ಪಾಲನೆ ನ್ಯೂಸ್
ಮಂಡ್ಯ: ಡಾ. ರಾಜ್ ಕುಮಾರ್ ರವರು ಮೇರು ನಟರಾಗಿದ್ದರು ಸಹ ಸ್ವಲ್ಪವೂ ಕೂಡ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮನ್ಯರಾಗಿದ್ದು ಕನ್ನಡ ಚಿತ್ರರಂಗಕ್ಕೆ ಅಪಾರ ಕೀರ್ತಿ ತಂದು ಕೊಟ್ಟವರು ಅವರ ಸರಳ ಜೀವನ ಶೈಲಿ ಹಾಗೂ ನೈತಿಕ ಮೌಲ್ಯ ಆದರ್ಶಗಳನ್ನು ಯುವ ಜನತೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ ಪ್ರಕಾಶ್ ರವರು ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಮಹಿಳಾ ಕಾಲೇಜು (ಸ್ವಾಯತ್ತ) ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜಿನ (ಸ್ವಾಯತ್ತ)ಸಭಾಂಗಣ ದಲ್ಲಿ ನಡೆದ *ವರನಟ ಡಾ. ರಾಜ್ ಕುಮಾರ್ ರವರ 97 ನೇ ಜನ್ಮದಿನಾಚರಣೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಡಾ. ರಾಜ್ ಕುಮಾರ್ ರವರು ಉನ್ನತ ಪ್ರಶಸ್ತಿಯನ್ನು ಪಡೆದು ನಿರ್ಮಾಪಕರನ್ನೇ ಅನ್ನದಾತರೆಂದು ಅವರಿಗೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಿದ್ದರು ಅವರ ಸರಳ ಜೀವನ ಎಲ್ಲರಿಗೂ ಮಾದರಿ ಎಂದರು.
ಮೈಸೂರು ಮಹಾರಾಣಿ ಮಹಿಳಾ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ ಪಿ. ವಿ ರವರು ವಿಶೇಷ ಉಪನ್ಯಾಸ ನೀಡಿ ಕನ್ನಡ ಚಿತ್ರರಂಗದ ಮೇರುನಟ, ಗಾಯಕ ಮತ್ತು ಸಾಂಸ್ಕೃತಿಕ ಐಕಾನ್. ‘ನಟಸಾರ್ವಭೌಮ’ ಎಂದೇ ಕರೆಯಲ್ಪಡುವ ಇವರು 5 ದಶಕಗಳ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಇವರು, ಕನ್ನಡ ಚಿತ್ರರಂಗದ ಧ್ರುವತಾರೆ ಎಂದು ತಿಳಿಸಿದರು.
ಕನ್ನಡ ಚಿತ್ರಗಳಲ್ಲಿ ಪೌರಾಣಿಕ. ಸಾಮಾಜಿಕ. ಕೌಟುಂಬಿಕ ಸೇರಿದಂತೆ ಸಮಾಜಕ್ಕೆ ಎಲ್ಲಾ ರೀತಿಯಲ್ಲೂ ಕಲಾ ಮಾಧ್ಯಮದ ಮೂಲಕ ಉತ್ತಮ ಸಂದೇಶವನ್ನು ನೀಡಿದ ಮೇರು ನಟ ರಾಜಕುಮಾರ ರವರ ಎಲ್ಲಾ ಚಿತ್ರಗಳು ಯಾವುದೇ ಪಾತ್ರ. ಸಂಭಾಷಣೆ ಹಾಗೂ ಹಾಡುಗಳು ಸಹ ಸೆನ್ಸಾರ್ ಕತ್ತರಿಗೆ ಒಳಪಟ್ಟಿಲ್ಲ ಹೀಗಾಗಿ ಒಳ್ಳೆಯ ಸಂಸ್ಕಾರ ಕಲಿಯಲು ಆದರ್ಶವನ್ನು ಅಳವಡಿಸಿಕೊಳ್ಳಲು ರಾಜ್ ಕುಮಾರ ರವರ ಚಿತ್ರಗಳು ಮಾದರಿಯಾಗಿವೆ ಎಂದರು.
ಯುವ ಸಮೂಹವು ನೈತಿಕತೆ, ಮಾನವೀಯತೆ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು ಹಾಗೂ ದೇಶ ಅಭಿವೃದ್ಧಿ ಹಾಗೂ ಭವಿಷ್ಯ ಯುವ ಜನತೆಯಿಂದ ಮಾತ್ರ ಸಾಧ್ಯ ಯುವ ಜನತೆಯೂ ಮಾನವೀಯತೆಯ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಮನ್ಸೂರ್ ಪಾಷ ರಾಜ್ ಕುಮಾರ ಚಿತ್ರಗೀತೆಯನ್ನು ಹಾಡಿ ಗಮನಸೆಳೆದರು

ವೇದಿಕೆಯಲ್ಲಿ ವಾರ್ತಾ ಮತ್ತು ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಟಿ .ಕೆ . ಹರೀಶ್, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾoಶುಪಾಲರಾದ ರವಿಕಾಂತ್ ಲಂಬಾಣಿ, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ರಾಜ್ಯ ಅಧ್ಯಕ್ಷರಾದ ಸಂದೇಶ್. ಹಿರಿಯ ಪತ್ರಕರ್ತರಾದ ದೇವರಾಜು ಕೊಪ್ಪ. ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರಾದ ದಾನೇಗೌಡ, ಶಿವರಾಜು ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳು
ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
