NEWS

ಏ.14ರಂದು ಅಂಬೇಡ್ಕರ್ ಜಯಂತಿ

ಪಾಲನೆ ನ್ಯೂಸ್

ಮೈಸೂರು: ಅಶೋಕಪುರಂ ಆದಿಕರ್ನಾಟಕ ಮಹಾಸಂಸ್ಥೆ, ದೊಡ್ಡಗರಡಿ ಮತ್ತು ಚಿಕ್ಕಗರಡಿ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏ.14ರಂದು ಸ೦ವಿಧಾನ ಶಿಲ್ಪಿ ಡಾ.ಬಿ. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ನಗರ ದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹೆಲಿ ಕಾಪ್ಟರ್‌ನಲ್ಲಿ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು. ಹಾಗೆಯೇ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ನಗರಪಾಲಿಕೆ ಮಾಜಿ ಮಹಾಪೌರ ಪುರು ಷೋತ್ತಮ್ ತಿಳಿಸಿದರು.


ಹೆಲಿಕಾಪ್ಟ‌ರ್ ಮೇಲಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ; ಮೈಸೂರಿನಲ್ಲಿ ಬೃಹತ್ ಮೆರವಣಿಗೆ: ಪುರುಷೋತ್ತಮ್ ಮಾಹಿತಿ
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ಸುಮಾರು 10 ಸಾವಿರ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ. ಈ ಮೆರವಣಿಗೆಗೆ ಅಶೋಕಪುರಂ ತಾ. ಬಿ. ಆರ್. ಅಂಬೇಡ್ಕರ್ ಉದ್ಯಾನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇನ್ನಿತರರು ಹಾಜರಿರಲಿದ್ದಾರೆ ಎಂದರು.


ವಿವಿಧ ಕಲಾ ತಂಡಗಳೊಡನೆ ಸಾಗುವ ಮೆರವಣಿಗೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ಸಾಧನೆ ತಿಳಿಸುವ ಸ್ತಬ್ಧಚಿತ್ರಗಳು ಇರಲಿವೆ. ಈ ಭವ್ಯ ಮೆರವಣಿಗೆಯು ನಗರದ ಅಶೋಕ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಸಾಗಿ ಪುರಭವನ ಬಳಿಯ ಅಂಬೇ ಡ್ಕರ್ ಪ್ರತಿಮೆ ಬಳಿಗೆ ತಲುಪಲಿದೆ. ಅಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದು ಹೇಳಿದರು.


ಇಂದು ಅಂಬೇಡ್ಕರ್ ಜಯಂತಿ ಆಚರಣೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಅವರ ವಿಚಾರ ಧಾರೆಗಳು ವಿಶ್ವಕ್ಕೇ ಹರಡಿವೆ. ಅಂಬೇಡ್ಕರ್ ವಿಚಾರ ಧಾರೆಗಳನ್ನು ಮತ್ತಷ್ಟು ಪಸರಿಸುವ ಉದ್ದೇಶ ದೊಂದಿಗೆ ಅಶೋಕಪುರಂ ಮತ್ತು ಗಾಂಧಿನಗರದಲ್ಲಿ ತಿಂಗಳ ಪೂರ್ತಿ ಅಂಬೇಡ್ಕರ್ ಹಬ್ಬ ಆಚರಣೆಗೆ ಚಿಂತನೆ ನಡೆದಿದೆ ಎಂದ ಅವರು, ಅವರು, ಅಂಬೇಡ್ಕರ್ ಜಯಂತಿಯ ಭವ್ಯ ಮೆರವಣಿಗೆಯಲ್ಲಿ ಮದ್ಯಸೇವಿಸಿ ಯಾರೂ ಪಾಲ್ಗೊಳ್ಳ ಬಾರದು.
ಧೂಮಪಾನ ಮಾಡದಂತೆ ಮನವೊಲಿ ಸಲಾಗುತ್ತಿದೆ. ಇದಕ್ಕೆ ಅಂಬೇಡ್ಕರ್ ಜೀವನವೇ ಪ್ರೇರಣೆಯಾಗಿದೆ ಎಂದರು. ಮುಖಂಡರಾದ ಸುನಿಲ್, ಶಿವಸ್ವಾಮಿ, ಮಹೇಶ್, ನಾಗರಾಜು, ಜೆ.ಜೈಕುಮಾ‌ರ್, ಪುಟ್ಟರಾಜು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖದ ಪಠ್ಯಪುಸ್ತಕ ನಿಷೇಧ ಮುದ್ರಿತ

ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ ಕೆ.ಆರ್ .ಗೆ  ಪಿಹೆಚ್.ಡಿ ಪದವಿ

ವಿಶೇಷ ಚೇತನರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು: ಡಾ. ಕುಮಾರ

Leave a Comment