ಪಾಲನೆ ನ್ಯೂಸ್
ಕೋಲಾರ: ಸಂತ ಸರ್ವಜ್ಞ ಸರ್ವವನ್ನು ಅರಿತ ಜ್ಞಾನದ ಮೇರು ಪರ್ವತ. ಎಲ್ಲ ವಿಷಯಗಳ ಜ್ಞಾನ ಹೊಂದಿರುವಂತ ಮೇಧಾವಿಯಾಗಿದ್ದನು. ಯುಗ ಪುರುಷ ಬಸವಣ್ಣನ ನಂತರದಲ್ಲಿರುವ ಹಿರಿಯ ವಚನಗಾರ. ಸಮಾಜಕ್ಕೆ ನೀತಿ ರೀತಿಗಳ ಜೀವನ ಶೈಲಿ ಆಚಾರ ವಿಚಾರ ನಡೆನುಡಿಗಳ ಬಗ್ಗೆ ಮಾರ್ಗದರ್ಶನ ನೀಡಿದಂತ ಮಹಾದರ್ಶನಿಕ ಎಂದು ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ತಿಳಿಸಿದರು.
ನಗರದ ಸುವರ್ಣ ಭವನದಲ್ಲಿ ಸಂತ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಯವುದೇ ಜಾತಿ, ಮತ, ಧರ್ಮಗಳಿಗೆ ಸೀಮಿತವಾಗಿರಲಿಲ್ಲ. ಮಾನವನ ಬದುಕಿಗೆ ಪೂರ ಕವಾದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಕೋಲಾರದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಉದ್ಘಾಟಿಸಿದರು. ವಚನಗಳ ಮೂಲಕ ಮಾರ್ಗದರ್ಶನ ನೀಡಿರು ವುದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳ ವಡಿಸಿಕೊಂಡಾಗ ಮಾತ್ರ ಸಾರ್ಥಕತೆಯ ಬದುಕು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ಕುಂಬಾರ ಸಮುದಾಯದ ಯುವ ಅಧ್ಯಕ್ಷ ಡಾ.ನಾಗರಾಜ್ ಮಾತನಾಡಿ, ಸಂತ ಸರ್ವಜ್ಞ ಜಯಂತಿ ಕಳೆದ 2013 ರಿಂದ ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತಿದೆ. ಕುಂಬಾರ ಸಮುದಾಯವು ಅತಿಸೂಕ್ಷ್ಮ ವರ್ಗಕ್ಕೆ ಸೇರಿದ ಸರಳ ಸೌಮ್ಯವಾದ ಗುಂಪಿಗೆ ಸೇರಿದಂತೆ ಅತಿ ಕಡಿಮೆ ಸಂಖ್ಯೆ ಹೊಂದಿರುವ ಸಮಾಜ 2ಎ ವರ್ಗಕ್ಕೆ ಸೇರಿದೆ. ಆದರೆ ಇದರಲ್ಲಿ 118 ಉಪ ಜಾತಿಗಳು ಸೇರ್ಪಡೆಯಾಗಿರುವುದರಿಂದ ಕುಂಬಾರ ಸಮುದಾಯವು ಸಾಮಾಜಿಕ ನ್ಯಾಯದಿಂದ ವಂಚಿತಗೊಂಡಿದೆ. ಈ ಸಮುದಾಯ ವಿಶೇಷವಾಗಿ 2ಎ(1) ಎಂದು ನಮೂಧಿಸಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ಕುಂಬಾರ ಸಮುದಾಯದ ವಿದ್ಯಾರ್ಥಿ ನಿಲ ಯದ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ, ನಗರದ ಸರ್ವಜ್ಞ ಉದ್ಯಾನವನದಲ್ಲಿನ ಸರ್ವಜ್ಞಪುತ್ಥಳಿಕೆಯ ಮೇಲ್ಪಾವಣಿ ಹಾಳಾಗಿದ್ದು, ಈವರೆಗೆ ದುರಸ್ತಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

