NEWS

ಪಶ್ಚಿಮ ಬಂಗಾಳದಲ್ಲಿ ಶೇ. 92.72ರಷ್ಟು ಮತದಾನ

ಪಾಲನೆ ನ್ಯೂಸ್

ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ಗುರುವಾರ ಬರೋಬ್ಬರಿ ಶೇ. 92.72ರಷ್ಟು ಮತದಾನವಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ವಿವಾದ, ಅಲ್ಲಲ್ಲಿ ನಡೆದ ಹಿಂಸಾಚಾರದ ನಡುವೆಯೂ ಜನರು ಅತ್ಯುತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ್ದರು. ರಾಜ್ಯದ ಇತ್ತೀಚಿನ ಚುನಾವಣಾ ಇತಿಹಾಸದಲ್ಲಿಯೇ ಇದು ದಾಖಲೆ ಮತದಾನವಾಗಿದೆ.

ಮೊದಲ ಹಂತದಲ್ಲಿ ಬಂಗಾಳದ 16 ಜಿಲ್ಲೆಗಳ 152 ಕ್ಷೇತ್ರಗಳ 3.60 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 167 ಮಹಿಳೆಯರು ಸೇರಿದಂತೆ ಒಟ್ಟು 1,478 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ. ಅಲ್ಲಲ್ಲಿ ಹಿಂಸಾಚಾರ, ಅಭ್ಯರ್ಥಿಗಳ ಮೇಲೂ ದಾಳಿ
ಅಲ್ಲಲ್ಲಿ ಹಿಂಸಾಚಾರ, ಘರ್ಷಣೆ: ಚುನಾವಣೆ ಹೆಚ್ಚಾಗಿ ಶಾಂತಿಯುತವಾಗಿತ್ತು ಎಂದು ಆಯೋಗ ಹೇಳಿದ್ದರೂ, ಹಲವು ಜಿಲ್ಲೆಗಳಲ್ಲಿ ಘರ್ಷಣೆ, ಬೆದರಿಕೆ ಹಾಗೂ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಹಲವರ ಮೇಲೆ ದಾಳಿ ನಡೆದ ವರದಿಗಳು ಬಂದಿವೆ.


ಶೇ. 85 ವೋಟಿಂಗ್ತ ಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗುರುವಾರ ಮತದಾರರು ಭಾರಿ ಉತ್ಸಾಹದಿಂದ ಹಕ್ಕು ಚಲಾಯಿಸಿದ್ದು, ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತದಾನ ದಾಖಲಾಗಿದೆ. ರಾಜ್ಯದ 234 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 85.14ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗದ ತಿಳಿಸಿದೆ. 2011ರ ಚುನಾವಣೆಯಲ್ಲಿ ಶೇ. 78.29ರಷ್ಟು ಮತದಾನವಾಗಿದ್ದೇ ಈವರೆಗಿನ ಗರಿಷ್ಠ ದಾಖಲೆಯಾಗಿತ್ತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭಾರತ ಕಿರುಚಿತ್ರ ಸ್ಪರ್ಧೆ-2026

ತಮಿಳುನಾಡಿನ ರಾಜಕೀಯದಲ್ಲಿ ಹೊಸ ತಿರುವು

ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಆದೇಶ

Leave a Comment