NEWS

5 ವರ್ಷವೂ ಸಿದ್ದರಾಮಯ್ಯ ಸಿಎಂ – ಡಾ.ಯತೀಂದ್ರ ಸಿದ್ದರಾಮಯ್ಯ

ಪಾಲನೆ ನ್ಯೂಸ್

    ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಗೊಂದಲವಿಲ್ಲ ಸದ್ಯಕ್ಕೆ ಎಲ್ಲವೂ ತಣ್ಣಗಾಗಿದೆ.ಅದರ ಬಗ್ಗೆ ಎಲ್ಲೂ ಚರ್ಚೆಗಳಾಗುತ್ತಿಲ್ಲ.ಸುಖಾ ಸುಮ್ಮನೆ ಮಾಧ್ಯಮದವರು ಕೆದಕುತ್ತಿದ್ದಾರೆ.

    ಸಿದ್ದರಾಮಯ್ಯ ಅವರೇ 5 ವರ್ಷಗಳ ಕಾಲ ಸಿಎಂ ಆಗಲಿದ್ದಾರೆ. ಈಗಾಗಲೇ ನಮಗೆ ಹೈಕಮಾಂಡ್ ಗ್ರೀನ್ ಸಿಗ್ನಲ್‌ ನೀಡಿದ್ದಾರೆ, ಅದನ್ನು ಓಪನ್ನಾಗಿ ಹೇಳಲಿಕ್ಕೆ ಆಗುತ್ತಾ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ, ಸಿದ್ದರಾಮಯ್ಯ ತಿಳಿಸಿದರು.

    ಶುಕ್ರವಾರ ಮಾಧ್ಯಮಗಳ ಜೊತೆ ಮಾತ ನಾಡಿದ ಯತೀಂದ್ರ ಸಿದ್ದರಾಮಯ್ಯ, ಹೈಕಮಾಂಡ್ ನೇರವಾಗಿ ಹೇಳಿದೆ ಇದೆ ಬಹುದು ಆದರೆ ಸಿಗ್ನಲ್ ಕೊಟ್ಟಿದೆ. ಸಿದ್ದರಾ ಮಯ್ಯ ವರ್ಷ ಸಿಎಂ ಆಗಿರುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮಾಧ್ಯಮದಲ್ಲಿ ಮಾತ್ರ ಸಿಎಂ ಬದಲಾವಣೆ ಚರ್ಚೆ ಆಗುತ್ತಿದೆ. ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಇಳಿಸಿ ಅಂತ ಯಾರೂ ಕೇಳುತ್ತಿಲ್ಲ ಎಂದರು.

    ಮನರೇಗಾ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಜಟಾಪಟಿ ವಿಚಾರವಾಗಿ ಮಾತ ಯತೀಂದ್ರವರೇ ನಮ್ಮ ಹೈಕಮಾಂಡ್ಅವರು ನಮ್ಮ ಮೇಲೆ ಮಾಡುವ ಆರೋಪ ಎಲ್ಲಸುಳ್ಳು ಎಂದರು. ಕೆ.ಜೆ. ಜಾರ್ಜ್ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಮೂಗು ತೂರಿಸಿದ್ದಾರೆ ಎಂಬ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನಿಜಕ್ಕೂ ನನಗೆ ಗೊತ್ತಿಲ್ಲ, ಖುದ್ದು ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಸುಖಾಸುಮ್ಮನೆ ನನ್ನ ಹೆಸರನ್ನು ಬಿಜೆಪಿ ಎಳೆದು ತರುವ ಕೆಲಸ ಮಾಡಿದೆ ಇದು ಹೊಸವೇನಲ್ಲ, ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲ ಸದನದಲ್ಲೂ ಕೂಡ ಬಿಜೆಪಿ ನನ್ನ ಹೆಸರು ಹೇಳಿದೆ. ಈ ಹಿಂದಿನಿಂದಲೂ ನನ್ನ ಟಾರ್ಗೆಟ್ ಮಾಡಿಕೊಂಡು ಬಂದಿದ್ದಾರೆ. ಅದರ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.

    ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದ ರಾಮಯ್ಯ, ನಾನು ಕೂಡ ಬ್ಯಾಲೆಟ್ ಪೇಪ‌ರ್ ನಲ್ಲಿ ಚುನಾವಣೆ ಮಾಡೋದನ್ನು ಸ್ವಾಗತಿಸುತ್ತೇನೆ.ದೊಡ್ಡದೊಡ್ಡ ರಾಷ್ಟ್ರಗಳಲ್ಲಿ ಪೇಪರ್ ಬಳಸುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗಳೇ ಬ್ಯಾಲೆಟ್ ಪೇಪ‌ನರ್‌ಲ್ಲಿ ಚುನಾವಣೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸುವುದು ಸೂಕ್ತ. ಇದು ನನ್ನ ಅಭಿಪ್ರಾಯ ಎಂದರು.

    ಮೂಡ ‌ ಹಗರಣ ಕೋರ್ಟ್ -ರಿಪೋರ್ಟ್ ಪುರಸ್ಕಾರ ವಿಚಾರ, ನಮಗೆ ಕಾನೂನಿನಲ್ಲಿ ನಂಬಿಕೆ ಇತ್ತು. ನಾವೇನೂ ತಪ್ಪು ಮಾಡಿರಲಿಲ್ಲ. ಕೋರ್ಟ್ ತೀರ್ಪು ಸ್ವಾಗತ ಮಾಡುತ್ತೇವೆ. ನಮ್ಮ ತಾಯಿ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಸ್ನೇಹಮಯಿ ಕೃಷ್ಣ ಹೋರಾಟ ಮಾಡಲಿ. ಕಾನೂನು ಎಲ್ಲರಿಗೂ ಒಂದೇ ಎಂದರು.

    ✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
    https://chat.whatsapp.com/H1gUYgrzvnQGZAhIQSGMHn

    Related posts

    ಕೆಎಂಎಫ್ ಅಧಕ್ಷರ ಎಲೆಕ್ಷನ್ ?

    ಎಸ್‌ಎಫ್‌ಐ ಆಗ್ರಹ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ

    An architect isn’t someone; he is visionary

    Leave a Comment