ಪಾಲನೆ ನ್ಯೂಸ್
ಮೈಸೂರು: ತಂಬಾಕು ಬೆಲೆ ಕುಸಿತ ಸಮಸ್ಯೆ ಇತ್ಯರ್ಥಪಡಿಸಿ, ಹಿಂದಿನ ದರದಂತೆ ಖರೀದಿ ಮಾಡಬೇಕು ಅಥವಾ ಗೋದಾಮು ಸೀಜ್ ಮಾಡಬೇಕೋ ಎಂಬುದನ್ನು ಐಟಿಸಿ ಕಂಪನಿ ಯರು ಮಂಗಳವಾರ ಮಧ್ಯಾಹ್ನದೊಳಗೆ ತಿಳಿಸುವಂತೆ ಮೈಸೂರು ಜಿಲ್ಲಾಡಳಿತ ಗಡುವು ನೀಡಿದೆ.
ಜಿಲ್ಲಾ ಪಂಚಾಯಿತಿ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಅವರು ಎಚ್ಚರಿಕೆ ನೀಡಿದರು. ಸಭೆಯ ಆರಂಭದಲ್ಲಿ ರೈತರು ತಂಬಾಕು ಬೆಳೆಯನ್ನು ನಿಷೇಧಿಸಿದರೆ ಬೆಳೆಯುವುದನ್ನು ನಿಲ್ಲಿಸುವುದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ದರು. ಸರ್ಕಾರನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ತಂಬಾಕು ಬೆಳೆದಿ ದ್ದೇವೆ. ಬೆಳೆ ಕಡಿಮೆಯಾದ ಮೇಲೆ ಹೆಚ್ಚು ಬೆಲೆ ಸಿಗಬೇಕಿತ್ತು. ಇದೀಗ ಬೆಳೆ ಕಡಿಮೆಯಾಗಿ ದ್ದರೂ ಬೆಲೆ ಕುಸಿತವಾಗಿದೆ ಎಂದು ರೈತರು ಅಳಲು ತೊಡಿಕೊಂಡರು.
ಐಟಿಸಿ ಪ್ರತಿನಿಧಿ ವಿರುದ್ಧ ಆಕ್ರೋಶ: ಬೆಲೆ ನಿಗದಿ ಅಧಿಕಾರ ನನಗಿಲ್ಲ. ಆಂಧ್ರಪ್ರದೇಶದ ಗುಂಟೂರಿಗೆ ಬಂದು ಚರ್ಚಿಸುವಂತೆ ಹೇಳಿದ ಐಟಿಸಿ ಸಿಗರೇಟ್ ಕಂಪನಿ ಪ್ರತಿನಿಧಿಯ ವಿರುದ್ಧ ಜನಪ್ರತಿನಿಧಿಗಳು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಐಟಿಸಿ ಕಂಪನಿಯ ಪ್ರತಿನಿಧಿ ವಿರುದ್ಧ ಬೆಲೆ ಕುಸಿತವಾದರೆ ರೈತರಿಗೆ ಭಾರೀ ನಷ್ಟ ಮೈಸೂರು ಕೆಜಿ ತಂಬಾಕು 320 ರೂ.ಗೆ ಖರೀದಿಸಬೇಕು ಎಂದು ಪಿರಿಯಾಪಟ್ಟಣ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ ಅಭಿಪ್ರಾಯಪಟ್ಟರು. ಸಭೆಯ ಬಳಿಕ ಪತ್ರಿಕೆಯೊಂದಿಗೆ ಮಾತ ನಾಡಿದ ಅವರು, ಕೆಜಿಗೆ 40 ರೂ. ಕಡಿತ ಮಾಡಿದ್ದಾರೆ. ಇದರಿಂದ ರೈತನಿಗೆ ಬರುವ ಲಾಭವೇ ಇಲ್ಲದಂತಾಗುತ್ತದೆ ಎಂದರು. ಗರಂ ಆದರು. ಸಮರ್ಪಕ ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದೀರಿ ಎಂದು ಹರಿಹಾಯ್ದರು. ರೈತರ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ.

ಭರವಸೆ ಕೊಟ್ಟ ದರಕ್ಕೆ ತಂಬಾಕು ಖರೀದಿ ಮಾಡಬೇಕು ಎಂದು ತಾಕೀತು ಮಾಡಿದರು. ಉಡಾಫೆಯ ಉತ್ತರ ಕೊಡಬಾರದು ಎಂದು ಶಾಸಕ ಡಿ. ರವಿಶಂಕರ್ ದನಿಗೂಡಿಸಿ ದರು. ಹಳೆಯದಲ್ಲಿ ಚರ್ಚೆ ಮಾಡುವುದು ಬೇಡ. ತಂಬಾಕು ಬೆಳೆಗಾರರಿಂದ ಕಂಪನಿ ಇರುವುದು. ಕಂಪನಿಯಿಂದ ರೈತರಲ್ಲ ಎಂದು ಗುಡುಗಿದರು. ಈ ವೇಳೆ ರೈತರು ಜೋರು 90 ಮಿಲಿ ತಂಬಾಕು ಬೆಳೆಯಲು ಅನುಮತಿ ಕೊಟ್ಟಿದ್ದರು. 80 ಮಿಲಿಯಷ್ಟೇ ಬೆಳೆದಿದ್ದೇವೆ. ಈಗ 40 ಮಿಲಿ ಖರೀದಿಸಿ ದ್ದಾರೆ. ಉಳಿಕೆ 40 ಮಿಲಿ ತಂಬಾಕನ್ನು 320 ರೂ.ಗಳಂತೆ ಖರೀದಿ ಮಾಡಬೇಕು. ಆಂಧ್ರ ದಲ್ಲಿ ಕೆಜಿ ತಂಬಾಕಿಗೆ 420 ರೂ. ಕೊಟ್ಟಿದ್ದಾರೆ.
ಕರ್ನಾಟಕ ರೈತರಿಗೆ ಯಾಕೆ ದರ ಕಡಿಮೆ ಮಾಡಬೇಕು ಎಂದು ಪ್ರಶ್ನಿಸಿದರು. ದನಿಯಲ್ಲಿ ಮಾತಾಡಿದರು. ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ತಂಬಾಕು ಮಂಡಳಿ ತಮ್ಮ ಜವಾಬ್ದಾರಿ ಸರಿ ಯಾಗಿ ನಿರ್ವಹಿಸುತ್ತಿಲ್ಲ. ಐಟಿಸಿ ಕಂಪನಿ ಪರ ಕೆಲಸ ಮಾಡುತ್ತಿದ್ದು, ಏಕಸ್ವಾಮ್ಯತೆ ಹೊಂದಿ ರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು. ಸಂಸದ ಯದುವೀರ್ ಒಡೆಯರ್, ಶಾಸಕ ಜಿ.ಡಿ. ಹರೀಶ್ ಗೌಡ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್, ಮುಖಂಡರಾದ ಬಿ.ಎಂ. ರಾಮು, ಎನ್. ಕಂಪನಿಯವರು ಹಿಂದಿನ ದರಕ್ಕೆ ತಂಬಾಕು ಖರೀದಿ ಮಾಡಬೇಕು.
ಇಲ್ಲದಿದ್ದರೆ ಜಿಲ್ಲಾಡಳಿತ ಗೋದಾಮು ವಶಕ್ಕೆ ಪಡೆಯುತ್ತದೆ. ಐಟಿಸಿ ಕಂಪನಿಯರು ತಮ್ಮ ನಿರ್ಧಾರ ತಿಳಿಸಬೇಕು. -ಕೆ. ವೆಂಕಟೇಶ್, ಸಚಿವ ತಂಬಾಕು ಬೆಲೆ ಕುಸಿತವನ್ನು ಸರಿಪಡಿಸುವಂತೆ ಈ ಹಿಂದೆ ಯೇ ಆಂಧ್ರಪ್ರದೇಶದ ಸಂಸದರೊಂದಿಗೆ ವಾಣಿಜ್ಯ ಕಾರ್ಯ ದರ್ಶಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಕಲ್ಪಿಸುವಂತೆ ಕೋರಿದ್ದೇವೆ. ರೈತರಿಗೆ ನ್ಯಾಯಯುತ ಬೆಲೆ ಕೊಡು ವಂತೆ ಒತ್ತಾಯ ಮಾಡುತ್ತೇವೆ.ಭಾಸ್ಕರ್, ವಕೀಲ ಕಾಂತರಾಜ್, ಕೆ. ಮಹೇಶ್ -ಯದುವೀರ್, ಸಂಸದ ಮುಂತಾದವರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

