NEWS

ದೈಹಿಕ ಶಿಕ್ಷಣ ಮತ್ತು ಗ್ರಂಥಾಲಯಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲು ಸರ್ಕಾರಕ್ಕೆ ಆಗ್ರಹ

ಪಾಲನೆ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರವು ಕಳೆದ 15 ವರ್ಷಗಳಿಂದ ದೈಹಿಕ ಶಿಕ್ಷಣ ಸ್ವಾತಂತ್ರ್ಯ ಪ್ರತಿಭಟನೆ ಉದ್ಯಾನದಲ್ಲಿ ಆಕಾಂಕ್ಷಿಗಳು, ಡಾ. ಸತ್ಯಮೂರ್ತಿ ಗೂಗಿ ಮತ್ತು ಡಾ. ಮತ್ತು ಗ್ರಂಥಾಲಯಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

ಇದರಿಂದ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಸಿಗುತ್ತಿಲ್ಲ, ಮಕ್ಕಳ ದೃಷ್ಟಿಯಿಂದ ಕೂಡಲೇ ಹುದ್ದೆಗಳನ್ನು ಭರ್ತಿ ಮಾಡುವಂತೆ ಉದ್ಯೋಗ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ನೂರಾರು ಸುಶಾಂತ್ ಬಿ. ಪಾಟೀಲ್ ಮುಂದಾಳತ್ವದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕ‌ರ್ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಹೋರಾಟದಲ್ಲಿ ಡಾ. ವೆಂಕಟೇಶ್, ಡಾ. ವೀರೇಶ್‌ಕುಮಾ‌ರ್, ಡಾ. ಶಶಿಧರ್ ಎ. ಕೆಲ್ಲೂರ್, ಡಾ. ಪುನೀತ್, ಸುನಿಲ್‌ಕುಮಾರ್, ಕಿರಣ್ ಕುಮಾರ್, ಡಾ. ಅರುಣ್, ಮಹದೇವಸ್ವಾಮಿ, ಅರಣ್ ಇತರರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಸುಂಕ ಏರಿಸುವ ಬೆದರಿಕೆ ಹಾಕಿದ ಟ್ರಂಪ್

ಕಳೆದ ಬಾರಿಗಿಂತಲೂ ವಿಭಿನ್ನ ಹಾಗೂ ವಿಶಿಷ್ಟವಾಗಿ ಫಲಪುಷ್ಪ ಪ್ರದರ್ಶನ: ಕೆ.ಆರ್.ನಂದಿನಿ

ಭಾರತಕ್ಕೆ ಜಿಂಬಾಬೆ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು

Leave a Comment