ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬೇಕು: ಎಂ.ಶಿವಮೂರ್ತಿ
ಪಾಲನೆ ನ್ಯೂಸ್
ಮಂಡ್ಯ: ವೇಗವಾಗಿ ನಡೆಯುತ್ತಿರುವ ಜಗತ್ತಿನಲ್ಲಿ ಬಣಜಿಗ ಸಮುದಾಯದ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ (ವಿದ್ಯಾಬ್ಯಾಸವನ್ನು ) ನೀಡಬೇಕು. ಮಕ್ಕಳು ಸರ್ಕಾರದಿಂದ ಸಿಗುವ ಮೂಲ ಸೌಲಭ್ಯವನ್ನು ಪಡೆದು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಮಂಡ್ಯ ಉಪವಿಭಾಗಾಧಿಕಾರಿ ಎಂ. ಶಿವಮೂರ್ತಿ ರವರು ಹೇಳಿದರು.
ಇಂದು ಜಿಲ್ಲಾಡಳಿತ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ವ ಬಣಜಿಗ ಸಂಘದ ವತಿಯಿಂದ 2025-26 ನೇ ಸಾಲಿನ ಶ್ರೀ ಯೋಗಿ ನಾರೇಯಣ ಯತಿಂದ್ರರ 300ನೇ ಜಯಂತಿ ಕಾರ್ಯಕ್ರಮ ಮಂಡ್ಯ ನಗರದ ಶ್ರೀ ಯೋಗಿನಾರೇಯಣ ಯತಿಂದ್ರ ಸಮುದಾಯ ಭವನದಲ್ಲಿ ಜ್ಯೋತಿ ಬೆಳಗಿಸಿ. ಶ್ರೀ ಯೋಗಿ ನಾರೇಯಣ ಯತಿಂದ್ರರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
300 ವರ್ಷದ ಹಿಂದೆ ಇದ್ದಂತಹ ಕೈವಾರ ತಾತಯ್ಯ ರವರನ್ನು ಇಂದಿಗೂ ನಾವು ನೆನೆಯುತ್ತಿದ್ದೇವೆ ಅಂದರೆ ಅವರು ನಮ್ಮ ಸಮಾಜಕ್ಕೆ ನೀಡಿರುವ ಒಳ್ಳೆಯ ಸಂದೇಶವೇ ಕಾರಣ. ಕುವೆಂಪುರ ಆಶಯದಂತೆ ಹುಟ್ಟುತ್ತ ವಿಶ್ವ ಮಾನವರಾಗಿ ನಂತರ ಅಲ್ಪ ಮಾನವರಾಗುತ್ತೇವೆ. ಆದ್ದರಿಂದ ಎಲ್ಲರೂ ಶಿಕ್ಷಣ ಪಡೆಯುವ ಮೂಲಕ ವಿಶ್ವ ಮಾನವರಾಗಬೇಕು ಎಂದು ಹೇಳಿದರು.

ಸರ್ವ ಬಣಜಿಗ ಸಂಘದ ಅಧ್ಯಕ್ಷರಾದ ಕೆ. ಎನ್. ಮೋಹನ್ ಕುಮಾರ್ ಮಾತನಾಡಿ. ಯೋಗೇಂದ್ರ ರವರು ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಸೇರಿ ಅವರ ಜಯಂತಿಯನ್ನು ಆಚರಣೆ ಆಗುತ್ತಿರುವುದು ಖುಷಿಯ ವಿಚಾರ. ತಾತಯ್ಯ ರವರ ಚಿಂತನೆ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕು ಅವರ ರಚಿತ ಕೃತಿ ಹಾಗೂ ಪದ್ಯವನ್ನು ಪುಸ್ತಕದ ರೂಪದಲ್ಲಿ ಹೊರತರಲು ನಮ್ಮ ಬೆಂಬಲವಿದೆ ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕರಾದ ಕೆ. ಎನ್. ನಾಗನಂದ ರವರು ಮಾತನಾಡಿ ಕೈವಾರ ತಾತಯ್ಯರವರು 110 ವರ್ಷಗಳ ಕಾಲ ಜೀವಿಸಿದ್ದ ಅವರು ಬಳೆ ಮಾರಾಟಗಾರರಾಗಿ ಹಾಡು ಕಟ್ಟಿ ಪದ್ಯ ರಚನೆ ಮಾಡಿ ಜಗತ್ತಿನ ಹಾಗೂ ಹೋಗುಗಳನ್ನು ತಿಳಿಸುವ ಕಾಲಜ್ಞಾನವನ್ನು ನೀಡಿದ ಕೊಡುಗೆ ಅವರದು ಮನುಷ್ಯ ವಿಶಾಲ ಮನೋಭಾವನೆಯಿಂದ ಮು ನ್ನೆಡೆಯಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾ ನಿಲಯ ಡೀನ್ (ಅಕಾಡಮಿಕ್ ) ಪ್ರೋ. ರಾಮನಾಥಮ್ ನಾಯ್ಡು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕನ್ನಡ ನಾಡಿನಲ್ಲಿ ಹಲವಾರು ಮಹನೀಯರು ಜನ್ಮವನ್ನು ತಾಳಿದ್ದಾರೆ ಅದರಲ್ಲಿ ಮಹಾನ್ ಪುಣ್ಯ ಪುರುಷರು ಯೋಗಿ ನಾರೇಯಣ ಯತಿಂದ್ರರವರು ಎಂದು ಹೇಳಿದರು.

ರೈತರಿದ್ದರೆ ಊರು,ಮಕ್ಕಳಿದ್ದರೆ ಮನೆ ಎಂಬ ಮಾತಿನಂತೆ ದ್ವಾಪರ ಯುಗದಲ್ಲಿ ಕೈವಾರದ ಹೆಸರು ಇದೇ. ಕಾಲಜ್ಞಾನವನ್ನು ಹೊಂದಿದ್ದ ಶ್ರೀ ಯೋಗಿ ನಾರೇಯಣ ಯತಿಂದ್ರರವರು ಕೀರ್ತನೆ ಪದ್ಯವನ್ನು ಕೂಡ ರಚನೆ ಮಾಡಿದ್ದಾರೆ. ಸಮಾಜದಲ್ಲಿರುವ ಮೂಢನಂಬಿಕೆಯನ್ನು ಹೋಗಲಾಡಿಸಿ. ಭೂತಕಾಲ ವರ್ತಮಾನ ,ಭವಿಷ್ಯತ್ ಕಾಲವನ್ನು ತಿಳಿಸುವ ಕಾಲಜ್ಞಾನ ವನ್ನು ನೀಡಿದ ಕೀರ್ತಿ ಶ್ರೀ ಯೋಗಿ ನಾರೇ ಯಣ ಯತಿಂದ್ರ ರವರಿಗೆ ಸೇರುತ್ತದೆ ಎಂದು ಕೈವಾರ ತಾತಯ್ಯರವರ ಹುಟ್ಟು. ಬೆಳವಣಿಗೆ. ಕೊಡುಗೆ ಕುರಿತು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಣಜಿಗ ಸಮುದಾಯದ ಸಾಧಕರಿಗೆ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಡಾ. ಬಿ. ವಿ ನಂದೀಶ್. ಉಪಾಧ್ಯಕ್ಷ ಜಗದೀಶ್. ನಾಗನಂದ. ಪ್ರಶಾಂತ್. ಕೆ. ನಾಗಾನಂದ.ಮೋಹನ್ ಕುಮಾರ್. ರವೀಂದ್ರ. ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
