ಪಾಲನೆ ನ್ಯೂಸ್
ನವದೆಹಲಿ: ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಕೇಸ್ ತೀವ್ರ ಹೆಚ್ಚಳವಾಗಿದೆ ಎಂದು ಲಾನ್ಸೆಟ್ ಅಂಕಾಲಜಿಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. 1990ರಿಂದ 2023ರ ಅವಧಿಯಲ್ಲಿ ಈ ಕಾಯಿಲೆಯಿಂದ ಸಂಭವಿಸುವ ಸಾವುಗಳ ಸಂಖ್ಯೆಯೂ ಶೇ. 352ರಷ್ಟು ಹೆಚ್ಚಳವಾಗಿದೆ. ಬಹಿರಂಗ ಪ್ರಕರಣಗಳು ದಾಖಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಧ್ಯಯನದಲ್ಲಿ ಭಾರತದಲ್ಲಿ 2023ರಲ್ಲಿ ಸುಮಾರು 2.03 ಲಕ್ಷ ಹೊಸ ಸ್ತನ ಕ್ಯಾನ್ಸರ್ ಸಾವಿಗೀಡಾಗಿದ್ದಾರೆ.

2050ರ ವೇಳೆಗೆ ಜಾಗತಿಕವಾಗಿ ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 35 ಲಕ್ಷಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಸುಧಾರಿತ ತಪಾಸಣೆ ಮತ್ತು ಚಿಕಿತ್ಸೆಯಿಂದ ಸಾವಿನ ಪ್ರಮಾಣ ತಗ್ಗುತ್ತಿದೆ. ಆದರೆ, ಭಾರತದಂಥ ಕಡಿಮೆ-ಮಧ್ಯಮ ಆದಾಯದ ದೇಶಗಳಲ್ಲಿ ತಡವಾದ ರೋಗನಿರ್ಣಯ ಮತ್ತು ಚಿಕಿತ್ಸೆ ಕೊರತೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ. ತಡೆಗಟ್ಟುವಿಕೆ ಹೇಗೆ?: ಧೂಮಪಾನ ತ್ಯಜಿಸುವುದು, ನಿಯಮಿತ ವ್ಯಾಯಾಮ, ಕೆಂಪು ಮಾಂಸದ ಸೇವನೆ ತಗ್ಗಿಸುವುದು ಮತ್ತು ಆರೋಗ್ಯಕರ ದೇಹದ ತೂಕ ಕಾಯ್ದುಕೊಳ್ಳುವ ಮೂಲಕ ಈ ಕಾಯಿಲೆಯನ್ನು ಗಣನೀಯವಾಗಿ ತಡೆಯಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
