NEWS

ಮಹಾಶಿವರಾತ್ರಿ ಪ್ರಯುಕ್ತ ಲಾಡು ಪ್ರಸಾದದಿಂದ ₹1.46 ಕೋಟಿ ಸಂಗ್ರಹ

ಪಾಲನೆ ನ್ಯೂಸ್

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆದ ಮಹಾ ರಥೋತ್ಸವದಲ್ಲಿ ಮಾದಪ್ಪನ ಮಹಾಪ್ರಸಾದ ಲಾಡು ಕೋಟ್ಯಂತರ ರೂ. ಲಾಭತಂದುಕೊಟ್ಟಿದೆ. ಒಟ್ಟು 1,46,20,700 ರೂ. ಆದಾಯ ಬಂದಿದೆ. 2025ರ ಮಹಾಶಿವರಾತ್ರಿ ಜಾತ್ರೆಯಲ್ಲಿ 1.44 ಕೋಟಿ ರೂ. ಆದಾಯ ಸಿಕ್ಕಿತ್ತು.

ಶಿವರಾತ್ರಿ ಜಾತ್ರೆಯಲ್ಲಿ (ಫೆ.10ರಿಂದ 18ರವರೆಗೆ) ವಿವಿಧ ವಿಭಾಗಗಳಿಂದ ಬಂದ ಆದಾಯ 3, 35,43041 ರೂ. ಗಳಾಗಿವೆ. ಉತ್ಸವಗಳಿಂದ 82.80 ಲಕ್ಷ ರೂ., ಸೇವೆಗಳಿಂದ 6.13 ಲಕ್ಷ ರೂ., ಮಿಶ್ರ ಪ್ರಸಾದದಿಂದ 10.37 ಲಕ್ಷ ರೂ., ಮಾಹಿತಿ ಕೇಂದ್ರದಿಂದ 6.53 ಲಕ್ಷ ರೂ., ಕಲ್ಲು ಸಕ್ಕರೆಯಿಂದ 1.79 ಲಕ್ಷ ರೂ. ಆದಾಯ ಸಿಕ್ಕಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಗರಾಭಿವೃದ್ಧಿ ಇಲಾಖೆ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆ

ಧೋನಿ ಅಸಮಾಧಾನ

ದಾಂಪತ್ಯ ಜೀವನಕ್ಕೆ ನಟಿ ರಶ್ಮಿಕಾ ಮಂದಣ್ಣ

Leave a Comment