ಪಾಲನೆ ನ್ಯೂಸ್
ಜೊಹಾನ್ಸ್‌ಬರ್ಗ್: ದೀಪ್ತಿ ಶರ್ಮ (36 ರನ್, 26 ಎಸೆತ, 5 ಬೌಂಡರಿ, 19ಕ್ಕೆ 5 ವಿಕೆಟ್) ಆಂಡ್ ನಿರ್ವಹಣೆಯ ಬಲದಿಂದ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ 14 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಪ್ರವಾಸದ ಮೊದಲ ಗೆಲುವಾಗಿದೆ.
ಈ ಮೂಲಕ ಹರ್ಮಾನ್‌ಪ್ರೀತ್ ಕೌರ್ ಪಡೆ 5 ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 1-3ಕ್ಕೆ ತಗ್ಗಿಸಿಕೊಂಡಿದೆ. ವಾಂಡರರ್ಸ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ, ಸಂಘಟಿತ ಬ್ಯಾಟಿಂಗ್ ನಿರ್ವಹಣೆಯೊಂದಿಗೆ 5 ವಿಕೆಟ್‌ಗೆ 185 ರನ್ ಕಲೆಹಾಕಿತು. ಪ್ರತಿಯಾಗಿ ದೀಪ್ತಿ ಶರ್ಮ ಸ್ಪಿನ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗೆ 171 ರನ್ ಗಳಿಸಲಷ್ಟೇ ಶಕ್ತಗೊಂಡಿತು.

ಭಾರತ: 5 ವಿಕೆಟ್‌ಗೆ 185 (ಶೆಫಾಲಿ 9, ಅನುಷ್ಕಾ 27, ಜೆಮೀಮಾ 43, ಹರ್ಮಾನ್ ಪ್ರೀತ್ 22, ದೀಪ್ತಿ 36, ರಿಚಾ 34, ಮಾರ್ಕ್ಸ್ 28ಕ್ಕೆ 2, ರೇನೆಕ್ 10ಕ್ಕೆ 2), ದಕ್ಷಿಣ ಆಫ್ರಿಕಾ: 9 ವಿಕೆಟ್‌ಗೆ 171 (ವೊಲ್ವಾರ್ಡ್ 18, ಲುಸ್ 40, ಬ್ರಿಟ್ಸ್ 30, ರೇನೆಕ್ 21, ಟ್ರಯಾನ್ 9, ಮಾರ್ಕ್ಸ್ 21*, ದೀಪ್ತಿ 19ಕ್ಕೆ 5, ಕಾತ್ವಿ 26ಕ್ಕೆ 1, ಶ್ರೀಚರಣಿ 28ಕ್ಕೆ 1).
✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
