NEWS

ಷೇರುಪೇಟೆ ಚೇತರಿಕೆ

ಪಾಲನೆ ನ್ಯೂಸ್

ಮುಂಬೈ: ಆರ್‌ಬಿಐ ಬಡ್ಡಿ ದರ ಬದಲಾಗದ ಕಾರಣ ಶುಕ್ರವಾರ ಆರಂಭದಲ್ಲಿ ಕುಸಿದಿದ್ದ ಷೇರು ಮಾರುಕಟ್ಟೆ, ದಿನದ ವಹಿವಾಟಿನ ಕೊನೆಯಲ್ಲಿ ಐಟಿಸಿ ಮತ್ತು ಬ್ಯಾಂಕಿಂಗ್‌ ಷೇರುಗಳ ಖರೀದಿ ಭರಾಟೆಯಿಂದಾಗಿ ಏರಿಕೆ ದಾಖಲಿಸಿದೆ. ರಿಯಲ್ ಎಸ್ಟೇಟ್ ವಲಯಕ್ಕೆ ಹಣಕಾಸಿನ ನೆರವು ನೀಡಲು ಬ್ಯಾಂಕುಗಳಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ ಮೆಂಟ್ ಟ್ರಸ್ಟ್‌ಗಳಿಗೆ (ಆರ್‌ಇಐಟಿ) ಸಾಲ ನೀಡಲು ಅನುಮತಿ ನೀಡುವ ಪ್ರಸ್ತಾವನೆ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ದಿನದ ಅಂತ್ಯದಲ್ಲಿ ಕಂಡುಬಂದ ಭರ್ಜರಿ ಖರೀದಿ ನೆರವಿನಿಂದ ಸೆನ್ಸೆಕ್ಸ್ 266.47 ಅಂಕ ಏರಿಕೆ ಕಂಡು 83,580.40ರ ಮಟ್ಟದಲ್ಲಿ ಸ್ಥಿರವಾಯಿತು. 2 2 2 82,925.3500 655.05 ಅಂಕಗಳಷ್ಟು ಚೇತರಿಕೆ ಕಂಡಿತು. ನಿಫ್ಟಿ 50.90 ಅಂಕಗಳ ಏರಿಕೆಯೊಂದಿಗೆ 25,693.70 ಮಟ್ಟದಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ವಿನಿಮಯ ಕೇಂದ್ರದ ಮಾಹಿತಿ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 2,150.51 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಬೆಲೆ ಶೇ. 1.20ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 68.34 ಡಾಲರ್‌ಗೆ ತಲುಪಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

180 ಅಪ್ರಾಪ್ತ ಬಾಲಕಿಯರನ್ನ ಲೈಂಗಿಕವಾಗಿ ಶೋಷಿಸಿದ್ದಲ್ಲದೆ 350 ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಯುವಕನ ಸೆರೆ

ಮಂಡ್ಯದಲ್ಲಿ ಪ್ರತಿಭಾ ನಂದಕುಮಾರ್ ಕಾವ್ಯಾನುಸಂಧಾನ ಜನವರಿ 24ಕ್ಕೆ

ಏ.8ರಂದು ಇಲ್ಲವೇ ಏ. 10ರಂದು ದ್ವಿತೀಯ ಪಿಯು ರಿಸಲ್ಟ್

Leave a Comment