NEWS

ರಾಜಸ್ಥಾನದ ನಿವೃತ್ತ ಯೋಧ 138 ಪದವಿಧರ

ಪಾಲನೆ ನ್ಯೂಸ್

ಜೈಪುರ: ರಾಜಸ್ಥಾನದ ಮಾಜಿ ಸೈನಿಕರೊಬ್ಬರು 138 ಪದವಿಗಳು, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ರಾಜಸ್ಥಾನದ ಝುಂಝುನು ಜಿಲ್ಲೆಯ ದಶರಥ್ ಸಿಂಗ್ ಇತ್ತೀಚೆಗೆ ಇಗೋದಲ್ಲಿ ವೈದಿಕ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 58 ವರ್ಷದ ಸಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಇದುವರೆಗೆ 11 ವಿಶ್ವದಾಖಲೆ ಬರೆದಿದ್ದಾರೆ. ದಶರಥ ಸಿಂಗ್ 1988 ರಲ್ಲಿ ಸೇನೆಗೆ ಸೇರ್ಪಡೆಯಾಗಿ 2004ರಲ್ಲಿ ನಿವೃತ್ತರಾಗಿದ್ದರು. ಅವರು ಸೈನ್ಯದಲ್ಲಿದ್ದಾಗಲೇ ಶಿಕ್ಷಣದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದರು.

ನಾನು ನಿವೃತ್ತಿಯಾದ ಬಳಿಕ ವಿವಿಧ ಪದವಿಗಳನ್ನು ಅಧ್ಯಯನ ಮಾಡಿದ್ದೇನೆ. ಇದುವರೆಗೆ 3 ಪಿಎಚ್‌ಡಿ, ಏಳು ಪದವಿಗಳು, 46 ಸ್ನಾತಕೋತ್ತರ ಪದವಿಗಳು, 23 ಡಿಪ್ಲೋಮಾಗಳು, ಮಿಲಿಟರಿ ಅಧ್ಯಯನಕ್ಕೆ ಸಂಬಂಧಿಸಿದ 7 ಪದವಿಗಳು ಹಾಗೂ ವಿವಿಧ ವಿಷಯಗಳಲ್ಲಿ 52 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಿದ್ದೇನೆ. ನಾನು ಕೇವಲ ಪದವಿಗಳನ್ನು ಸಂಗ್ರಹಿಸಲು ಅಧ್ಯಯನ ಮಾಡುತ್ತಿಲ್ಲ, ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದ್ದು ನಿವೃತ್ತ ಸೈನಿಕರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ದಶರಥ ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ

ರಷ್ಯಾದಿಂದ ಕಚ್ಚಾ ತೈಲ ಖರೀದಿಗೆ ಭಾರತಕ್ಕೆ 30 ದಿನಗಳವರೆಗೆ ವಿನಾಯಿತಿ: ಅಮೆರಿಕ

ಪ್ರತಿ ಸೋಮವಾರ ತಹಸೀಲ್ದಾರ್, ಇಓ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ ಕುಡಿಯುವ ನೀರಿನ ಸಮನ್ವಯ ಸಮಿತಿ ಸಭೆ ನಡೆಸಲು ಜಿ.ಪಂ. ಸಿಇಓ ಸೂಚನೆ

Leave a Comment