NEWS

ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗಳಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಪಾಲನೆ ನ್ಯೂಸ್

ಚಾಮರಾಜನಗರ : ಜಿಲ್ಲಾ ಮಕ್ಕಳರಕ್ಷಣಾ ಘಟಕದಿಂದ ೨೦೨೪-೨೫ನೇಸಾಲಿನ ಬಾಲ್ಯವಿವಾಹ ಶೂನ್ಯ ಸಹಿಷ್ಣುತೆಹೊಂದಿರುವ ಗ್ರಾಮ ಪಂಚಾಯಿತಿಗಳಿಗೆ(ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯತ್) ಆಯ್ಕೆ ಸಮಿತಿ ಮೂಲಕನೀಡಲಾಗುವ ೨೫ ಸಾವಿರ ರೂ. ಪ್ರಶಸ್ತಿಗೆಅರ್ಜಿ ಆಹ್ವಾನಿಸಲಾಗಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ೨೦೨೪-೨೫ನೇ ಸಾಲಿಗೆ ಯಾವುದೇಬಾಲ್ಯವಿವಾಹ ನಡೆಯದ ಗ್ರಾಮಪಂಚಾಯಿತಿಗಳು ಮಾತ್ರ ಆಯ್ಕೆ ಸಮಿತಿಗೆಪ್ರಸ್ತಾವನೆ ಸಲ್ಲಿಸಬಹುದು.‌

ಜಿಲ್ಲಾಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.ಅರ್ಜಿ ಸಲ್ಲಿಸಲು ಜನವರಿ ೨೯ ಕೊನೆಯದಿನವಾಗಿದೆ.ಗ್ರಾಮ ಪಂಚಾಯಿತಿ ಮಟ್ಟದಲ್ಲಿಬಾಲ್ಯವಿವಾಹ ಮುಕ್ತವಾಗಿರುವ ಕುರಿತುಗ್ರಾಮ ಸಭೆ ಅಥವಾ ಗ್ರಾಮ ಪಂಚಾಯಿತಿಸಮಿತಿಯ ಸಭೆಯಲ್ಲಿ ಫೋಷಿಸಲಾಗಿರುವ ಬಗ್ಗೆ ಪಂಚಾಯಿತಿ ಅಧ್ಯಕ್ಷರುಹಾಗೂ ಪಂಚಾಯಿತಿ ಅಭಿವೃದ್ದಿಅಧಿಕಾರಿಗಳು ದೃಢೀಕರಿಸಿರುವ ಪ್ರತಿಯನ್ನು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು.

ಕಳೆದ ಮೂರು ವರ್ಷಗಳಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹಪ್ರಕರಣಗಳು ನಡೆಯದೇ ಇರುವುದನ್ನುಖಾತ್ರಿ ಪಡಿಸಿಕೊಳ್ಳಬೇಕು. ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ ವಲಸೆ ಬಂದಕುಟುAಬಗಳಲ್ಲಿ ನಡೆದ ಬಾಲ್ಯವಿವಾಹಪ್ರಕರಣಗಳು ಇದ್ದಲ್ಲಿ ಪ್ರಶಸ್ತಿಗೆಪರಿಗಣಿಸುವಂತಿಲ್ಲ. ಕಳೆದ ೩ ವರ್ಷಗಳಲ್ಲಿಬಾಲ್ಯವಿವಾಹ ತಡೆಗಾಗಿ ಕೋರ್ಟ್ನಿಂದಪಡೆದ ತಡೆಯಾಜ್ಞೆಗಳನ್ನು ತಂದುಬಾಲ್ಯವಿವಾಹವನ್ನು ತಡೆದಿದ್ದಲ್ಲಿ ಆಗ್ರಾಮ ಪಂಚಾಯಿತಿಗೆ ಮೊದಲ ಆದ್ಯತೆನೀಡಲಾಗುವುದು.

ಕಳೆದ ೩ ವರ್ಷಗಳಲ್ಲಿ ಬಾಲ್ಯವಿವಾಹದಿಂದ ರಕ್ಷಿಸಲ್ಪಟ್ಟ ಮಕ್ಕಳ ಶಿಕ್ಷಣ ಮುಂದುವರೆಸುವಿಕೆಗೆ ಪ್ರಾಮುಖ್ಯತೆ ನೀಡಿರಬೇಕು.ಗ್ರಾಮ ಪಂಚಾಯಿತಿಯಲ್ಲಿ ನಿಯಮಿತವಾಗಿ ಮಹಿಳೆಯರ ಮತ್ತು ಮಕ್ಕಳರಕ್ಷಣೆಯ ಕಾವಲು ಸಮಿತಿ, ಮಕ್ಕಳವಿಶೇಷ ಗ್ರಾಮ ಸಭೆಗಳನ್ನು ನಡೆಸಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಬಾಲ್ಯವಿವಾಹ ನಡೆಯದಂತೆ ಕ್ರಮವಹಿಸಲು ಯೋಜಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಶಾಲೆಬಿಟ್ಟ ಒಟ್ಟುಮಕ್ಕಳ ಪೈಕಿ ಶಾಲೆಗೆ ಮರಳಿ ದಾಖಲಿಸಿರುವ ಕುರಿತು ವಿಶ್ಲೇಷಿಸಿರುವ ಸಾಮಾನ್ಯಅಂಶಗಳನ್ನು ಪ್ರಶಸ್ತಿಗೆಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ನಗರದಜಿಲ್ಲಾಡಳಿತ ಭವನದ ಮೊದಲನೇಮಹಡಿಯಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಘಟಕ ಕಚೇರಿಗೆ (ಕೊಠಡಿ ಸಂಖ್ಯೆ-೧೨೭)ಭೇಟಿ ನೀಡಬಹುದು ಎಂದು ಜಿಲ್ಲಾಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ತಾಂತ್ರಿಕ ದೋಷ: ವಾಷಿಂಗ್ಟನ್‌ಗೆ ಮರಳಿದ ಟ್ರಂಪ್‌ ಅವರ ಏ‌ರ್ ಫೋರ್ಸ್ ಒನ್ ವಿಮಾನ

ಷೇರುಪೇಟೆ ತೀವ್ರ ವಹಿವಾಟು

ಮಹಿಳಾ ದಿನದಂದು ಜವಾಬ್ದಾರಿಯನ್ನೂ ನೆನಪಿಸಿಕೊಳ್ಳಬೇಕು : ಪ್ರೊ. ಎಂ. ಶ್ರೀಲತಾ

Leave a Comment