NEWS

ಚಿನ್ನ-ಬೆಳ್ಳಿ ದರ ಜಿಗಿತ

ಪಾಲನೆ ನ್ಯೂಸ್

ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಯುದ್ದದ ಭೀತಿಯ ನಡುವೆ, 2026-27ರ ಹೊಸ ಹಣಕಾಸು ವರ್ಷದಲ್ಲೂ ಚಿನ್ನ-ಬೆಳ್ಳಿ ದರಗಳು ಏರುಗತಿಯಲ್ಲಿಯೇ ಸಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಕಳೆದ 2025-26ರ ಸಾಲಿನಲ್ಲಿ ಬೆಳ್ಳಿ ಬೆಲೆ ಶೇ. 142ರಷ್ಟು ದರ ಏರಿಕೆ ಮತ್ತು ಚಿನ್ನದ ಬೆಲೆ ಶೇ. 67ರಷ್ಟು ಮುನ್ಸೂಚನೆ ಭರ್ಜರಿ ಏರಿಕೆ ಕಂಡಿದೆ. ಮುಂಬರುವ ವರ್ಷದಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 2.75 ಲಕ್ಷದಿಂದ 3.5 ಲಕ್ಷ ರೂ.ವರೆಗೆ ತಲುಪುವ ನಿರೀಕ್ಷೆ ಇದೆ. ಸೌರಶಕ್ತಿ ಮತ್ತು ಎಲೆಕ್ಟಿಕ್ ವಾಹನಗಳ ವಲಯದಲ್ಲಿ ಬೆಳ್ಳಿಗೆ ಇರುವ ಭಾರಿ ಬೇಡಿಕೆ ಹಾಗೂ ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡುತ್ತಿರುವುದು ಬೆಲೆ ಏರಿಕೆಗೆ ಪೂರಕವಾಗಲಿದೆ. ಅಮೆರಿಕದ ಫೆಡರಲ್ ರಿಸವ್ ೯ನ ಬಡ್ಡಿ ದರ ನೀತಿ ಮತ್ತು ಡಾಲರ್ ಮೌಲ್ಯದ ಏರಿಳಿತಗಳು ಆಗಾಗ ಬೆಲೆಯಲ್ಲಿ ಸ್ವಲ್ಪ ಇಳಿಕೆ ತರಬಹುದಾದರೂ, ಒಟ್ಟಾರೆ ಟ್ರೆಂಡ್ ಲಾಭದಾಯಕವಾಗಿಯೇ ಇರಲಿದೆ ಎಂದು ಚಾಯ್ಸ್ ಬೋಕಿಂಗ್‌ನ ವಿಶ್ಲೇಷಕರು ತಿಳಿಸಿದ್ದಾರೆ.

ಚಿನ್ನ-ಬೆಳ್ಳಿ ದರ ಜಿಗಿತ : ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ-ಬೆಳ್ಳಿ ಬೆಲೆಗಳು ಗಣನೀಯವಾಗಿ ಏರಿವೆ. ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 2,300 . 2, 1,53,800 . ತಲುಪಿದೆ. ಶುಕ್ರವಾರ ಇದು 1,51,500 ರೂ. ಇತ್ತು. ಬೆಳ್ಳಿ ದರ ಪ್ರತಿ ಕೆಜಿಗೆ 5,000 ರೂ. ಜಿಗಿತ ಕಂಡಿದ್ದು, 2,42,000 ರೂ.ಗೆ ಏರಿದೆ. ಶುಕ್ರವಾರ 2 2,37,000 .

ಚೇತರಿಕೆ ಕಂಡ ಷೇರು ಮಾರುಕಟ್ಟೆ

ನವದೆಹಲಿ: ಕದನ ವಿರಾಮ ಪ್ರಯತ್ನದ ವರದಿಗಳ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಇಳಿಕೆಯಾದ ಪರಿಣಾಮ, ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಚೇತರಿಕೆ ಕಂಡಿದೆ. ವಹಿವಾಟಿನ ಮಧ್ಯೆ 887 ២៩ ಜಿಗಿತ ಕಂಡಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 787.30 50 (8. 1.07) 20 ៩ 74,106.85 0. 2 255.15 0៩ (. 1.12) ಏರಿಕೆಯೊಂದಿಗೆ 22,968.250 ಮಟ್ಟದಲ್ಲಿ ಸ್ಥಿರವಾಯಿತು. ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 108.3 ಡಾಲರ್‌ಗೆ ಇಳಿದಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಡಿ. 30 ರಂದು ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಮದ್ದೂರು: ನಾಲಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಸಮಾಲೋಚನಾ ಸಭೆ

ತಲಕಾವೇರಿ ಸ್ವಚ್ಛತಾ ಕಾರ್ಯ

Leave a Comment