ಪಾಲನೆ ನ್ಯೂಸ್
ಅಮರಿಕ : ಜತೆಗೆ, ‘ಇರಾನ್‌ಗೆ ಯಾವುದೇ ಕೆಲಸವನ್ನು ಸಂಘಟಿತವಾಗಿ, ಫಲಪ್ರದವಾಗಿ ಮಾಡಲು ಬರುವುದೇ ಇಲ್ಲ. ಅಣ್ವಸ್ತ್ರದ ಗುರಿ ಬಿಟ್ಟು ಡೀಲ್ ಮಾಡಿಕೊಳ್ಳುವುದು ಹೇಗೆಂದು ಅವರಿಗೆ ತಿಳಿದಿಲ್ಲ. ಅವರು ಈ ವಿಷಯದಲ್ಲಿ ಆದಷ್ಟು ಬೇಗ ಜಾಣತನ ತೋರುವುದು ಒಳಿತು’ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಹೋರ್ಮುಜ್‌ನಲ್ಲಿ ತನ್ನ ಹಡಗುಗಳಿಗೆ ಹೇರಿರುವ ನಿರ್ಬಂಧ ತೆಗೆದುಹಾಕಿದರೆ ತಾನು ಕೂಡ ಜಲಸಂಧಿಯನ್ನು ಮುಕ್ತಮಾಡುವುದಾಗಿ ಹೇಳಿದ್ದ ಇರಾನ್, 3 ಹಂತದ ಚರ್ಚೆಯ ಪ್ರಸ್ತಾಪ ಮುಂದಿಟ್ಟಿತ್ತು. ಅದರಲ್ಲಿ ಮೊದಲ ಎರಡು ಹಂತದ ಚರ್ಚೆಯ ಅಂಶಗಳಿಗೆ ಅಮೆರಿಕ ಒಪ್ಪಿಕೊಂಡರೆ ಮಾತ್ರವೇ ಮೂರನೇ ಹಂತದಲ್ಲಿ ಅಣ್ವಸ್ತ್ರ ವಿಷಯದ ಚರ್ಚೆ ಮಾಡು ವುದಾಗಿ ಹೇಳಿತ್ತು. ಆದರೆ ಅದನ್ನು ಇದೀಗ ಟ್ರಂಪ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

