ಪಾಲನೆ ನ್ಯೂಸ್
ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಗೀತೆ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವುದಕ್ಕೆ ಕೆಲ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಮೌಲಾನಾ ಅರ್ಷದ್ ಮದನಿ ಸೇರಿದಂತೆ ಹಲವು ಮುಸ್ಲಿಂ ನಾಯಕರು, ಇಸ್ಲಾಂ ಧಾರ್ಮಿಕ ನಾಯ ಕರು ವಿರೋಧಿಸಿದ್ದಾರೆ. ಮುಸ್ಲಿಮರು ಕೇವಲ ಅಲ್ಲಾ ಹನನ್ನು ಮಾತ್ರ ಆರಾಧಿಸುತ್ತಾರೆ. ಅವನಿಗೆ ಯಾರನ್ನೂ ಸಾಟಿಯಾಗಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆಯನ್ನಾಗಿ ಮಾಡುವುದು ಮತ್ತು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ಶಾಲಾ ಕಾಲೇಜುಗಳಲ್ಲಿ ಸಂಪೂರ್ಣ ಸಾಲುಗಳನ್ನು ಕಡ್ಡಾಯಗೊಳಿಸುವುದು ಪಕ್ಷಪಾತ ಮತ್ತು ಬಲವಂತವಾಗಿ ಹೇರಿದ ನಿರ್ಧಾರವಾಗಿದೆ.
ಅಲ್ಲದೇ ಇದು ಸಂವಿಧಾನದಲ್ಲಿ ಖಾತರಿಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಸ್ಪಷ್ಟ ದಾಳಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವ ಖಂಡನೀಯ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ವಂದೇ ಮಾತರಂ ಹಾಡಿನ ಕೆಲವು ಸಾಲುಗಳು ಬಹುದೇವತಾ ನಂಬಿಕೆಯಲ್ಲಿ ಬೇರೂರಿವೆ. ಇದು ಮಾತೃಭೂಮಿಯನ್ನು ದೇವರಾಗಿ ಚಿತ್ರಿಸುತ್ತವೆ, ಇದು ಇಸ್ಲಾಂನ ಏಕದೇವತಾವಾದಿ ತತ್ವಗಳಿಗೆ ವಿರುದ್ದವಾಗಿದೆ ಎಂದು ಅವರು ವಾದಿಸಿದ್ದಾರೆ. ಒಬ್ಬನೇ ಅಲ್ಲಾಹನನ್ನು ಪೂಜಿಸುವ ಮುಸ್ಲಿಮರನ್ನು ಈ ಹಾಡನ್ನು ಪಠಿಸುವಂತೆ ಒತ್ತಾಯಿಸುವುದು ಸಂವಿಧಾನದ 25ನೇ ವಿಧಿ ಮತ್ತು ಸುಪ್ರೀಂ ಕೋಟ್ ಅದರರ್ ನ ತೀರ್ಪುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮದನಿ ಆಕ್ಷೇಪಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
