NEWS

ಎಸ್.ಎಸ್.ಎಲ್.ಸಿ 2026 ನೇ ಸಾಲಿನ ವಾರ್ಷಿಕ ಪರೀಕ್ಷೆ-01: ನಿಷೇದಾಜ್ಞೆ ಜಾರಿ

ಪಾಲನೆ ನ್ಯೂಸ್

ಮಂಡ್ಯ : ಎಸ್.ಎಸ್.ಎಲ್.ಸಿ 2026 ನೇ ಸಾಲಿನ ವಾರ್ಷಿಕ ಪರೀಕ್ಷೆ-01 ರ ಮೌಲ್ಯಮಾಪನ ಕಾರ್ಯವು ಏಪ್ರಿಲ್ 08 ರಿಂದ ಒಟ್ಟು 06 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದ್ದು, ಏಪ್ರಿಲ್ 08 ರಿಂದ ಮೌಲ್ಯಮಾಪನ ಕಾರ್ಯವು ಪೂರ್ಣಗೊಳ್ಳುವವರೆಗೂ ಮೌಲ್ಯಮಾಪನ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಹೊರಡಿಸುವಂತೆ ಉಲ್ಲೇಖಿತ ಪತ್ರದಲ್ಲಿ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ. ಮಂಡ್ಯ ರವರು ಕೋರಿರುತ್ತಾರೆ.

ಸದರಿಯವರ ಕೋರಿಕೆಯನ್ನು ಪರಿಗಣಿಸಿ 2026ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-01 ರ ಮೌಲ್ಯಮಾಪನ ಕಾರ್ಯವನ್ನು ಸುಗಮವಾಗಿ ನಡೆಸುವ ಸಲುವಾಗಿ ಮೌಲ್ಯಮಾಪನ ಕಾರ್ಯವು ನಡೆಯುವ 06 ಮೌಲ್ಯಮಾಪನ ಕೇಂದ್ರಗಳ ಸುತ್ತಮುತ್ತ ನಿಷೇದಾಜ್ಞೆ ಹೊರಡಿಸುವುದು ಸೂಕ್ತವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿದ್ದಾರೆ.

ಮೌಲ್ಯಮಾಪನ ಕೇಂದ್ರಗಳಾದ 1. ಕಾರ್ಮೆಲ್ ಕಾನ್ವೆಂಟ್, ಮಂಡ್ಯ 2. ಸ.ಪ.ಪೂ.ಕಾ.ಕಲ್ಲುಕಟ್ಟಡ, ಮಂಡ್ಯ, 3. ಸೆಂಟ್ ಜಾನ್ ಪ್ರೌಢಶಾಲೆ, ಮಂಡ್ಯ, 4. ಸೆಂಟ್ ಜೋಸೆಫ್ ಪ್ರೌಢಶಾಲೆ, ಮಂಡ್ಯ, 5. ರೋಟರಿ ಪ್ರೌಢಶಾಲೆ, ಮಂಡ್ಯ ಹಾಗೂ 6. ಲಕ್ಷ್ಮಿ ಜನಾರ್ಧನ ಬಾಲಿಕಾ ಪ್ರೌಢಶಾಲೆ, ಮಂಡ್ಯ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿ/ಸಿಬ್ಬಂದಿಗಳನ್ನು ಹೊರತುಪಡಿಸಿ ಇತರರು ಯಾರೂ ನಿಷೇಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲವೆAದು ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭಾರತ-ಪಾಕಿಸ್ತಾನ ಟಿ20 ಫೈಟ್ 15ರಂದು

ವೆನೆಜುವೆಲಾ: 6ನೇ ತೈಲ ಟ್ಯಾಂಕ‌ರ್ ವಶಕ್ಕೆ ಪಡೆದ ಅಮೆರಿಕ

ಎಸ್.ಎಸ್.ಎಲ್.ಸಿ. ಪೂರ್ವ ಸಿದ್ದತಾ ಪರೀಕ್ಷೆ ಪರಿಶೀಲಿಸಿದ ಜಿ.ಪಂ. ಸಿಇಓ

Leave a Comment