NEWS

ಹೊಸ ವರ್ಷ ವ್ಯಸನ ಮುಕ್ತ ರಾಜ್ಯವಾಗಲಿ : ಡಾ. ಚಂದ್ರಶೇಖರ್ ಆಶಯ

ಹೊಸ ವರ್ಷಚಾರಣೆ – ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಪಾಲನೆ ನ್ಯೂಸ್

ಮಂಡ್ಯ: ಯುವ ಜನತೆ ನನ್ನ ರೀತಿಯ ವ್ಯಾಸನಗಳಿಗೆ ಈಡಾ ಗುತ್ತಿರುವುದು ಆತಂಕದ ವಿಷಯವಾಗಿದೆ. ಡ್ರಗ್ಸ್ ತಂಬಾಕು ಮೊದಲಾದ ದುವ್ಯ ರ್ವಸನಗಳಿಂದ  ಮುಕ್ತಾರಾಗಿ ಸಮಾಜದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಯುವ ಜನತೆ ಸಾಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಖ್ಯಾತ ವೈದ್ಯ ಡಾ. ಚಂದ್ರಶೇಖರ್ ಅಭಿಪ್ರಾಯಿಸಿದರು.

ನಗರದ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀ ರಂಜಿನಿ ಕಲಾವೇದಿಕೆ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಜೈ ಕರ್ನಾಟಕ ಪರಿಷತ್, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಫಾಲ್ ಆಯೋಜಿಸಿದ್ದ  ಹೊಸ ವರ್ಷಾಚರಣೆ , ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಸಾಂಸ್ಕೃಕ ಪ್ರಜ್ಞೆ ಬಹಳ ಮುಖ್ಯ, ಇದರಿಂದಾಗಿ ನಾಕಾರಾತ್ಮಕ ಚಿಂತನೆಗಳು ದೂರವಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ, ದೇಶದ  ಬಗ್ಗೆ ಅಭಿಮಾನ ಜಾಗೃತಿ ಹೊಂದಲು  ಸ್ಫೂರ್ತಿಯಾಗುತ್ತದೆ  ಭವಿಷ್ಯದ ಭಾರತ ಉಕೃಷ್ಣತೆಯನ್ನು ಹೊಂದಲು ಸತ್ ಚಿಂತನೆಗಳು ಮನುಷ್ಯನಲ್ಲಿ ಬಹಳ ಪರಿಣಾಮ ಬಿರುತ್ತವೆ ಎಂದರೆ ಅವ್ರು ವೇದಿಕೆ ನಿರಂತ್ರವಾಗಿ ಇಂಥಾ ಗುಣ ಮಟ್ಟದ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನಿಯ ವಿಚಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ವರ್ಷದ ಶುಭಾಷಯವನ್ನು ಲಯನ್ ಬಿ. ಎಂ ಅಪ್ಪಾಜಪ್ಪ ಸಲ್ಲಿಸಿ ಜನತೆಗೆ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ, ಖ್ಯಾತ ವಕೀಲ ಪಿ.ಎಂ ಸೋಮಶೇಖರ್  ಅವರಿಗೆ  ವೇದಿಕೆ ವತಿಯಿಂದ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿ ಅಭಿನಂದಿಸಲಾಯಿತು.

ಸಮಾರಂಭದಲ್ಲಿ ವಿಖ್ಯಾತ ಮನೋ ವೈದ್ಯ ಡಾ. ಟಿ. ಎಸ್. ಸತ್ಯನಾರಾಯಣ ರಾವ್ ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ಕೆ. ಟಿ. ಶಂಕರೇ ಗೌಡ ಮಾತನಾಡಿದರು.

ಸಾಧಕರ ಕುರಿತು ಜೈ ಕರ್ನಾಟಕ ಪರಿಷತ್ ನ ರಾಜ್ಯಧ್ಯಕ್ಷ  ಡಾ. ನಾರಾಯಣ್ ಅಭಿನಂದನಾ ಭಾಷಣ ಮಾಡಿದರು.ಇದೇ ಸಂದರ್ಭದಲ್ಲಿ  ಶ್ರೀ ವರಾಹ ವಿಠ್ಠಲ ದಾಸರು, ಡಾ. ಅನುಪಮಾ ವಿವೇಕಾನಂದ, ಹಾಗೂ ಪೂಜ್ಯನ್ ಸಾರತ್ಯ ಅವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಶಂಕರ ಸಂಗೀತ ಶಾಲೆಯ ಮಕ್ಕಳು ನಡೆಸಿಕೊಟ್ಟರು ಗಾಯನ, ಕೀಬೋರ್ಡ್  ವಾದನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಖ್ಯಾತ ಗಾಯಕ ಕಲಾಶ್ರೀ ವಿದ್ಯಾಶಂಕರ್ ಮತ್ತು ತಂಡ ನಡೆಸಿಕೊಟ್ಟ ಭಕ್ತಿ ಸಂಗೀತ ಎಲ್ಲರ ಮನಸುರೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲೈ. ಕೆ. ಟಿ. ಹನುಮಂತು ವಹಿಸಿ ಮಾತನಾಡಿ ಇವತ್ತು ಜನತೆ ಅನೇಕ ದೂರವ್ಯಸನಗಳಿಗೆ  ತುತ್ತಾಗುತ್ತಿರುವುದು ಆತಂಕಕಾ ರಿಯಾದ ವಿಷಯವಾಗಿದೆ. ಇವೆಲ್ಲರಿಂದ ಹೊರಗೆ ಬರಲ್ಲ ಬೇಕಾದರೆ ಸಾಂಸ್ಕೃತಿಕತೆಯನ್ನು ಬೆಳೆಸಿಕೊಂಡು ಸತ್ ಚಿಂತನೆಗಳಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಿಸಿದ ಅವರು ಉತ್ತಮ ಕಲಾವಂತಿಕೆ ಮೈಗೂಡಿಸಿಕೊಂಡಾಗ ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದು ಕಾರ್ಯಕ್ರಮದ ಬಗ್ಗೆ ಅಭಿಮಾನಿಸಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯ ಡಾ. ಬಿ.ಕೆ. ಸುರೇಶ್, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ನ ಅಧ್ಯಕ್ಷ ನರಸೀ ಸ್ವಾಮಿ, ಕಾರ್ಯಧ್ಯಕ್ಷ ಡಾ. ಅಶ್ವಿನ್ ನಾರಾಯಣ್, ಕನ್ನಿಕಾ ಶಿಲ್ಪಾ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್.ಬಿ. ರಾಮಕೃಷ್ಣ, ಸಂಭ್ರಮ ಫಾರ್ಮಸಿ ಕಾಲೇಜಿನ ಅಧ್ಯಕ್ಷ ಸ್ವಾಮಿ ಭಾಗವಹಿಸಿದ್ದರು.

ರಮೇಶ್ ಬಡಿಗೇರ್ ಪ್ರಾರ್ಥಿಸಿ, ವೇದಿಕೆಯ ಅಧ್ಯಕ್ಷ, ಕಾರ್ಯಕ್ರಮ ದ ಆಯೋಜಕ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿದರು.

Related posts

ರಾಜಿನಾಮೆ ನೀಡಿದ ಬಂಗಾಳ ರಾಜ್ಯಪಾಲ

ರಾಘವೇಂದ್ರ ಸ್ವಾಮೀಜಿಯವರು ಸರ್ವಕಾಲಿಕ್ಕೂ ಪವಾಡಪುರುಷ ; ರಾಜೇಶ್ ಪಳನಿ

ಗೃಹಬಳಕೆ ಅಡುಗೆ ಅನಿಲದ ಕುರಿತು ಆತಂಕ ಬೇಡ

Leave a Comment