ತಿಪಟೂರು ಯಶಸ್ವಿ ಸಾವಯವ ಕೃಷಿಕ, ಕೃಷಿ ಉದ್ಯಮಿ ಮೋಹನ್ ಕುಮಾರ್ ಯಶೋಗಾಥೆ
ಪಾಲನೆ ನ್ಯೂಸ್
ಮಂಡ್ಯ: ಓದಿದ್ದು ಕೇವಲ ಎಸ್ ಎಸ್ ಎಲ್ ಸಿ. ನಾಲ್ಕು ಭಾಷೆಗಳಲ್ಲಿ ಹಿಡಿತ. ಅವರ ಭಾಷಾ ಶಿಕ್ಷಕರೇ ಗ್ರಾಹಕರು…
ಹೀಗೆ ಹೆಮ್ಮೆಯಿಂದ ಹಾಗೂ ಆತ್ಮವಿಶ್ವಾಸದಿಂದ ಹೇಳಿದವರು ತುಮಕೂರು ಜಿಲ್ಲೆ ತಿಪಟೂರು ತಾಲೂಕು ಬೀರಸಂದ್ರ ಗ್ರಾಮದ ಸಾವಯವ ಕೃಷಿಕರು, ಯಶಸ್ವಿ ರೈತ ಉತ್ಪನ್ನಗಳ ಉತ್ಪಾದಕರು ಆದ ಮೋಹನ್ ಕುಮಾರ್.

ಮೇಳ ವೊಂದರಲ್ಲಿ ತೆಂಗಿನ ಗರಿಯ ಟೋಪಿ ಹೆಣೆಯುವುದು ಹೇಗೆ ಎಂದು ಉಚಿತವಾಗಿ ತರಬೇತಿ ನೀಡಿದ ಅವರು, ಟೋಪಿ ಹೊಣೆಯುವ ಕೌಶಲ್ಯ ತಿಳಿಸುವುದರ ಜೊತೆಗೆ ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿಕೊಂಡರೆ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ಸರಳವಾಗಿ ಅರ್ಥೈಸಿದರು.

ಜೀವನದಲ್ಲಿ ಒಬ್ಬನೇ ಸಾಧಿಸುವುದು ಕಷ್ಟಕರ. ಅದಕ್ಕೆ ಕುಟುಂಬ, ಸ್ನೇಹಿತರು, ಹಿತೈಷಿಗಳ ಸಹಕಾರ, ನೆರವು ಬಹಳ ಮುಖ್ಯ. ಅದು ನನಗೆ ದೊರೆತಿದೆ. ಎಲ್ಲರ ಸಹಕಾರದಿಂದಲೇ ನಾನು ವಿದೇಶಗಳಿಗೂ ರಫ್ತು ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಎಐ(ಕೃತಕ ಬುದ್ಧಿಮತ್ತೆ) ಭೂತ ಓದಿದವರ ಸಮಸ್ಯೆ ಹೊರತು ರೈತರದ್ದಲ್ಲ. ರೈತರು ಉಳುವುದನ್ನು ಬಿಟ್ಟು ಮಡಿಕೆ ಕುಡಿಕೆ ಬಳಸುವುದನ್ನು ಬಿಟ್ಟು ಪ್ಲಾಸ್ಟಿಕ್ ಮೊರೆ ಹೋಗಿ ಟ್ರ್ಯಾಕ್ಟರ್ ಅವಲಂಬಿಸಿರುವುದೇ ಅವರ ಆರ್ಥಿಕ ದುಸ್ಥಿತಿ ಹಾಗೂ ಅನಾರೋಗ್ಯಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.


