ಪಾಲನೆ ನ್ಯೂಸ್
ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿ ವ್ಯಾಪ್ತಿ ಯಲ್ಲಿರುವ ರೈತರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಅಧ್ಯ ಕ್ಷರಾದ ಬಡಗಲಪುರ ನಾಗೇಂದ್ರ ಅವರ ಸಹಭಾಗಿತ್ವದಲ್ಲಿ ಹಂಪಾಪುರ ನಾಡಕಚೇರಿ ಎದುರು ರಸ್ತೆ ತಡೆ ಚಳವಳಿ ನಡೆಸಿದರು.

ಈ ವೇಳೆ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರು ಮಾತ ನಾಡಿ, ಹತ್ವಾಳು, ಚಾಮಹಳ್ಳಿ, ಚಿಕ್ಕನಂದಿ, ಹಿರೇನಂದಿ, ಕಾರೇಹುಂಡಿ ಗ್ರಾಮಗಳ ರೈತರಿಗೆ ಸೇರಿದ ಸುಮಾರು ಎಕರೆಯಷ್ಟು ಭೂಮಿಯನ್ನು ಸರ್ಕಾರಿ ದಾಖಲೆಯಲ್ಲಿ ಬೀಳು ಎಂದು ನಮೂದಿಸಿದ್ದು, 400 ಸರ್ಕಾರದಿಂದ ದೊರಕುವ ಯಾವುದೇ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ.
ಈ ಭಾಗದಲ್ಲಿ ವರುಣ ನಾಲೆ ಹಾದು ಹೋಗಿದ್ದರೂ ಯಾವುದೇ ಕೆರೆಕಟ್ಟೆ ಗಳಿಗೆ ನೀರುಣಿಸಿಲ್ಲ ಎಂದು ದೂರಿದರು. ಹತ್ವಾಳು ಕಟ್ಟೆಯಿಂದ ಹಂಪಾಪುರದ ಉಪ ಪೊಲೀಸ್ ಠಾಣೆಯ ವರೆಗೂ ರಸ್ತೆಯಲ್ಲಿ ಗುಂಡಿಗಳಾಗಿದ್ದು ದುರಸ್ತಿಪಡಿ ಸಬೇಕು ಎಂದು ಒತ್ತಾಯಿಸಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
