NEWS

ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಪಾಲನೆ ನ್ಯೂಸ್

ನವದೆಹಲಿ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಮತ್ತು ಅಮೆರಿಕನ್ – ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಹಿನ್ನೆಲೆ ಡಾಲ‌ರ್ ಮೌಲ್ಯ ವೃದ್ಧಿಯಿಂದಾಗಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ-ಬೆಳ್ಳಿ ಬೆಲೆ ಭಾರಿ ಕುಸಿತ ಕಂಡಿದೆ. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2.56 ಲಕ್ಷ ರೂ.ಗೆ ಇಳಿಕೆಯಾಗಿದ್ದರೆ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1.60 ಲಕ್ಷ ರೂ.ಗೆ ತಲುಪಿದೆ.

ಅಖಿಲ ಭಾರತ ಸರಾಫ ಅಸೋಸಿಯೇಷನ್ ನೀಡಿರುವ ಮಾಹಿತಿ ಪ್ರಕಾರ, ಬೆಳ್ಳಿಯ ಬೆಲೆ ಶುಕ್ರವಾರ ಇದ್ದ 2,65,500 2.2 9,000 . ಗಳಷ್ಟು (ಶೇ. 3.4) ಭಾರಿ ಕುಸಿತ ಕಂಡು, ಪ್ರತಿ ಕೆಜಿಗೆ 2,56,500 ರೂ.ಗೆ ತಲುಪಿದೆ. ಸತತ ಮೂರನೇ ದಿನವೂ ತನ್ನ ಇಳಿಕೆ ಮುಂದುವರಿಸಿರುವ ಶೇ. 99.9 ಶುದ್ಧತೆಯ ಚಿನ್ನದ ಬೆಲೆ 2,950 ರೂ. (ಶೇ. 1.81) ಇಳಿಕೆಯಾಗಿ, ಪ್ರತಿ 10 ಗ್ರಾಂಗೆ 1,60,250 ರೂ.ಗೆ ತಲುಪಿದೆ. ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಕಚ್ಚಾ ತೈಲ ಬೆಲೆ ಏರಿಕೆಯಾದ ಕಾರಣ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಡಾಲ‌ರ್ ಮತ್ತು ಬಾಂಡ್‌ಗಳತ್ತ ಮುಖ ಮಾಡಿರುವುದು ಈ ಬೆಲೆ ಇಳಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ

ಸಾಹುಕಾರ್ ಚೆನ್ನಯ್ಯ ಅಂದ್ರೆ ಇವರೇ…

Leave a Comment