NEWS

ಯಡೂರು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ, ಹಿಂದೂ ಕೌಟುಂಬಿಕ ಪದ್ದತಿ ಉಳಿಯಬೇಕು

ಪಾಲನೆ ನ್ಯೂಸ್

ಸೋಮವಾರಪೇಟೆ: ಸಮೀಪದ ಹಾನಗಲ್ಲು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಯಡೂರು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಕಲ್ಕಂದೂರಿನ ಕೂಡುರಸ್ತೆಯಿಂದ ಯಡೂರು ಗ್ರಾಮದವರೆಗೆ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದಲ್ಲಿ ಮೆರವಣಿಗೆ ತೆರಳಲಾಯಿತು.

ಹಾನಗಲ್ಲು ಗಣಪತಿ ದೇವಾಲಯದ ಅರ್ಚಕ ಪ್ರಸಾದ್ ಭಟ್ ನೇತೃತ್ವದಲ್ಲಿ ಗೋ ಪೂಜೆಯನ್ನು ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಯಡೂರು ಆಟದ ಮೈದಾನದವರೆಗೆ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದ ಸಾನ್ನಿಧ್ಯ ಮಾತನಾಡಿದ ಮಡಿಕೇರಿಯ ವಹಿಸಿ ಸೋಮನಾಥಾ ನಂದಪುರಿ ಸ್ವಾಮಿ, ಗ್ರಾಮ ಸ್ವರಾಜ್ಯದೊಂದಿಗೆ ರಾಮರಾಜ್ಯ ನಿರ್ಮಾಣವಾಗಬೇಕು.

ಆದರೆ, ಆಧುನಿಕ ವಿಜ್ಞಾನದ ಯುಗದಲ್ಲಿ ಆಧ್ಯಾತ್ಮಿಕತೆಯನ್ನು ಒಂದೂ ಸಂಗಮ ಆಯೋಜನಾ ಸಮಿತಿ ಸೋಮವಾರಪೇಟೆ ತಾಲ್ಲೂಕು ಹಾನಗಲ್ಲು ಮಂಡಲ ಹಿಂದು ಸಂಗಮ ಬೃಹತ್ ಶೋಭಾಯಾತ್ರೆ ಮರೆಯುತ್ತಿದ್ದೇವೆ. ಸಾವಯವ ಕೃಷಿ ಪದ್ಧತಿ ದೂರಾಗುತ್ತಿದೆ. ಇದರಿಂದಾಗಿ ಆಯುಥ್ಯಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಭಾರತ ಸದೃಢವಾಗಿದ್ದರೆ ಮಾತ್ರ ಜಗತ್ತು ಸುಖಿಯಾಗಿರುತ್ತದೆ. ಭಾರತ ಭಾರತವಾಗಿ ಉಳಿಯಬೇಕಾದರೆ ಹಿಂದೂ ಕೌಟುಂಬಿಕ ಪದ್ಧತಿ ಉಳಿಯಬೇಕು. ಹಿಂದೂ ಸಮಾಜದ ಒಗ್ಗಟ್ಟಿಗೆ ಯಾವುದೇ ರಾಜಕೀಯ, ರಾಜಕೀಯ ಪಕ್ಷಗಳ ಮುಖಂಡರು ಧಕ್ಕೆಯಾಗಬಾರದು ಎಂದರು.

ದಿಕ್ಕೂಚಿ ಭಾಘಣ ಮಾಡಿದ ಸಾಮಾಜಿಕ ಕಾರ್ಯಕರ್ತ, ಸುಳ್ಯ ಆಡೂರಿನ ನವೀನ್ ಸುಬ್ರಹ್ಮಣ್ಯ ಮಾತನಾಡಿ, ಈ ಹಿಂದಿನಿಂದಲೂ ಹಿಂದೂ ಸಮಾಜದ ಮೇಲೆ ಹಲವಷ್ಟು ಧಾರ್ಮಿಕ ನಾಶಗೊಳಿಸುವ ಧಾಳಿಗಳು ನಡೆದಿವೆ. ಶ್ರದ್ಧಾಕೇಂದ್ರಗಳನ್ನು ಯತ್ನಗಳು ಧರ್ಮದ್ರೋಹಿಗಳಿಂದ ನಡೆದರೂ ಸಹ ಮತ್ತೆ ತಲೆಯೆತ್ತಿ ನಿಂತಿವೆ. ಬಹುತ್ವದಲ್ಲಿ ಹಿಂದುತ್ವ ಬೆಳೆದಿದೆ. ಹಿಂದುತ್ವದ ಜಾತ್ಯಾತೀತತೆಯೇ ನಿಜವಾದ ಸತ್ಯ ಎಂದು ಹೇಳಿದರು. ವೇದಿಕೆಯಲ್ಲಿ ಸಾಹಿತಿ ಜಲಾಕಾಳಪ್ಪ, ಹಿರಿಯ ಸ್ವಯಂ ಸೇವಕ ಕೆ.ಎಸ್.ಅಪ್ಪಯ್ಯ, ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಟಿ.ಸನತ್, ಗೌರವಾಧ್ಯಕ್ಷ ಎಸ್‌.ಎನ್‌. ಸೀತಾರಾಮ್, ಹಾನಗಲ್ಲು ಮಂಡಲ ಅಧ್ಯಕ್ಷ ಬಿ.ಜೆ.ದೀಪಕ್ ಇದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಗಣ ರಾಜ್ಯೋತ್ಸವದ ಅಂಗವಾಗಿ 34 ತಂಡಗಳಿಂದ ಪಥ ಸಂಚಲನ

ಸಾಹಿತ್ಯ ಸಮ್ಮೇಳನದ ಸವಿನೆನಪಿನ ಕನ್ನಡ ಭವನ ನಿರ್ಮಾಣಕ್ಕೆ ಭವ್ಯ ಸ್ವಾಗತ

ಒಳ ಮೀಸಲು ವರ್ಗೀಕರಣಕ್ಕೆ ಒತ್ತಾಯ

Leave a Comment