ಪಾಲನೆ ನ್ಯೂಸ್
ಚೀನಾ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿಯ ಕಾರ್ಕಳ ತಾಲೂಕಿನ ಆಯುಶ್ ಶೆಟ್ಟಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಚೀನಾದ ಶಿ ಯುಕಿ ವಿರುದ್ದ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಟೂರ್ನಿಯಲ್ಲಿ ವಿಶ್ವ ನಂ.1, ವಿಶ್ವ ನಂ.4, ವಿಶ್ವ ನಂ.7 ಶಟ್ಲರ್‌ಗಳ ವಿರುದ್ಧ ಗೆದ್ದರೂ ಭಾನುವಾರ ನಡೆದ ಫೈನಲ್‌ನಲ್ಲಿ 20 ವರ್ಷದ ಆಯುಶ್ ವಿಶ್ವ ನಂ.2 ಆಟಗಾರ ಯು ಕಿ ವಿರುದ್ದ 8-21, 10-21 ನೇರ ಗೇಮ್ ಗಳಲ್ಲಿ ಪರಾಭವಗೊಂಡರು.
ಸೋಲಿನ ಹೊರತಾಗಿಯೂ ಆಯುಶ್ ತಮ್ಮ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು ಸಾಧಿಸಿದ್ದಾರೆ. ಬ್ಯಾಡ್ಮಿಂಟನ್ ಏಷ್ಯಾ ಕೂಟದಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1965ರಲ್ಲಿ ದಿನೇಶ್ ಖನ್ನಾ ಅವರು ಚಿನ್ನ ಗೆದ್ದಿದ್ದರು. ಆ ಬಳಿಕ ಕೂಟದಲ್ಲಿ ಫೈನಲ್‌ಗೇರಿದ ಮೊದಲ ಭಾರತೀಯ ಆಯುಶ್. 2023ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಆಯುಶ್, ಅದೇ ವರ್ಷ ಒಡಿಶಾ ಮಾಸ್ಟರ್ನನಲ್ಲಿ ರನ್ನರ್-ಅಪ್ ಆಗಿದ್ದರು. ಇತ್ತೀಚೆಗೆ ಯುಎಸ್ ಓಪನ್‌ನಲ್ಲಿ ಚಾಂ ಪಿಯನ್ ಆಗಿ ಹೊರಹೊಮ್ಮಿದ್ದರು.

ಬೆಳ್ಳಿ ವಿಜೇತ ಆಯುಶ್ ಮತ್ತು ಚಿನ್ನ ವಿಜೇತ ಶಿ ಯು ಕಿ ಭಾರತಕ್ಕೆ ಸಿಕ್ಕ 19ನೇ ಪದಕ 1962ರಿಂದ ನಡೆಯುತ್ತಿರುವ ಈ ಕೂಟದಲ್ಲಿ ಭಾರತ 19ನೇ ಪದಕ ಗೆದ್ದಿದೆ. 1965ರಲ್ಲಿ ಸಿಂಗಲ್ಸ್‌ನಲ್ಲಿ ದಿನೇಶ್ ಖನ್ನಾ, 2023ರಲ್ಲಿ ಪುರುಷ ಡಬಲ್ಸ್‌ನಲ್ಲಿ ಸಾತ್ವಿಕ್ -ಚಿರಾಗ್ ಚಿನ್ನ ಗೆದ್ದಿದ್ದಾರೆ. ಉಳಿದಂತೆ 1 ಬೆಳ್ಳಿ(ಆಯುಶ್), 16 ಕಂಚಿನ ಪದಕಗಳು ಲಭಿಸಿವೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
