NEWS

ಏ.8ರಂದು ಇಲ್ಲವೇ ಏ. 10ರಂದು ದ್ವಿತೀಯ ಪಿಯು ರಿಸಲ್ಟ್

ಪಾಲನೆ ನ್ಯೂಸ್

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಕುರಿತು ಮಂಗಳವಾರ ಸ್ಪಷ್ಟತೆ ಸಿಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಮೂಲಗಳು ಖಚಿತಪಡಿಸಿವೆ. ಚುನಾವಣಾ ಆಯೋಗ ಅನುಮತಿ ನೀಡಿದರೆ ಏ.8ರಂದು ಇಲ್ಲವೇ ಏ. 10ರಂದು ಫಲಿತಾಂಶ ಇಂದು ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಫಲಿತಾಂಶ ಪ್ರಕಟಿಸಲು ಮಂಡಳಿಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಂಡಳಿ ವತಿಯಿಂದ ಯಾವುದೇ ಅಡ್ಡಿ ಇಲ್ಲ. ಆದರೆ, ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫಲಿತಾಂಶ ವಿಳಂಬವಾಗುತ್ತಿದೆ. ಶಿಷ್ಟಾಚಾರ ಪಾಲನೆಗಾಗಿ ಫಲಿತಾಂಶ ವಿಚಾರವಾಗಿ ಪರೀಕ್ಷಾ ಮಂಡಳಿಯು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆಯೋಗವು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಮಂಗಳವಾರ ಸಂಜೆ ವೇಳೆಗೆ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ಹೀಗಾಗಿ, ಮಂಗಳವಾರ ಅಧಿಕೃತವಾಗಿ ಫಲಿತಾಂಶ ಪ್ರಕಟಣೆ ಕುರಿತು ಸ್ಪಷ್ಟತೆ ಸಿಗಲಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮನಸ್ಸು ಅರಳಿಸುವ ಓದಿನ ಪ್ರಯೋಜನ ಅಪಾರ: ಪ್ರೊ. ಜಯಪ್ರಕಾಶ್ ಗೌಡ

ಶ್ರೀ ಆದಿಚುಂಚನಗಿರಿ ಶ್ರೀ ಗುರು ಭೈರವೈಕ್ಯ ಮಂದಿರ ಭಕ್ತರಿಗೆ ಸಮರ್ಪಣೆಮಂದಿರ ಉದ್ಘಾಟಿಸಿ ಅಭಿವೃದ್ಧಿಗೆ ಆಧ್ಯಾತ್ಮದ ಬೆಸುಗೆ ಹಾಕಿದ ಪ್ರಧಾನಿ

ಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಜಿಲ್ಲಾಧಿಕಾರಿ

Leave a Comment