಾದ ಸಂವಾದ ನಡೆಯಲಿದೆ.

ಲೇಖಕ-ಕಿರುಚಿತ್ರ ನಿರ್ದೇಶಕ, ಆಪ್ತ ಸಂವಾದದ ಮುಖ್ಯಸ್ಥರೂ ಆದ ವಿನಯ್ ಕುಮಾರ್ ಎಂ. ಜಿ. ರವರು ಈ ಬಾರಿಯ ಸಂವಾದ ನಡೆಸಿಕೊಡಲಿದ್ದಾರೆ.

ವಿವರಗಳಿಗಾಗಿ : 9972391577

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಬೈರತಿಗೆ ಸಿಐಡಿ ವಶದಲ್ಲೇ ವೈದ್ಯಕೀಯ ಚಿಕಿತ್ಸೆ

ಒಂದು ಸಣ್ಣ ಬೀಜದ ಉಂಡೆಗಳು ದೊಡ್ಡ ಅರಣ್ಯದ ಸೃಷ್ಟಿಗೆ ಮುನ್ನುಡಿ ಬರೆಯುತ್ತವೆ

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ . (HPV) ಲಸಿಕೆ ಪಡೆಯವಂತೆ ಜಾಗೃತಿ ಮೂಡಿಸಿ – ಡಾ. ಕುಮಾರ

Leave a Comment