ಪಾಲನೆ ನ್ಯೂಸ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಗಡಿಯಲ್ಲಿರುವ ಬಹುನಿರೀಕ್ಷಿತ ಷಹಪುರ ಅಣೆಕಟ್ಟು ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಹೆಚ್ಚುವರಿ ನೀರನ್ನು ತಡೆಹಿಡಿಯಲು ಭಾರತ ಸಜ್ಜಾಗಿದೆ. ಈಗಾಗಲೇ ಸಿಂಧೂ ನೀರು ಒಪ್ಪಂದದ ಅಮಾನತಿನಿಂದ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಇದು ಮತ್ತೊಂದು ದೊಡ್ಡ ಹೊಡೆತವಾಗಲಿದೆ.
ಷಹಪುರ ಅಣೆಕಟ್ಟು ಮಾರ್ಚ್ 31ರ ಒಳಗೆ ಪೂರ್ಣಗೊಳ್ಳಲಿದ್ದು, ಏಪ್ರಿಲ್‌ನಿಂದ ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿಯ ಹೆಚ್ಚುವರಿ ನೀರು ನಿಲ್ಲಲಿದೆ ತಿಳಿಸಿವೆ. ಕಳೆದ ಸಲ್ನಲ್ಲಿ ನಡೆದ ಸಹಲದ ದಾರಿಗನಂತರ ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಈ ಯೋಜನೆಯ ತ್ವರಿತಗತಿಯ ಪೂರ್ಣಗೊಳಿಸುವಿಕೆ ಅದರ ಭಾಗವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಜಲಸಂಪನ್ಮೂಲ ಸಚಿವ ಜಾವೇದ್ ಅಹ್ಮದ್ ರಾಣಾ, ‘ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹೋಗುವ ಹೆಚ್ಚುವರಿ ನೀರನ್ನು ನಾವು ಖಂಡಿತವಾಗಿಯೂ ನಿಲ್ಲಿಸುತ್ತೇವೆ.

ಈ ಯೋಜನೆಯು ಬರಪೀಡಿತ ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ಅತ್ಯಗತ್ಯವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಒಪ್ಪಂದ 1960ರ ಸಿಂಧೂ ನದಿ ನೀರು ಹಂಚಿಕೆ ಏನು? ಒಪ್ಪಂದದ ಪ್ರಕಾರ, ಪೂರ್ವದ ನದಿಗಳಾದ ಸಜ್ಜೆಜ್, ಬಿಯಾಸ್ ಮತ್ತು ರಾವಿ ನದಿಗಳ ನೀರಿನ ಸಂಪೂರ್ಣ ಹಕ್ಕು ಭಾರತಕ್ಕೆ ಸೇರಿದೆ. ಪಶ್ಚಿಮದ ನದಿಗಳಾದ ಸಿಂಧೂ, ಝೇಲಂ ಮತ್ತು ಚೆನಾಬ್ ಹಕ್ಕು ಪಾಕಿಸ್ತಾನಕ್ಕಿದೆ. ಆದರೆ, ಇಷ್ಟು ದಿನಗಳ ಕಾಲ ಭಾರತದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯಿಂದಾಗಿ ರಾವಿ ನದಿಯ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿತ್ತು. ಈಗ ಅಣೆಕಟ್ಟು ಪೂರ್ಣಗೊಳ್ಳುತ್ತಿರುವುದರಿಂದ ಭಾರತ ತನ್ನ ಪಾಲಿನ ನೀರನ್ನು ಪೂರ್ಣವಾಗಿ ಬಳಸಿಕೊಳ್ಳಲಿದೆ.
ಪ್ರಧಾನಿ ಸೂಚನೆ ಬಳಿಕ ಮರುಜೀವ ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಷಹಪುರ ಯೋಜನೆಗೆ 2018ರಲ್ಲಿ ಪ್ರಧಾನಿ ಮೋದಿಯವರ ಸೂಚನೆ ನಂತರ ಮರುಜೀವ ಸಿಕ್ಕಿತ್ತು. ಈ ಯೋಜನೆಯಿಂದ ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಸಾವಿರಾರು ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಉಗ್ರವಾದವನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತನ್ನ ಪಾಲಿನ ನೀರನ್ನು ಇನ್ಮುಂದೆ ಬಿಟ್ಟುಕೊಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತ ಈ ಮೂಲಕ ರವಾನಿಸಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

