NEWS

ರೋಗಿ ಸೇರಿದಂತೆ ಏಳು ಜನರು ಪ್ರಯಾಣಿಸುತ್ತಿದ್ದ ಆ್ಯಂಬುಲೆನ್ಸ್‌ವೊಂದು ಪತನ

ಪಾಲನೆ ನ್ಯೂಸ್‌

ರಾಂಚಿ: ಏರ್ ಆಂಬ್ಯುಲೆನ್ಸ್ ಪತನ, 7 ಸಾವು ಜಾರ್ಖಂಡ್‌ನ ಛಾತ್ರಾ ಜಿಲ್ಲೆಯ ಸಿಮರಿಯಾ ಬಳಿ ನಡೆದಿದೆ. ರೆಡ್ ಬರ್ಡ್‌ ಏರ್‌ವೇಸ್‌ಗೆ ಸೇರಿದ ಏರ್ ಆ್ಯಂಬುಲೆನ್ಸ್ ಸೋಮವಾರ ರಾತ್ರಿ 7.11ಕ್ಕೆ ಸಂಜಯ್ ಕುಮಾರ್ ಎಂಬ ರೋಗಿಯನ್ನು ಹೊತ್ತು ರಾಂಚಿಯಿಂದ ದೆಹಲಿಗೆ ಹಾರಾಟ ಆರಂಭಿಸಿತು.

23 ನಿಮಿಷಗಳ ಬಳಿಕ ವಿಮಾನ ಎಟಿಸಿಯಿಂದ ಸಂಪರ್ಕ ಕಳೆದುಕೊಂಡಿತ್ತು. ವಿಮಾನಕ್ಕಾಗಿ ತೀವ್ರ ಶೋಧ ನಡೆಸಿದಾಗ ಸಿಮರಿಯಾ ಎಂಬಲ್ಲಿ ಅರಣ್ಯ ಪ್ರದೇಶದಲ್ಲಿ ವಿಮಾನ ಪತನಗೊಂಡಿರುವುದು ದೃಢಪಟ್ಟಿದೆ. ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಅವಘಡ ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, ಸಾವು, ನೋವಿನ ಮಾಹಿತಿ ಇನ್ನಷ್ಟೇ ದೃಢಪಡಬೇಕಿದೆ.

ಅಪಘಾತದಲ್ಲಿ ಶೇ.63ರಷ್ಟು ಸುಟ್ಟ ಗಾಯಕ್ಕೆ ತುತ್ತಾಗಿದ್ದ ಸಂಜಯ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಅವಘಡ ಸಂಭವಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿ ಪೈಲಟ್‌ಗಳಾದ ವಿವೇಕ್ ವಿಕಾಸ್ ಭಗತ್ ಮತ್ತು ಸವರಾಜ್‌ ದೀಪ್ ಸಿಂಗ್ ಹಾಗೂ ರೋಗಿಯ ಕುಟುಂಬಸ್ಥರಾದ ಅರ್ಚನಾ ದೇವಿ, ಧುರು ಕುಮಾರ್, ವಿಕಾಸ್ ಗುಪ್ತಾ ಮತ್ತು ಸಚಿನ್‌ ಮಿಶ್ರಾ ಇದ್ದರೆಂದು ತಿಳಿದು ಬಂದಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಎನ್ ಕೌಂಟರ್‌ : 14 ನಕ್ಸಲರ ಹತ್ಯೆ

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಜಿ. ಪಂ. ಸಿಇಓ ನಂದಿನಿ ಕೆ. ಆರ್. ಅನಿರೀಕ್ಷಿತ ಭೇಟಿ

ಎರಡು ದಿನಗಳಲ್ಲಿ 2 ಗಿನ್ನೆಸ್ ದಾಖಲೆ

Leave a Comment