NEWS

ಸರ್ಕಾರಿ ಶಾಲೆಯ 10 ವಿದ್ಯಾರ್ಥಿಗಳು ಮತ್ತು 5 ಜನ ಪ್ರಗತಿಪರ ರೈತರಿಗೆ ಹೆಲಿ ಟೂರಿಸಂ ನ ಹೆಲಿಪ್ಯಾಡ್ ನಲ್ಲಿ ಉಚಿತ ಪ್ರಯಾಣ.

ಫೆ. 21 ಮತ್ತು 22 ರಂದು ಬೂದನೂರು ಉತ್ಸವ ಕಾರ್ಯಕ್ರಮ – ಪಿ. ರವಿಕುಮಾರ್

ಪಾಲನೆ ನ್ಯೂಸ್

ಫೆ.20 ರಂದು ಹೆಲಿ ಟೂರಿಸಂ ಅನ್ನು ಆಯೋಜಿಸಲಾಗಿದ್ದು ಸರ್ಕಾರಿ ಶಾಲಾ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಮತ್ತು 5 ಪ್ರಗತಿಪರ ರೈತರಿಗೆ ಹೆಲಿ ಟೂರಿಸಂನ ಹೆಲಿಪ್ಯಾಡ್ ನಲ್ಲಿ ಉಚಿತ ಪ್ರಯಾಣವನ್ನು ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಶಾಸಕರಾದ ಪಿ. ರವಿಕುಮಾರ್ ಅವರು ಹೇಳಿದರು.

ಮಂಡ್ಯ: 14 ಇಂದು ಬೂದನೂರುನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಬೂದನೂರು ಒಂದು ಐತಿಹಾಸಿಕ ಕ್ಷೇತ್ರವಾಗಿದ್ದು 15ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಹಳೆಯ ಬೂದನೂರುನಲ್ಲಿ ವಾಸ್ತುಶಿಲ್ಪಗಳು ಕುರುಹುಗಳುಮತ್ತು ಹಲವು ಶಾಸನಗಳು ದೊರಕಿವೆ ಎಂದು ತಿಳಿಸಿದರು.

ಬುದುನೂರಿನಲ್ಲಿ ದಕ್ಷಿಣ ಭಾರತದ ಎರಡನೇ ದೇವಸ್ಥಾನವಾಗಿ ಅನಂತಪದ್ಮನಾಭ ದೇವಸ್ಥಾನ ಪ್ರಸಿದ್ಧಿಯನ್ನು ಪಡೆದಿದ್ದು ಕಾಶಿ ವಿಶ್ವನಾಥ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು.

ಫೆ.21 ರಂದು ಬೂದನೂರಿನ ಉತ್ಸವವನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬೂದನೂರು ಉತ್ಸವವನ್ನು 2ನೇ ಬಾರಿ ಮಾಡುತ್ತಿದ್ದು 21 ಮತ್ತು 22 ರಂದು ಉತ್ಸವ ಮಾಡಿದ್ದು ಕಾರ್ಯಕ್ರಮವನ್ನು ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಫೆಬ್ರವರಿ 17ರಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದ್ದು ಆಕಾಂಕ್ಷಿಗಳು ಭಾಗವಹಿಸಬಹುದು ಸ್ಪರ್ಧೆಯಲ್ಲಿ ವಿಜಯಶಾಲಿಯಾದವರಿಗೆ ವಿಶೇಷ ಬಹುಮಾನಗಳನ್ನು ವಿತರಿಸಬೇಕು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಸಮಧಾನಾಕರಬಹುಮಾನವನ್ನು ವಿತರಿಸುವಂತೆ ಸೂಚಿಸಿದರು.

ಫೆಬ್ರವರಿ 18 ಮತ್ತು 19ರಂದು ಕಸಬಾ ಹೋಬಳಿಯ 30 ಗ್ರಾಮಗಳಿಗೆ ಎಲ್ಲಾ ಮಹಿಳೆಯರಿಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ “ಮನೆಗೊಂದು ರಂಗೋಲಿ ಮನೆಗೊಂದು ಗ್ಯಾರಂಟಿ” ಎನ್ನುವ ನಿಟ್ಟಿನಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಿಸಬೇಕು ಎಂದು ತಿಳಿಸಿದರು

ಫೆಬ್ರವರಿ 18ರಂದು ಕ್ರೀಡಾ ಇಲಾಖೆ ವತಿಯಿಂದ ಹಗ್ಗ ಜಗ್ಗಾಟ, ಲೆಮನ್ & ಸ್ಪೋನ್, ಕಬಡ್ಡಿ ಖೋ ಖೋ ವಿವಿಧ ರೀತಿಯ 10 ಕ್ರೀಡೆಗಳನ್ನು ವಿಶ್ವಮಾನವ ಶಾಲೆಯಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಫೆಬ್ರವರಿ 20 ರಂದು ಹೊಸ ಬೂದನೂರಿನ ದೇವಸ್ಥಾನದ ಆವರಣದಲ್ಲಿ ಆಹಾರಮೇಳ ಮತ್ತು ಸಂಜೆ ಅಗ್ನಿಶಾಮಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಮತ್ತು
ಬೂದನೂರು ಉತ್ಸವವನ್ನು ಹಳೆ ಬೂದನೂರುನಿಂದ ಮೆರವಣಿಗೆ ಮಾಡಲಾಗುತ್ತದೆ ಎಲ್ಲಾ ಗ್ರಾಮದ ಗ್ರಾಮಸ್ಥರು ಉತ್ಸವಕ್ಕೆ ಮೆರುಗು ತರುವಂತೆ ಕಾರ್ಯನಿವಹಿಸಬೇಕು ಎಂದು ತಿಳಿಸಿದರು.

ಫೆ.21 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗುರುಕಿರಣ್ ರವರ ತಂಡದಿಂದ ಮತ್ತು ಫೆ. 22 ರಂದು ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂಜೆ ರಾಜೇಶ್ ಕೃಷ್ಣನ್ ರವರ ತಂಡ ಮತ್ತು ಅಲೋಕ್ ಆರ್. ರವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು

ಜಿಲ್ಲಾ ಬೂದನೂರು ಉತ್ಸವವು ಪ್ರವಾಸಿಗರ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಮಾಡಲಾಗಿದ್ದು ಸಾರ್ವಜನಿಕರು ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು.ದೇಶ -ವಿದೇಶ ಪ್ರವಾಸಿಗರಿಗೆ ಬೂದನೂರು ದೇವಸ್ಥಾನದ ಇತಿಹಾಸ ಮತ್ತು ಮೆರುಗನ್ನು ಪಸರಿಸವಂತೆ ಪ್ರಚಾರ ಮಾಡಬೇಕು ಎಂದು ಹೇಳಿದರು.

ಜಿಲ್ಲೆಗೆ 25 ಕೋಟಿ ಹಣ ಬಿಡುಗಡೆ ಮಾಡಿ ಜಿಲ್ಲಾ ಚಿತ್ರಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಗಳನ್ನು ಮಾಡಲಾಗುತ್ತದೆ ಮಂಡ್ಯ ಜಿಲ್ಲೆಯ ಬೂದನೂರು ಗ್ರಾಮಕ್ಕೆ 10 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು

ಬೂದನೂರು ಉತ್ಸವದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಬೇಕು ಹಳ್ಳಿಯಲ್ಲಿ ದೊಡ್ಡ ಮಟ್ಟದಲ್ಲಿ ಉತ್ಸವವನ್ನು ಮಾಡುತ್ತಿರುವಿದು ಜಿಲ್ಲೆಗೆ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಅಭಿಪ್ರಾಯ ಪಟ್ಟರು

ಸಭೆಯಲ್ಲಿ ಆರಕ್ಷಕ ಅಧೀಕ್ಷಕರಾದ ತಿಮ್ಮಯ್ಯ ಮತ್ತು ಶಿವಮೂರ್ತಿ ರವರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಾರ್ಚ್ 7 ರಂದು ಅಸ್ಪೃಶ್ಯತಾ ನಿವಾರಣೆ ಕುರಿತ ವಿಚಾರ ಸಂಕಿರಣ

ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಿ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ : ದಾಸಪ್ಪ

Leave a Comment