NEWS

ಮಕ್ಕಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಭಿತ್ತಿ

ಪಾಲನೆ ನ್ಯೂಸ್

ಸೋಮವಾರಪೇಟೆ: ಮಕ್ಕಳಿಗೆ ಶೇ.100 ಅಂಕಗಳ ಒತ್ತಡ ನೀಡುವುದಕ್ಕಿಂತ ಅವರಲ್ಲಿ ದೇಶಪ್ರೇಮ, ಶಿಸ್ತು ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಬೆಳೆಸುವುದು ಮುಖ್ಯ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ದೋ. ಕೇಶವಮೂರ್ತಿ ಹೇಳಿದರು. ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ಅಬ್ಬರು ಕಟ್ಟೆ ಮಂಡಲದಲ್ಲಿ ಈಗೆ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು ಎಂದು ಕರೆ ನೀಡಿದರು. ಹನುಮಾನ್, ಶ್ರೀರಾಮಚಂದ್ರ, ಭಗತ್ ಸಿಂಗ್, ಸುಖದೇವ್, ಚಂದ್ರಶೇಖರ ಆಜಾದ್ ಅವರಂತಹ ಮಕ್ಕಳಿಗೆ ತೋರಿಸಬೇಕು ಅಭಿಪ್ರಾಯಪಟ್ಟರು. ದೇಶಭಕ್ತರನ್ನು ಆದರ್ಶವಾಗಿ ಎಂದು ಮನೆಹಳ್ಳಿ ಮಠದ من ಮಹಾಂತ ಶಿವಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಧಾರ್ಮಿಕ | ಇತಿಹಾಸ ಹೊಂದಿದ ಪುಣ್ಯಭೂಮಿ. ಋಷಿ-ಮುನಿಗಳು, ಯೋಗಿಗಳು ಹಾಗೂ ತ್ಯಾಗಿಗಳ ತಪಸ್ಸಿನಿಂದ ಈ ಭೂಮಿ ಪವಿತ್ರವಾಗಿದೆ. ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಹಿಂದುಗಳು ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಂಸ್ಕೃತಿ ಉಳಿಯಲಿದೆ ಎಂದು ಹೇಳಿದರು. ತಣ್ಣೀರುಹಳ್ಳ ಬಸವೇಶ್ವರ ದೇವಾಲಯದಿಂದ ಅಟ್ಟೂರು ಕಟ್ಟೆ ಜಂಕ್ಷನ್‌ವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಚಂಡೆ ವಾದ್ಯ, ಮಕ್ಕಳ ನೃತ್ಯಗಳೊಂದಿಗೆ ನೂರಾರು ಮಂದಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಪಿ.ಡಿ.ಪ್ರಕಾಶ್, ಕೆ.ಎನ್.ಪಾಪಯ್ಯ ಪಿ.ಇ.ಚಂದ್ರಾಜು, ರೂಪ ಸತೀಶ್, ಕಾವೇರಿ ಹೊಸಳ್ಳಿ ಹಾಗೂ ರಮೇಶ್.ಜೆ.ಜೆ ಇದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

ರಸ್ತೆಗಳ ಮೂಲೆಗಳಲ್ಲಿ ಕಸ ಹಾಕುವವರಿಗೆ ದಂಡ

ಮಕ್ಕಳಿಗೆ ಗಮಕದ ಅರಿವು ಅಗತ್ಯ : ವಿ. ಸುಜಾತ ಕೃಷ್ಣ

Leave a Comment