NEWS

ವರನಟ ಡಾ. ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡಲು ಮನವಿ ಮಾಡಿ

ಪಾಲನೆ ನ್ಯೂಸ್

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ ಗೌರವ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಆಗ್ರಹಪೂರ್ವಕ ಮನವಿ ಪತ್ರವನ್ನು ಸಲ್ಲಿಸಬೇಕು ಎಂದು ಆಗ್ರಹಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಖಿಲ ಕರ್ನಾಟಕ ಡಾ. ರಾಜ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಎನ್.ಆರ್. ರಮೇಶ್ ಪತ್ರ ಬರೆದಿದ್ದಾರೆ.

ಈ ನೆಲದ ಅತ್ಯಂತ ಜನಪ್ರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರದಾರ ರಾಜ್ ಅವರು, ನೆಲ, ಜಲ, ಭಾಷೆಗೆ ಸಂಬಂಧಿಸಿದ ಹೋರಾಟಗಳ ನೇತೃತ್ವ ವಹಿಸಿ ಯಶಸ್ವಿಯಾಗಿದ್ದಾರೆ. ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಷಡ್ಯಂತ್ರ ವನ್ನೂ ತಪ್ಪಿಸಿದ್ದಾರೆ. ಇಂತಹ ಮಹಾನ್ ಚೇತನಕ್ಕೆ ಎಲ್ಲ ರೀತಿಯ ಗೌರವಗಳನ್ನು ಸಲ್ಲಿಸಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಚಾಮರಾಜನಗರ ತಾಲೂಕಿಗೆ ‘ಡಾ. ರಾಜ್‌ಕುಮಾರ್ ತಾಲೂಕು’ ಎಂದು ನಾಮಕರಣ, ಕೆಂಪೇಗೌಡ ರಸ್ತೆ ಮತ್ತು ಚಾಮರಾಜನಗರದ ಪ್ರಮುಖ ಸ್ಥಳದಲ್ಲಿ 100 ಅಡಿ ಎತ್ತರದ ಕಂಚಿನ ಪುತ್ಥಳಿ ಸ್ಥಾಪನೆ, ಕೆಂಪೇಗೌಡ ವಿಮಾನ ನಿಲ್ದಾಣದ ಸಾಂದರ್ಭಿಕ ಚಿತ್ರ ಈ ಕಂಠೀರವ ಸ್ಟುಡಿಯೋದ ಡಾ. ರಾಜ್ ಕುಮಾ‌ರ್ ಪುಣ್ಯಭೂಮಿಯಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವಂತೆ ಕೋರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್. ರಮೇಶ್ ಶುಕ್ರವಾರ ಮನವಿಪತ್ರ ಸಲ್ಲಿಸಿದರು. ಟರ್ಮಿನಲ್-2, ಮಾಗಡಿ ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣ, ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರನಗರಿಗೆ ರಾಜ್‌ಕುಮಾರ್ ಹೆಸರನ್ನು ಇಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. ರಾಜ್‌ಕುಮಾ‌ರ್ ಜನ್ಮದಿನವಾದ ಏ. 24 ಅನ್ನು ಅಂತಾರಾಷ್ಟ್ರೀಯ ಕಲಾವಿದರ ದಿನ ಎಂದು ಘೋಷಿಸಿ, ಸರ್ಕಾರದ ವತಿಯಿಂದ ಜಯಂತಿ ಆಚರಣೆ ಕಡ್ಡಾಯಗೊಳಿಸಬೇಕು. ಚಿತ್ರರಂಗದ ಕಾರ್ಮಿಕರಿಗೆ ಮತ್ತು ಅಶಕ್ತ ಪೋಷಕ ಕಲಾವಿದರಿಗೆ ಪ್ರತೀ ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಸಹಾಯಧನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪುಣ್ಯಭೂಮಿ ಅಭಿವೃದ್ಧಿಪಡಿಸಿ

ಬೆಂಗಳೂರು: ನಗರದಲ್ಲಿ ಕಂಠೀರವ ಸ್ಟುಡಿಯೋದ ರಾಜ್‌ಕುಮಾ‌ರ್ ಪುಣ್ಯಭೂಮಿಯಲ್ಲಿ ನಿರ್ಮಾಣಗೊಂಡಿರುವ ಡಾ.ರಾಜ್ ಕುಮಾರ್, ಕುಮಾರ್ ಪಾರ್ವತಮ್ಮ ಹಾಗೂ ಪುನೀತ್ ರಾಜ್ ಕುಮಾರ್ ಸ್ಮಾರಕಗಳನ್ನು ಅಭಿವೃದ್ಧಿಪಡಿಸುವಂತೆ ಕೋರಿ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟವು ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ. ಒಕ್ಕೂಟದ ಗೌರವಾಧ್ಯಕ್ಷ ಎನ್.ಆ‌ರ್. ರಮೇಶ್ ಅವರು ಶುಕ್ರವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಅಣ್ಣಾವ ಅಭಿಮಾನಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಸ್ಮಾರಕವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಮನವಿಪತ್ರವನ್ನು ಸಲ್ಲಿಸಿದರು. ಒಕ್ಕೂಟದ ಮನವಿಗೆ ಡಿಸಿಎಂ ಅವರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ದಿಲ್ಲಿಗೆ ನಾನು ಗಾಳಿ ಕುಡಿಯಲು ಬಂದಿಲ್ಲ: ಉಪಮುಖ್ಯಮಂತ್ರಿ

ಕ್ರೆಡಿಟ್ – ಐ ವರ್ಷಗೆ ನ್ಯಾಷನಲ್ ಅಚಿವರ್ಸ್ ಪ್ರಶಸ್ತಿ

ಎಸ್‌ಆರ್‌ಎಚ್ ಭರ್ಜರಿ ಗೆಲುವು

Leave a Comment