NEWS

ಸಜಗೌರಿಂದ ವಿಶೇಷ ಉಪನ್ಯಾಸ

ಪಾಲನೆ ನ್ಯೂಸ್

ಮೈಸೂರು : ತಾಲ್ಲೂಕಿನ ದೊಡ್ಡಕಾನ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜಯಲಕ್ಷ್ಮೀಪುರಂನ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆಯುತ್ತಿರುವ ‘ಯೂತ್ ಫಾರ್ ಮೈ ಭಾರತ್’ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಾಹಿತಿ ಮತ್ತು ಸಂಸ್ಕೃತಿ ಚಿಂತಕರಾದ ಟಿ. ಸತೀಶ್ ಜವರೇಗೌಡ ಅವರು ‘ವಿದ್ಯಾರ್ಥಿ ಯುವಜನರು ಮತ್ತು ಭ್ರಷ್ಟಾಚಾರ ನಿರ್ಮೂಲನೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಫೆ. 6 ರಂದು ಸಂಜೆ 6 ಗಂಟೆಗೆ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ವೆಂಕಟೇಶ್ ವಹಿಸುವರು. ಮುಖ್ಯ ಅತಿಥಿಗಳಾಗಿ ಸ್ವಜನ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಎಸ್. ಶಿಶಿರಜಜನ್, ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಶ್ರೀ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮನೋರಮ ಪಾಲ್ಗೊಳ್ಳುವರು ಎಂದು ಎನ್.ಎಸ್.ಎಸ್. ಮುಖ್ಯ ಶಿಬಿರಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಗ್ರಾಮೀಣ ಮಟ್ಟದಲ್ಲಿ “ಅಕ್ಕರೆಯ ಅಂಗಳ” ಬೇಸಿಗೆ ಶಿಬಿರ – ಸಮಗ್ರ ಕಲಿಕೆಯ ಅವಕಾಶಕ್ಕೆ ಸಿಇಒ ಸೂಚನೆ

ಸಕ್ಕರೆ ನಗರಿಯಲ್ಲಿ ಹೂವಿನ ಲೋಕ: ಕೆ.ಆ‌ರ್.ನಂದಿನಿ

ಶಿವಗಂಗೆಯಲ್ಲಿ ಜಾತ್ರಾ ಮಹೋತ್ಸವ

Leave a Comment