ಪಾಲನೆ ನ್ಯೂಸ್
ಮಂಡ್ಯ: 1.ಇಂದು ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ 2025-26 ನೇ ಸಾಲಿನ ವಾರ್ಷಿಕ ಸಾಲದ ಯೋಜನೆ ಅಡಿಯಲ್ಲಿ ಸಾಲ ವಿತರಣೆಯಲ್ಲಿ ಒಟ್ಟು ರೂ.9372 ಕೋಟಿ ಗುರಿಯನ್ನು ನಿಗಧಿ ಪಡಿಸಲಾಗಿತ್ತು. ಅದರಂತೆ ರೂ. 11481 ಕೋಟಿ ಸಾಲ ವಿತರಣೆಯನ್ನು ಮಾಡಿ ಶೇ. 123% ಗುರಿಯನ್ನು ಸಾಧಿಸಿದ ಕಾರಣ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಧನೆಯನ್ನು ಮುಂದುವರಿಸಬೇಕು ಎಂದು ತಿಳಿಸಿದರು.
2.ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಯನ್ನುಉತ್ತೇಜಿಸಲು ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕಿನ ಅಧಿಕಾರಿಗಳು ಒಟ್ಟುಗೂಡಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮಾತನಾಡಿ PMFME ಯೋಜನೆಯು 2025-26 ನೇ ಸಾಲಿನಲ್ಲಿ ನೀಡಲಾದ 250 ಘಟಕಗಳ ಗುರಿಗೆ 91 ಘಟಕಗಳಿಗೆ ಮಾತ್ರ ಸಾಲ ಮಂಜೂರಾಗಿರುತ್ತದೆ ಅದರನ್ವಯ ಜಿಲ್ಲೆಯು ರಾಜ್ಯದಲ್ಲಿ27 ನೇ ಸ್ಥಾನದಲ್ಲಿದ್ದು, ಮಾರ್ಚ್ ಅಂತ್ಯದೊಳಗೆ ಬ್ಯಾಂಕ್ ಹಂತದಲ್ಲಿರುವ ಉಳಿಕೆ 48 ಅರ್ಜಿಗಳಿಗೆ ಸಾಲ ಮಂಜೂರು ಮಾಡಿದ್ದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಹಕಾರಿಯಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ಬ್ಯಾಂಕ್ ಗಳ ಹಂತದಲ್ಲಿ ಬಾಕಿ ಉಳಿದ 48 ಅರ್ಜಿಗಳಿಗೆ ತಕ್ಷಣವೇ ಸಾಲ ಮಂಜೂರು ಮಾಡಬೇಕಾಗಿ ಸೂಚಿಸಿದರು.

PMFME ಯೋಜನೆಯಡಿ ಸಹಾಯಧನ ಬಿಡುಗಡೆಯಾಗಿರುವ ರೈತರಿಗೆ ಸಾಲ ಮಂಜೂರಾದ ವರ್ಷಗಳ ನಂತರ ಬ್ಯಾಂಕ್ ಖಾತೆಗೆ ಬಿಡುಗಡೆಯಾದ ಸಹಾಯಧನದ ಮೊತ್ತವನ್ನು ಫಲಾನುಭವಿ ಖಾತೆಗೆ ಹೊಂದಾಣಿಕೆ ಮಾಡಲು ಜಿಲ್ಲೆಯ ಕೆಲವು ಬ್ಯಾಂಕ್ ಗಳು ಕೃಷಿ ಇಲಾಖೆಯ ಕನ್ಸೆಂಟ್ ಪತ್ರವನ್ನು ಖಡ್ಡಾಯವಾಗಿ ಸಲ್ಲಿಸಲು ತಿಳಿಸುತ್ತಿರುವುದು ಕಂಡುಬಂದಿದ್ದು, ಸದರಿ ಯೋಜನೆಯಡಿ ಮಾರ್ಗಸೂಚಿಯನ್ವಯ ಸಹಾಯಧನದ ಮೊತ್ತವನ್ನು ಫಲಾನುಭವಿ ಖಾತೆಗೆ ಹೊಂದಾಣಿಕೆ ಮಾಡಲು ಯಾವುದೇ ಕನ್ಸೆಂಟ್ ಪತ್ರವನ್ನು ಪರಿಗಣಿಸದೇ ಸಹಾಯಧನ ಹೊಂದಾಣಿಕೆ ಮಾಡಬಹುದಾಗಿ ಸೂಚಿಸಲಾಯಿತು.
3.ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನಾ ಹಾಗೂ ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆಗಳ ದಾಖಲಾತಿಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮವಾಗಿದ್ದು ಆದರೆ ನಗರ ಪ್ರದೇಶಗಳಲ್ಲಿ ದಾಖಲಾತಿಗಳು ಕಡಿಮೆ ಮಟ್ಟದಲ್ಲಿ ಆಗಿರುವ ಕಾರಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಘಟಕ (DUDC) ರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ದಾಖಲಾತಿಗಳನ್ನು ಹೆಚ್ಚಿಸಲು ಕ್ರಮ ವಹಿಸುವಂತೆ ಸೂಚಿಸಿದರು ಹಾಗೂ ಕಳೆದ ವರ್ಷದ ಪ್ರತಿ ಮಾಹೆಯಲ್ಲೂ ನಡೆಸಿದ ಅಭಿಯಾನದ ಪರಿಣಾಮವಾಗಿ ರಾಜ್ಯದಲ್ಲೆಯೇ ಪ್ರಥಮ ಸ್ಥಾನಕ್ಕೆ ಬರಲು ಕಾರಣವಾಗಿತ್ತು. ಆದರೆ ಪ್ರಸ್ತುತ ಪ್ರಗತಿಯು ತೀರ ನಿರಾಶದಾಯಕವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಅರ್ಹ ಜನರಿಗೆ ದಾಖಲಾತಿ ಮಾಡಿಸಲು ಪ್ರತಿ ಮಾಹೆಯು ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಮುಖ್ಯವಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆದಾರ ನೌಕರರು, ಹೊರಗುತ್ತಿಗೆ ನೌಕರರು ಸೇರಿದಂತೆ ಎಲ್ಲರನ್ನು ಈ ಯೋಜನೆಗೆ ಒಳಪಡಿಸಬೇಕೆಂದು ಸೂಚಿಸಿದರು.

4.ಕೆನರಾ ಬ್ಯಾಂಕಿನ ಅರಕೆರೆ, ಗಣಗೂರು, ಬಸರಾಳು ಮತ್ತು ಕೋಟೆಬೆಟ್ಟ ಬ್ರಾಂಚ್ ಗಳಲ್ಲಿ ಮೂಲಭೂತ ಸೌಕರ್ಯಗಳು & ಸ್ಟ್ರಾಂಗ್ ರೂಮ್ ಇಲ್ಲದ ಕಾರಣ ಶಾಖೆಯನ್ನು ಬೇರೆಡೆ ವರ್ಗಾವಣೆ ಮಾಡಲು ಮನವಿ ಸಲ್ಲಿಸಲಾಯಿತು. ಮನವಿಯನ್ನು ಪರಿಗಣಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬ್ಯಾಂಕಿನ ಫೋಟೋ ಚಿತ್ರಣವನ್ನು ಒಳಗೊಂಡ ಹಾಗೂ ಸ್ಥಳಾಂತರಗೊಳಿಸಲು ಇರುವ ಕಾರಣಗಳನ್ನು ಒಳಗೊಂಡ ವರದಿಯನ್ನು ನೀಡಬೇಕು ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರು ಅರಕೆರೆ, ಗಣಗೂರು ಶಾಖೆ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಬೇಕು ಇದಾದ ನಂತರ ಮುಂದಿನ ಸಭೆಯಲ್ಲಿ ವರದಿಯನ್ನು ಆಧರಿಸಿ ಅನುಮತಿ ನೀಡುವ ಬಗ್ಗೆ ಚರ್ಚಿಸಲಾಗುವುದೆಂದು ಜಿ.ಪಂ. ಸಿಇಒ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಅರುಣ್-ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರು, ಡಾ.ನವೀನ್ ಕುಮಾರ್ -ಪ್ರಾದೇಶಿಕ ವ್ಯವಸ್ಥಾಪಕರು,ಬ್ಯಾಂಕ್ ಆಪ್ ಬರೋಡಾ , ಶ್ರೀಮತಿ ವಿಜಯಶ್ರೀ-ವ್ಯವಸ್ಥಾಪಕರು, ಭಾರತೀಯ ರಿಸರ್ವ್ ಬ್ಯಾಂಕ್ , ಶ್ರೀಮತಿ ಹರ್ಷೀತ-ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು,ನಬಾರ್ಡ್ ಹಾಗೂ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳ ವ್ಯವಸ್ಥಾಪಕರುಗಳು ಹಾಜರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
