ಪಾಲನೆ ನ್ಯೂಸ್
ಮಂಡ್ಯ : ಮಾರ್ಚ್ 15 ರೊಳಗೆ ತೆರಿಗೆ ವಸೂಲಾತಿಯಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ರವರು ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದ ಅವರು ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ ತಾಲ್ಲೂಕುವಾರು ಗುರಿ ನಿಗದಿಪಡಿಸಿದ್ದು ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸುವಂತೆ ಎಚ್ಚರಿಕೆ ನೀಡಿದರು. ಶೇ. 70 ಕ್ಕಿಂತ ಕಡಿಮೆ ತೆರಿಗೆ ವಸೂಲಾತಿ ಮಾಡಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಮುಂದಿನ ಸಭೆಯೊಳಗೆ ಪ್ರಗತಿ ಸಾಧಿಸಲು ಸೂಚಿಸಿದರು.
ಪ್ರತಿದಿನ ಮನೆ ಮನೆ ಭೇಟಿ ಮಾಡಿ ತೆರಿಗೆ ವಸೂಲತಿ ಮಾಡಲು ಕ್ರಮವಹಿಸಬೇಕು ಎಂದರು. ಶೇ.100 ರಷ್ಟು ತೆರಿಗೆ ವಸೂಲಾತಿ ಮಾಡಿರುವ ಪಾಂಡವಪುರ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಗಳ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಇ-ಕೆವೈಸಿ- ಕಡಿಮೆ ಪ್ರಗತಿ ಸಾಧಿಸಿರುವ ಹಾಗೂ ನರೇಗಾ ಯೋಜನೆಯ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯವಾಗಿದ್ದು , ತಾಂತ್ರಿಕ ಸಮಸ್ಯೆ ಇರುವ ಫಲಾನುಭವಿಗಳ ವಿವರವನ್ನು ಸಂಬಂಧಪಟ್ಟ ಅಧಿಕಾರಿರರಿಗೆ ಗಮನಕ್ಕೆ ತಂದು ಇ ಕೆವೈಸಿ ಪೂರ್ಣಗೊಳಿಸಲು ತಿಳಿಸಿದರು.
ರಾಜಧನ ಪಾವತಿಗೆ ಸಂಬಂದಿಸಿದ ಪ್ರಕರಣಗಳ ತೀರುವಳಿಗೆ ಕ್ರಮವಹಿಸಿ: ಸಾಮಾಜಿಕ ಪರಿಶೋಧನಾ ವರದಿಯಲ್ಲಿ ಬಿಂಬಿತವಾದ ರಾಜಧನ ಪಾವತಿ ಮಾಡಿಲ್ಲದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪ್ರತಿದಿನ ಅಡಾಕ್ ಸಮಿತಿ ಸಭೆಯನ್ನು ಆಯೋಜಿಸಿ ಬಾಕಿ ಇರುವ ಸಾಮಾಜಿಕ ಪರಿಶೋಧನಾ ವರದಿಯಲ್ಲಿನ ಆಕ್ಷೇಪಣಾ ಪ್ರಕರಣಗಳನ್ನು ಎಲ್ಲಾ ಪ್ರಕರಣಗಳನ್ನು ತೀರುವಳಿಗೊಳಿಸಲು ಸೂಕ್ತ ಕ್ರಮವಹಿಸುವಂತೆ ತಿಳಿಸಿದರು.
ಅಭಿಯಾನ ಮಾದರಿಯಲ್ಲಿ ಸ್ಥಳೀಯ ಲೆಕ್ಕ ಪರಿಶೋಧನಾ ಕಂಡಿಕೆಗಳನ್ನು ತೀರುವಳಿ ಮಾಡಿ: 100 ದಿನಗಳ ಅಭಿಯಾನದ ಆಯೋಜಿಸಿ ಕಂಡಿಕೆಗಳನ್ನು ತೀರುವಳಿ ಮಾಡಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು.
ಖಾಲಿ ಇರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದನ್ವಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಗ್ರಂಥಾಲಯ ಮೇಲ್ವಿಚಾರಕರಿಗೆ ವ್ಯತ್ಯಾಸ ಭತ್ಯೆ ಪಾವತಿಸುವ ಸಂಬಂಧ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಗ್ರಂಥಾಲಯ ಕರ ಪಾವತಿಸಿರುವ ಬಗ್ಗೆ ವರದಿಯನ್ನು ಜಿಲ್ಲಾ ಪಂಚಾಯತ್ ಗೆ ಸಲ್ಲಿಸಲು ಸೂಚಿಸಿದರು.

ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಬಾಕಿ ನೀಡಬೇಕಾಗಿರುವ ವೇತನವನ್ನು 15 ದಿನಗಳೋಳಗಾಗಿ ಪಾವತಿಸುವಂತೆ ಸೂಚಿಸಿದರು ಹಾಗೂ ತಂತ್ರಾಂಶದಲ್ಲಿ ಬಾಕಿ ಇರುವ ವೇತನ ಪಾವತಿ ಬಗ್ಗೆ ತಾಲ್ಲೂಕು ಪಂಚಾಯತ್ ನಿಂದ ಸೂಕ್ತ ಸಮಜಾಯಿಷಿಯೊಂದಿಗೆ ದೃಢೀಕರಣ ಸಲ್ಲಿಸಲು ತಿಳಿಸಿದರು.
ವೈಯಕ್ತಿಕ ಗೃಹ ಶೌಚಾಲಯಗಳ ಬಾಕಿ ಇರುವ ಜಿಯೋ ಟ್ಯಾಗ್ ಗಳನ್ನು ಪೂರ್ಣಗೊಳಿಸುವುದು ಹಾಗೂ ಪ್ರೋತ್ಸಾಹ ಧನ ಪಾವತಿಸಲು ಕ್ರಮವಹಿಸುವುದು. ಶುದ್ದ ಕುಡಿಯುವ ನೀರಿನ ಘಟಕದ ದುರಸ್ಥಿ ಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ನಾಳೆಯೊಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ತಿಳಿಸಿದರು. ಕೊಳವೆ ಬಾವಿ ರಕ್ಷಣಾ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಕೆ.ಆರ್ ಪೇಟೆ, ಮಳವಳ್ಳಿ, ಪಾಂಡವಪುರ, ಮಂಡ್ಯ, ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿರವರಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಉಪಕಾರ್ಯದರ್ಶಿ(ಆಡಳಿತ) ಶಿವಲಿಂಗಯ್ಯ, ಲೆಕ್ಕಾಧಿಕಾರಿಗಳಾದ ಜ್ಯೋತಿ, ಸಹಾಯಕ ಕಾರ್ಯದರ್ಶಿ(ಆಡಳಿತ) ರವೀಂದ್ರ, ಸಹಾಯಕ ಯೋಜನಾಧಿಕಾರಿ (ಡಿ.ಆರ್.ಡಿ.ಎ) ಶ್ರೀಹರ್ಷ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
