NEWS

ಜೈಲರ್ 2 ಚಿತ್ರದ ಮೂಲಕ ಸಿನಿರಂಗಕ್ಕೆ ನಟಿ ಮೇಘನಾ ರಾಜ್‌ ರೀ ಎಂಟ್ರಿ

Meghana Raj: ಪರದೆಯಿಂದ ದೂರವಿದ್ದ ನಟಿ ಮೇಘನಾ ರಾಜ್ ಮತ್ತೆ ಸಿನಿರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ.

ಪಾಲನೆ ನ್ಯೂಸ್

Meghana Raj: ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡ ಮೇಘನಾ ರಾಜ್, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದಾರೆ. ಮಗ ರಾಯನ್ ಅವರ ಜೀವನಕ್ಕೆ ಹೊಸ ಬೆಳಕು ತಂದಿದ್ದಾನೆ. ಈಗ ಅದೇ ಶಕ್ತಿಯೊಂದಿಗೆ ಮೇಘನಾ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ.

ನಟಿ ಮೇಘನಾ ರಾಜ್ ಸಿನಿಮಾ ಆಯ್ಕೆಯಲ್ಲಿ ಯಾವಾಗಲೂ ಚ್ಯೂಸಿ. ಸುಮಾರು 13 ವರ್ಷಗಳ ಬಳಿಕ ಅವರು ತಮಿಳು ಚಿತ್ರರಂಗಕ್ಕೆ ಮರಳಿದ್ದು, ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅವರು ಯಾರೂ ಊಹಿಸದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮೇಘನಾ ರಾಜ್ ಅವರ ಕುಟುಂಬಕ್ಕೆ ರಜನಿಕಾಂತ್ ಅವರ ಜೊತೆಗಿನ ಸಂಬಂಧ ಹೊಸದಲ್ಲ. 1978ರಲ್ಲಿ ಬಿಡುಗಡೆಯಾದ ‘ತಪ್ಪಿದ ತಾಳ’ ಚಿತ್ರದಲ್ಲಿ ರಜನಿಕಾಂತ್ ಜೊತೆ ಮೇಘನಾ ಅವರ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಅಭಿನಯಿಸಿದ್ದರು. ಈಗ ಅದೇ ಸೂಪರ್‌ಸ್ಟಾರ್ ಜೊತೆ ಮೇಘನಾ ಬಣ್ಣ ಹಚ್ಚಿರುವುದು ವಿಶೇಷವಾಗಿದೆ.

ನೆಲ್ಸನ್ ನಿರ್ದೇಶನದ ಈ ಆಕ್ಷನ್-ಕಾಮಿಡಿ ಸೀಕ್ವೆಲ್ ‘ಜೈಲರ್ 2’ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ. 2023ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾದ ಚಿತ್ರೀಕರಣದಲ್ಲಿ ಮೇಘನಾ ಈಗಾಗಲೇ ಭಾಗಿಯಾಗಿದ್ದಾರೆ.

ಸನ್ ಪಿಕ್ಚರ್ಸ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಕೂಡ ಈ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ‘ಸಂಗೀತಾ ಬಾರ್ ಅಂಡ್ ರೆಸ್ಟೋರೆಂಟ್’ ಸಿನಿಮಾದಲ್ಲೂ ಮೇಘನಾ ರಾಜ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

69 ವರ್ಷದ ಮಾಜಿ ಜಡ್ಜ್ ಗೆ ಕೋಟಿ ರೂ. ಧೋಖಾ

ಇಂಡುವಾಳು ಗ್ರಾ ಪಂ: 1,881 ಅಕ್ರಮ ಇ-ಖಾತಾ

ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 477ರಷ್ಟು ಭಾರಿ ಏರಿಕೆ

Leave a Comment