NEWS

ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ

ಪಾಲನೆ ನ್ಯೂಸ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರ ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದವಾಗಿರುತ್ತೇನೆ. ಸಿಎಂ ಬದಲಾವಣೆ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ವರಿಷ್ಠರ ಭೇಟಿಗೆ ಕರೆ ಬಂದರೆ ಹೊಸದಿಲ್ಲಿಗೆ ತೆರಳುತ್ತೇನೆ ಎಂದು ತಿಳಿಸಿದರು.

ಈ ಸಂಬಂಧ ಬೇರೆ ಯಾರೇ ಮಾತನಾಡಿದರೂ ಅದು ಅವರ ವೈಯಕ್ತಿಕ ಹೇಳಿಕೆ. ಐದು ವರ್ಷವೂ ಮುಂದುವರಿಯಲು ಸೂಚನೆ ನೀಡಿದಲ್ಲಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷದ ತಂತ್ರ ನಡೆಯಲಿಲ್ಲವೆ?: ದಾವಣೆಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ವಿರೋಧ ಪಕ್ಷದವರ ತಂತ್ರ ಫಲಿಸಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಯಾವ ತಂತ್ರ ಮಾಡಬಲ್ಲರು? ಅವರದ್ದೇನಿದ್ದರೂ ಕುತಂತ್ರ, ಕುತಂತ್ರಿಗಳು ಎಂದು ಲೇವಡಿ ಮಾಡಿದರು.

ಮತಗಳ್ಳತನ ನಡೆದಿದೆ: ಶೃಂಗೇರಿ ಕ್ಷೇತ್ರದಲ್ಲಿ ಜೀವರಾಜ್ ಗೆಲುವು ಸಾಧಿಸಿರುವ ಸಂಬಂಧ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಹಾಗೂ ಅಧಿಕಾರಿಗಳು ಸೇರಿ ಮತಪತ್ರಗಳನ್ನು ತಿದ್ದಿದ್ದಾರೆ. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.

ಮತ ಎಣಿಕೆ ವೇಳೆ 12 ಮಂದಿ ಏಜೆಂಟ್‌ಗಳು ಇರುತ್ತಾರೆ. ಅವರ ಮುಂದೆ ಅಂಚೆ ಮತ ಪತ್ರಗಳನ್ನು ಪ್ರದರ್ಶಿಸಲಾಗಿರುತ್ತದೆ. ಹೀಗಿರುವಾಗ ಅವುಗಳು ಅಸಿಂಧುವಾಗಲು ಹೇಗೆ ಸಾಧ? ಇದು ಬಿಜೆಪಿ ಅಭ್ಯರ್ಥಿ ಜೀವರಾಜ್ ಹಾಗೂ ಅಧಿಕಾರಿಗಳು ಸೇರಿ ಮಾಡಿರುವ ಸಂಚು ಎಂದರು.ಸಚಿವ ಶಿವರಾಜ ತಂಗಡಗಿ, ಶಾಸಕರಾದ ಕೆ. ಹರೀಶ್‌ ಗೌಡ, ಎ.ಆ‌ರ್. ಕೃಷ್ಣಮೂರ್ತಿ,ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಶಿವಣ್ಣ ಮುಂತಾದವರು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ

ಗುತ್ತಿಗೆದಾರನಿಗೆ ಮೋಸ ಉದ್ಯೋಗ ಕೊಡಿಸುವುದಾಗಿ ₹20 ಲಕ್ಷ ವಂಚನೆ

ಒಂದು ಲೋಕಾರೂಢಿಯ ಗಾದೆ ಮಾತಿನ ಸುತ್ತಾ……

Leave a Comment