NEWS

ಟ್ರಂಪ್‌ ಧಮ್ಮಿ : ನಮ್ಮ ಜತೆ ಚೆಲ್ಲಾಟ ಆಡಿದರೆ ಮತ್ತಷ್ಟು ತೆರಿಗೆ

ಪಾಲನೆ ನ್ಯೂಸ್

ವಾಷಿಂಗ್ಟನ್: ತಮ್ಮ ಆಮದು ಸುಂಕ ನೀತಿಯನ್ನು ಅಸಾಂವಿಧಾನಿಕ ಎಂದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಸುಪ್ರೀಂ ಆದೇಶದಿಂದ ನನಗೆ ಇನ್ನಷ್ಟು ಅಧಿಕಾರಗಳು ದೊರಕಿವೆ.

ರಫ್ತು ಮತ್ತು ಆಮದನ್ನು ನಿಯಂತ್ರಿಸಲು ನಾನು ಪರವಾನಗಿ ಪದ್ದತಿಯನ್ನು ಜಾರಿಗೆ ತರಬಹುದು’ ಎಂದು ಹೇಳಿದ್ದಾರೆ. ಅಲ್ಲದೆ, ‘ಕೋರ್ಟ್ ತೀರ್ಪಿನ ನೆಪದಲ್ಲಿ ನಮ್ಮೊಂದಿಗೆ ಆಟವಾಡಿದರೆ ಹೆಚ್ಚು ತೆರಿಗೆ ವಿಧಿಸಬೇಕಾಗುತ್ತದೆ’ ಎಂದು ವಿದೇಶಗಳಿಗೆ ಎಚ್ಚರಿಸಿದ್ದಾರೆ. ಈ ಬಗ್ಗೆ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಸುಪ್ರೀಂ ಕೋರ್ಟ್‌ ಅನ್ನು ಇನ್ನು ನಾನು ನಾನು ಕ್ಯಾಪಿಟಲ್ ಅಕ್ಷರದಲ್ಲಿ ಬರೆಯಲ್ಲ.

ಏಕೆಂದರೆ ಅದುಮಹತ್ವಕಳೆದುಕೊಂಡಿದೆ. ನಾನು ವಿಧಿಸಿದ್ದ ತೆರಿಗೆಯನ್ನು ರದ್ದು ಮಾಡುವ ಮೂಲಕ ಅದು ನನಗೆ ಆಕಸ್ಮಿಕವಾಗಿ ಮತ್ತು ಅರಿವಿಲ್ಲದೆ ಪರವಾನಗಿ ಪದ್ದತಿಯಂತಹ ಇನ್ನಷ್ಟು ಅಧಿಕಾರಗಳನ್ನು ಕೊಟ್ಟಂತಾಗಿದೆ. ಇದನ್ನು ಬಳಸಿಕೊಂಡು ನಾನು ವಿದೇಶಗಳ ವಿಷಯದಲ್ಲಿ ಭಯಾನಕ ಹೆಜ್ಜೆಗಳನ್ನು ಇಡಬಹುದು. ಪರವಾನಗಿಗೂ ಶುಲ್ಕವನ್ನು ಪಡೆಯುತ್ತೇನೆ’ ಎಂದು ಹೇಳಿದ್ದಾರೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಕಲಿ ಗನ್ ಇಟ್ಟು ಕೊಂಡು ಪ್ರಾಂಕ್ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ

ಬನ್ನಹಳ್ಳಿ ಶಾಲಾ ವಾರ್ಷಿಕೋತ್ಸವ:  ಸಾಂಸ್ಕೃತಿಕ ವೈಭವ ಮೆರೆದ ಚಿಣ್ಣರು

ಮೇ 1 ಬುದ್ಧ ಪೂರ್ಣಿಮೆ ; ಕರುಣಾಮೂರ್ತಿಗೆ ಕಾವ್ಯ ನಮನ

Leave a Comment