NEWS

ಜಗತ್ತಿನ ಮಹಾನ್ ಮಾನವತವಾದಿ ಶೋಷಿತರ ಜೀವಂತ ಧ್ವನಿ ಅಂಬೇಡ್ಕರ್.

ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಮೈ ಗೂಡಿಸಿಕೊಳ್ಳಬೇಕು: ಆನಂದ್ ಡಿ.

ಪಾಲನೆ ನ್ಯೂಸ್

    ಮಂಡ್ಯ: ಭಾರತ ದೇಶಕ್ಕೆ 6 ಸಾವಿರ ವರ್ಷಗಳ ಅದ್ಭುತ ಇತಿಹಾಸವಿದೆ.ದೇಶದಲ್ಲಿ ದುರ್ಬಲರ ಮೇಲೆ ಆಗುತ್ತಿರುವ ಶೋಷಣೆ ವಿರುದ್ಧ ಹಲವಾರು ಮಹನೀಯರು ಹೋರಾಟ ಮಾಡಿದ್ದೂ ಪ್ರಮುಖವಾಗಿ ಡಾ. ಬಿ. ಆರ್. ಅಂಬೇಡ್ಕರ್ ರವರು ಶೋಷಣೆ ವಿರುದ್ಧ ದಿಟ್ಟ ಹೋರಾಟ ರೂಪಿಸಿದವರು ಹಾಗೂ ಶೋಷಿತರ ಜೀವಂತ ಧ್ವನಿ ಅವರು ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿರ್ವಹಣಾ ಶಾಸ್ತ್ರ ವಿಭಾಗದ ಬಹುದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಿವೃತ್ತ ಪ್ರಾಧ್ಯಾಪಕರಾದ ಡಾ. ಆನಂದ್ ಡಿ. ರವರು ತಿಳಿಸಿದರು.

    ಕಾಲೇಜು ಶಿಕ್ಷಣ ಇಲಾಖೆ, ಮಂಡ್ಯ ಸರ್ಕಾರಿ ಕಾಲೇಜು (ಸ್ವಾಯತ್ತ) ಸ್ನಾತಕ,ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಮಹಿಳಾ ಕಾಲೇಜಿನ ವನರಂಗ ಸಭಾಂಗಣದಲ್ಲಿ ನಡೆದ
    ಡಾ. ಬಿ.ಆರ್ ಅಂಬೇಡ್ಕರ್ ಅವರ 135 ನೇ ಜನ್ಮದಿನದ ಅಂಗವಾಗಿ ಸಮಾನತೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಕಾನೂನು ಮಂತ್ರಿಯಾಗಿ ಹಿಂದೂ ಕೋಡ್ ಬಿಲ್ (Hindu Code Bill) 1950ರ ದಶಕದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಮಂಡಿಸಲ್ಪಟ್ಟ ಐತಿಹಾಸಿಕ ಕಾನೂನು ಸುಧಾರಣೆಯಾಗಿದ್ದು,ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ವಿಚ್ಛೇದನ, ಏಕಪತ್ನಿತ್ವ ಮತ್ತು ದತ್ತು ಸ್ವೀಕಾರದಂತಹ ಸಮಾನ ಹಕ್ಕುಗಳನ್ನು ತರುವ ಮೂಲಕ ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ಪ್ರಯತ್ನಿಸಿತು. ತೀವ್ರ ವಿರೋಧದ ನಂತರ ಕಾಯ್ದೆಯನ್ನು ಪ್ರತ್ಯೇಕ ಕಾಯ್ದೆಗಳಾಗಿ ಅಂಗೀಕರಿಸಲಾಯಿತು ಎಂದು ತಿಳಿಸಿದರು.

    ಮಹಿಳೆಯರಿಗೆ ಶಿಕ್ಷಣ ನೀಡಿ ಸಂವಿಧಾನ ಬದ್ದವಾದ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡವ ನಿಟ್ಟಿನಲ್ಲಿ ಹೋರಾಟ ಮಾಡಿದವರು ಅವರು. ಸಮಾಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಾಗೂ ಜಾತೀಯತೆ ವಿರುದ್ಧ ಹೋರಾಡಿದವರು ಎಂದು ತಿಳಿಸಿದರು.

    ಮಹಿಳೆಯರು ಡಾ. ಬಿ.ಆರ್ ಅಂಬೇಡ್ಕರ್ ಅವರ ಮೌಲ್ಯ,ಆದರ್ಶ, ಸಿದ್ಧಾಂತಗಳನ್ನು ಅರ್ಥೈಸಿಕೊಳ್ಳಬೇಕು. ಅವರು ಅನ್ಯಾಯ ಅಸಮಾನತೆ, ಶೋಷಣೆ ವಿರುದ್ಧ ಹೋರಾಡಿದವರು ಹಾಗೂ ಭಾರತೀಯರಿಗೆ ಇರಬೇಕಾದ ಸ್ಥಾನಮಾನಗಳ ಬಗ್ಗೆ ಚರ್ಚೆ ಮಾಡಿ, ಸಂಸದೀಯ ಮಾದರಿಯಲ್ಲಿ ಪ್ರಜಾಪ್ರಭುತ್ವ ಬೇಕು ಎಂದು ಪ್ರತಿಪಾದಿಸಿದವರು ಎಂದು ತಿಳಿಸಿದರು.

    ಜಿಲ್ಲಾ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲರಾದ ಪ್ರೊ.ಗುರುರಾಜ್ ಪ್ರಭು ಕೆ. ರವರು ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ರವರು ಸಮಾಜದ ಪರಿವರ್ತಕರು ಹಾಗೂ ಮಾನವತಾವಾದಿ ಅವರ ಜೀವನ, ತತ್ವ ಸಿದ್ಧಾಂತಗಳು ಹಾಗೂ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ತಿಳಿದು ಜೊತೆಗೆ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಸಮಾಸಮಾಜವನ್ನು ನಿರ್ಮಿಸಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಭರತ್ ರಾಜ್ ಎಂ.ಜಿ,ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸಯ್ಯದ್ ಕೌಸರ್ ಫಾತಿಮಾ, ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ. ಕೃಷ್ಣೇಗೌಡ ಹೆಚ್, ರಾಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕುಸುಮಾದೇವಿ ಎಸ್. ಗೆಜೆಟೆಡ್ ಮ್ಯಾನೇಜರ್ ರವಿಕುಮಾರ್ ಕೆ. ಪಿ. ಅಂಬೇಡ್ಕರ್ ವಿಚಾರ ವೇದಿಕೆ ಸಂಚಾಲಕರು ಡಾ. ಜಯರಾಮ್ ಆರ್,ಅಂಬೇಡ್ಕರ್ ವಿಚಾರ ವೇದಿಕೆ ಸಹ ಸಂಚಾಲಕರು ನಾಗರಾಜಮೂರ್ತಿ ಪಿ. ಎನ್. ಉಪಸ್ಥಿತರಿದ್ದರು.

    ✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
    https://chat.whatsapp.com/H1gUYgrzvnQGZAhIQSGMHn

    Related posts

    ಬಸರಾಳು ವ್ಯಾಪ್ತಿಯನ್ನು ನೀರಾವರಿ ಪ್ರದೇಶ ಮಾಡಲು  1200 ಕೋಟಿ ರೂ. ಯೋಜನೆ : ಶಾಸಕ ರವಿಕುಮಾರ್

    ತಮಿಳುನಾಡಿನ ರಾಜಕೀಯದಲ್ಲಿ ಹೊಸ ತಿರುವು

    23 ರಿಂದ ಮೇ 22 ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ಧದ ಲಸಿಕಾ ಕಾರ್ಯಕ್ರಮ

    Leave a Comment