NEWS

ಮತ್ತೆ ಯುದ್ಧ ಭೀತಿ!

ಪಾಲನೆ ನ್ಯೂಸ್

ಇಸ್ಲಾಮಾಬಾದ್‌ : 21 ತಾಸಿನ ಮ್ಯಾರಥಾನ್ ಮಾತುಕತೆ: ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವಿನ 40 ದಿನಗಳ ಸಂಘರ್ಷಕ್ಕೆ ಕಡಿವಾಣ ಹಾಕುವ ಸಲುವಾಗಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಬುಧವಾರ ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿತ್ತು. ಇದರ ಭಾಗವಾಗಿ ಇರಾನ್ ಹಾಗೂ ಅಮೆರಿಕವು ಇಸ್ಲಾಮಾಬಾದ್‌ನಲ್ಲಿ ಶನಿವಾರದಿಂದ ಸಂಧಾನ ಮಾತುಕತೆ ಆರಂಭಿಸಿತ್ತು. ಅಮೆರಿಕದಿಂದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನೇತೃತ್ವದ ನಿಯೋಗ ಹಾಗೂ ಇರಾನ್‌ನಿಂದ ಸ್ಪೀಕರ್ ಮೊಹಮ್ಮದ್ ಬಘರ್ ಕಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ನಿಯೋಗ ಪಾಲ್ಗೊಂಡಿತ್ತು.

ಮಾತುಕತೆ ವೇಳೆ ಹೋರ್ಮುಜ್ ಜಲಸಂಧಿ, ಅಣು ಯೋಜನೆ, ಯುದ್ಧ ಪರಿಹಾರ ಮತ್ತು ನಿರ್ಬಂಧಗಳನ್ನು ತೆರವುಗೊಳಿಸುವುದು ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು. ಪಾಕಿಸ್ತಾನದ ಮೂಲಗಳ ಪ್ರಕಾರ ಕೆಲವು ವಿಚಾರಗಳು ಚರ್ಚೆಗೆ ಬಂದಾಗ ಎರಡೂ ನಿಯೋಗಗಳ ನಡುವೆ ಮುಂದಿಟ್ಟಿದ್ದರು. ಅದಕ್ಕೆ ನಾವು ಒಪ್ಪಲಿಲ್ಲ. ಹೀಗಾಗಿ ಮಾತುಕತೆ ಅರ್ಧದಲ್ಲೇ ಅಂತ್ಯಗೊಂಡಿತು ಎಂದು ಹೇಳಿದೆ.


ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯ್ ಅವರು, ರಾಜತಾಂತ್ರಿಕತೆಗೆ ಯಾವುದೇ ಅಂತ್ಯವಿಲ್ಲ. ಮಾತುಕತೆ ವಿಫಲವಾಗಿದ್ದರೂ ಎರಡೂ ಕಡೆಯವರು ಕೆಲ ವಿಚಾರದಲ್ಲಿ ಒಮ್ಮತಾಭಿಪ್ರಾಯಕ್ಕೆ ಬಂದಿದ್ದರು. ಆದರೆ, 2-3 ಪ್ರಮುಖ ವಿಚಾರದಲ್ಲಿ ಏಕಾಭಿಪ್ರಾಯಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮಾತುಕತೆಯು ಒಪ್ಪಂದವಾಗಿ ಬದಲಾಗುವಲ್ಲಿ ವಿಫಲವಾಯಿತು ಎಂದು ತಿಳಿಸಿದ್ದಾರೆ.


ಮಾತುಕತೆ ವೈಫಲ್ಯಕ್ಕೆ ಇರಾನ್ ನಡೆಯೇ ಕಾರಣ ಎಂದು ಆರೋಪಿಸಿರುವ ಅಮೆರಿಕ ಉಪಾಧ್ಯಕ್ಷ ಕ್ಷಜೆ.ಡಿ. ಜೆ ವ್ಯಾನ್ಸ್ ಅವರು, ಇರಾನ್ ತನ್ನ ಅಣ್ವಸ್ತ್ರದ ಕನಸು ಕೈಬಿಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಇರಾನ್ ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಈ ಮಾತುಕತೆ ವಿಫಲವಾಯಿತು. ಅಮೆರಿಕದ ಕಡೆಯಿಂದ ಅಂತಿಮ ಹಾಗೂ ಅತ್ಯುತ್ತಮ ಆಫರ್ ಅನ್ನು ಅವರ ಮುಂದಿಡಲಾಗಿತ್ತು ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ಸಂಧಾನ ಸಭೆ ಬಿಸಿಬಿಸಿ ಚರ್ಚೆಯೂ ನಡೆದಿದೆ. ಯುದ್ಧದ ಮೂಲಕ ಸಾಧಿಸಲಾಗದ ಬೇಡಿಕೆ: ಸಂಧಾನ ವೈಫಲ್ಯಕ್ಕೆ ನಂತರ ಸ್ಪಷ್ಟಿಕರಣ ನೀಡಿರುವ ಇರಾಕ್, ಮಾತುಕತೆ ನಡುವೆಯೇ ಅಮೆರಿಕ ನಿಯೋಗ ಎದ್ದುಹೋಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜನವರಿ 26ರಂದು 77ನೇ  ಗಣರಾಜ್ಯೋತ್ಸವ ದಿನಾಚರಣೆ

ಮಲ್ಯ ಬ್ರಿಟನ್‌ನಿಂದ ಹೊರಹೋಗಲು ನಿರ್ಬಂಧವಿದೆ

ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಆದೇಶ

Leave a Comment