NEWS

ಕಳೆದ 6 ತಿಂಗಳಲ್ಲಿ ನಗರ ಪೊಲೀಸ್ ಘಟಕದಿಂದ 105 ಸ್ವತ್ತು ಕಳುವು ಪ್ರಕರಣಗಳ ಪತ್ತೆ

ಪಾಲನೆ ನ್ಯೂಸ್

ಮೈಸೂರು: 2.96 ಕೋಟಿ ರೂ. ಮೌಲ್ಯದ 2 ಕೆ.ಜಿ. 54 ಗ್ರಾಂ ಚಿನ್ನಾಭರಣ, 5 ಕೆ.ಜಿ 312 ಗ್ರಾಂ ಬೆಳ್ಳಿ ಪದಾರ್ಥ, 57 ವಾಹನಗಳು ಮತ್ತು 10.03 ಲಕ್ಷ ರೂ. ಹಣ ಮತ್ತು ಇತರೆ ಸ್ವತ್ತುಗಳ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, 2026ನೇ ಸಾಲಿನಲ್ಲಿ 22 ಎನ್.ಡಿ.ಪಿ.ಎಸ್., 30 5.2 255 0 , 311 2,0579 2.0 ವಸ್ತುಗಳ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ತಿಳಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾಪರ್ಟಿ ರಿಟರ್ನ್ ಪೆರೇಡ್ ನಲ್ಲಿ ಮಾತನಾಡಿದ ಅವರು, ನಗರ ಪೊಲೀಸ್ ಘಟಕದಿಂದ ಕಳೆದ 6 ತಿಂಗಳಲ್ಲಿ 1 ದರೋಡೆ, 1 ದರೋಡೆಗೆ ಸಂಚು, 4 ಸುಲಿಗೆ, 2 ಸರಗಳ್ಳತನ, 26 ಕನ್ನ ಕಳವು, 9 ಮನೆ ಕಳ್ಳತನ, 3 ಮನೆ ಕೆಲಸದವರಿಂದ ಕಳ್ಳತನ, 57 ವಾಹನ ಕಳ್ಳತನ, 4 ಸಾಮಾನ್ಯ ಕಳ್ಳತನ, 1 ಕರ್ನಾಟಕ ಫಾರೆಸ್ಟ್ ಆಕ್ಟ್ ಸೇರಿದಂತೆ ಒಟ್ಟು 79 ಸ್ವತ್ತು ಕಳವು ಪ್ರಕರಣಗಳು ಹಾಗೂ 1 ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು.

ಈ ಪ್ರಕರಣಗಳಿಂದ ಒಟ್ಟು 2.96 ಕೋಟಿ ರೂ. 24 ಕೆ.ಜಿ. ಗಾಂಜಾ ವಶ ಉದಯಗಿರಿ ಠಾಣೆ ಪೊಲೀಸರು ರಾಜೀವ್ ನಗರ 2ನೇ ಹಂತದಲ್ಲಿ ವರುಣ್ ಎಂಬಾತನನ್ನು 2 %, 24 .22. 485 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದರು. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ, 49 ದ್ವಿಚಕ್ರ ವಾಹನಗಳು, 3 ಕಾರು, 1 ಥಾರ್ ಜೀಪ್, 2 ಲಾರಿ, 1 ಗೂಡ್ಸ್ ವಾಹನ, 1 ಆಟೋ, 10.03 ಲಕ್ಷ ಹಣ, 33 ಕೆ.ಜಿ.ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳು 2026ನೇ ಸಾಲಿನಲ್ಲಿ ಒಟ್ಟು 22 ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಿ, 30 ಕೆ.ಜಿ. 255 0 311 0 579 2. ಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಜೊತೆಗೆ 102 ಸೇವನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಣೆ, ಸಂಗ್ರಹ ನಿಯಂತ್ರಣ ಸಂಬಂಧ 20250 26ನೇ ಸಾಲಿನಲ್ಲಿ 16 ಎನ್‌ ಡಿಪಿಎಸ್ ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ತಿಳಿಸಿದರು. ಗಂಧದ ಮರದ ತುಂಡುಗಳು ಹಾಗೂ ಇತರೇ ಮಾಲುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಪತ್ತೆ ಯಾದ ಈ ಪ್ರಕರಣಗಳಲ್ಲಿ ಒಟ್ಟು 82 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಡಿಸಿಪಿ ಕೆ.ಎಸ್. ಸುಂದರ್ ರಾಜ್, ಎಸಿಪಿಗಳಾದ ರಮೇಶ್ ಕುಮಾರ್, ರವಿಶಂಕರ್, ಮ್ಯಾಥ್ ಥಾಮಸ್, ಮಹಮ್ಮದ್ ಶರೀಫ್ ರಾವುರ್ತ ಇದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನದಿಗಳನ್ನು ಸ್ವಚ್ಛವಾಗಿಡಿ

ಕ್ಯಾನ್ಸ‌ರ್ ಆರಂಭದಲ್ಲೇ ಪತ್ತೆಯಾದರೆ ಗುಣಮುಖ

ಆದಿಚುಂಚನಗಿರಿಯಲ್ಲಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವ

Leave a Comment