NEWS

ಭಾರತದ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರ ಶಿವಾಜಿ ಮಹಾರಾಜರು

ಬದುಕಿನಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಕಾರ್ಯ ತಂತ್ರಗಳನ್ನು ಅಳವಡಿಸಿಕೊಂಡು ಯಶಸ್ಸು ಕಾಣಬಹುದು -ಬಿ.ಸಿ ಶಿವಾನಂದ ಮೂರ್ತಿ

ಪಾಲನೆ ನ್ಯೂಸ್

ಮಂಡ್ಯ: ಭಾರತದ ಕಲೆ ಸಾಹಿತ್ಯ ಸಂಸ್ಕೃತಿ ಪರಂಪರೆ ಪರಕಿಯರ ದಾಳಿಗೆ ತುತ್ತಾದ ಸಂದರ್ಭದಲ್ಲಿ ಜನಿಸಿ ಭಾರತದ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರ ಶಿವಾಜಿ ಮಹಾರಾಜರು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ ಅವರು ಹೇಳಿದರು.

ಇಂದು ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಗರದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಕಲಾಮಂದಿರದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಛತ್ರಪತಿ ಶಿವಾಜಿ ಮಹಾರಾಜರು 1630 ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು. ದಾದಾಜಿ ಕೊಂಡದೇವ ಅವರು ಛತ್ರಪತಿ ಶಿವಾಜಿಯವರಿಗೆ ಯುದ್ಧ ಕೌಶಲ್ಯದ ತರಬೇತಿಯನ್ನು ನೀಡಿದರು. ಅವರ ತಾಯಿ ಪ್ರತಿನಿತ್ಯವೂ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಿ ಶಿವಾಜಿ ಮಹಾರಾಜರಲ್ಲಿ ಧರ್ಮ, ನ್ಯಾಯದ ಚಿಂತನೆಯನ್ನು ಬಿತ್ತಿದರು ಎಂದು ಹೇಳಿದರು.

ಶಿವಾಜಿ ಮಹಾರಾಜರಿಂದ ನಾವು ನಿಷ್ಠೆ, ಪ್ರಾಮಾಣಿಕತೆ ಮತ್ತು ಕಾರ್ಯ ತಂತ್ರಗಳನ್ನು ಅಳವಡಿಸಿಕೊಂಡು ಯಶಸ್ಸು ಕಾಣಬಹುದು ಎಂಬುದನ್ನು ಕಲಿಯಬೇಕು. ಇನ್ನೂ ಹೆಚ್ಚಿನ ಜನರು ಶಿವಾಜಿ ಕುರಿತಾಗಿ ವಿಚಾರ, ಚಿಂತನೆಗಳನ್ನು ತಿಳಿಯಬೇಕು ಎಂದು ಹೇಳಿದರು.

ಶಿವಾಜಿ ಮಹಾರಾಜರು ಒಬ್ಬ ಸಾಮಾನ್ಯ ರಾಜ್ಯ ಪುತ್ರನಾಗಿ ಜನಿಸಿ ಭಾರತದ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿ ಒಂದು ಸಾಮ್ರಾಜ್ಯವನ್ನೆ ನಿರ್ಮಿಸಿದರು. ಇವತ್ತಿಗೂ ಮರಾಠರು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಎಲ್ಲರೂ ಒಗ್ಗಟ್ಟಾಗಿ ಹಬ್ಬದಂತೆ ಆಚರಿಸುತ್ತಾರೆ ಎಂದು ಹೇಳಿದರು.

ಭಾರತ ಪರಕಿಯರ ದಾಳಿಯನ್ನು ಉಗ್ರ ಖಂಡಿಸಿ ಗೆರಿಲ್ಲಾ ಮಾದರಿ ಯುದ್ಧ ತಂತ್ರದಿಂದ ಭಾರತವನ್ನು ಪರಕಿಯರನ್ನು ಸೋಲಿಸಿ ಶತ್ರುವಿನ ಎದೆಯಲ್ಲಿ ಭೀತಿ ಹುಟ್ಟಿಸಿದರು. ಹಿಂದೂ ಧರ್ಮದ ರಕ್ಷಣೆಗಾಗಿ ದೆಹಲಿ ಸುಲ್ತಾನರನ್ನು ಎದುರಿಸಿದರು. ಶಿವಾಜಿ ಮನೆತನ 250 ವರ್ಷಗಳಿಗಿಂತ ಹೆಚ್ಚು ಕಾಲ ಸುದೀರ್ಘ ಆಡಳಿತ ನಡೆಸಿದ ಸಾಮ್ರಾಜ್ಯವನ್ನು ಸ್ಥಾಪಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ಪಿ ಪ್ರಕಾಶ್, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ಜಿಲ್ಲಾ ಮರಾಠ ಸಮಾಜದ ಅಧ್ಯಕ್ಷ ಸುರೇಶ್, ಜಿಲ್ಲಾ ಮರಾಠ ಸಮಾಜದ ಉಪಾಧ್ಯಕ್ಷ ಅಂಬೊಜಿ, ಖಜಾಂಚಿ ರಾಜೇಶ್, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಅನುಪಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಫೆ. 16 ಮತ್ತು 17ರಂದು ಗಾಂಧಿ ಗ್ರಾಮ ಭಾರತ ಮರಳಿಹಳ್ಳಿಗೆ ಗಾಂಧೀಜಿ ಮತ್ತು ಗ್ರಾಮಸ್ವರಾಜ್ ಕುರಿತು ಚಿಂತನ -ಮಂಥನ ಕಾರ್ಯಕ್ರಮ

ಅತ್ಯಾಚಾರ-ಹತ್ಯೆ ಮೂವರು ಅಪರಾಧಿಗಳಿಗೆ ಮರಣದಂಡನೆ

ಸಕ್ಕರೆ ನಗರಿಯಲ್ಲಿ ಹೂವಿನ ಲೋಕ: ಕೆ.ಆ‌ರ್.ನಂದಿನಿ

Leave a Comment