ಪಾಲನೆ ನ್ಯೂಸ್
ಮಂಡ್ಯ : ಜಿಲ್ಲೆಯಲ್ಲಿ ತಾಯಿ ಮರಣ ತಡೆಗಟ್ಟಲು ಹಾಗೂ ತಾಯಿ ಮರಣ ಶೂನ್ಯಕ್ಕೆ ತರುವಂತೆ ಪ್ರಾಥಮಿಕ ವೈದ್ಯಾಧಿಕಾರಿಗಳು ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ರವರು ತಿಳಿಸಿದರು.
ಇಂದು ಜಿಲ್ಲಾ ಕಚೇರಿ ಸಭಾಂಗಣದಲ್ಲಿ 2026ನೇ ಸಾಲಿನ ಜನವರಿ ಮತ್ತು ಫ್ರೆಬ್ರವರಿ ಈ ಮಾಹೆಯಲ್ಲಿ ಸಂಭವಿಸಿರುವ ತಾಯಿ ಮರಣ ಕಾರಣ ಅಂತರಿಕ ಪರಿಶೋಧನಾ ಸಭೆಯ (RCH) ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2026 ನೇ ಸಾಲಿನಲ್ಲಿ 7 ತಾಯಿ ಮರಣಗಳು ಆಗಿದ್ದು,ತಾಯಿ ಮರಣವನ್ನು ತಡೆಗಟ್ಟಲು ಪ್ರಾಥಮಿಕ ವೈದ್ಯಾಧಿಕಾರಿಗಳು ಅಗತ್ಯ ಕ್ರಮ ಮತ್ತು ಮುಂಜಾಗ್ರತೆ ಕ್ರಮ ವಹಿಸಿ ಹಾಗೂ ಪ್ರಾಥಮಿಕ ANC ಪರೀಕ್ಷೆಯನ್ನು ಸರಿಯಾಗಿ ಮಾಡಬೇಕು ಮತ್ತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆಗೆ ಮೊದಲ ಆದ್ಯತೆ ನೀಡಬೇಕು ಪ್ರತಿಯೊಂದು ತಾಯಿ ಮರಣ ಪ್ರಕರಣಗಳ ಪ್ರಮಾಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ನ್ಯೂನ್ಯತೆಗಳನ್ನು ಗುರುತಿಸಿ ಮರಣ ಪ್ರಮಾಣವನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಗರ್ಭಿಣಿಯರಿಗೆ ಉತ್ತಮ ಗುಣಮಟ್ಟದ ಪ್ರಸೂತಿ ಆರೈಕೆ ಮಾಡಬೇಕು ಮತ್ತು ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕ್ಷೇತ್ರ ಮಟ್ಟದ ಆಯಾ ಆಯಾ ಪ್ರದೇಶ ಪಟ್ಟಣಗಳಲ್ಲಿ ತುರ್ತು ವಾಹನಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಹೇಳಿದರು
ಗರ್ಭಿಣಿಯರ ಪ್ರಸವ ಪೂರ್ವ ಮತ್ತು ಪ್ರಸವ ನಂತರ ಬೇಕಾದ ಕ್ರಮ ವಹಿಸಿ ಹಾಗೂ ಜಾಗೃತಿ ಮೂಡಿಸಬೇಕು.
ತಾಯಿ ಕಾರ್ಡ್ ಮಾಹಿತಿಯ ಅನುಸಾರ ಸಮಯಕ್ಕೆ ಸರಿಯಾಗಿ ಮಹಿಳೆಯರಿಗೆ ರಕ್ತಹೀನತೆ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ತಿಳಿಸಿದರು.

ಗರ್ಭಿಣಿ ತಾಯಂದಿರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿಬೇಕು ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರಗಳ ಸಮನ್ವಯತೆಯಿಂದ ತಾಯಿ ಮರಣ ತಡೆಗಟ್ಟಲು ಆರೋಗ್ಯ ಇಲಾಖೆ ಎಲ್ಲಾ ವೈದ್ಯರು ಕ್ರಮವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕೆ ಮೋಹನ್, RCH ಅಧಿಕಾರಿ ಡಾ. ಕೆ. ಪಿ. ಅಶ್ವಥ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ. ಎನ್. ಆಶಾಲತಾ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ಟಿ. ಹೆಚ್. ಓ ಡಾ. ಜವರೇಗೌಡ, ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಬೆಟ್ಟಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಜಿ.ವೇಣುಗೋಪಾಲ್ ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
