NEWS

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬ್ರಿಟನ್ ಕಿಂಗ್ ಚಾರ್ಲ್ಸ್ III ತಿರುಗೇಟು

ಪಾಲನೆ ನ್ಯೂಸ್

ವಾಷಿಂಗ್ಟನ್: ಬ್ರಿಟನ್ ಸಹಾಯ ಮಾಡದಿದ್ದರೆ ಇಂದು ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬ್ರಿಟನ್ ಕಿಂಗ್ ಚಾರ್ಲ್ಸ್ III ತಿರುಗೇಟು ನೀಡಿದ್ದಾರೆ. ಏಪ್ರಿಲ್ 28, 2026 ರಂದು ಶ್ವೇತಭವನದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಔತಣಕೂಟದಲ್ಲಿ ಬ್ರಿಟನ್‌ನ ಕಿಂಗ್ ಚಾರ್ಲ್ಸ್ III (King Charles III) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಫ್ರೆಂಚ್ ಭಾಷೆಗೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಪ್ರಸಂಗ ನಡೆಯಿತು.

ಔತಣಕೂಟದ ಭಾಷಣದ ವೇಳೆ, ಕಿಂಗ್ ಚಾರ್ಲ್ಸ್ ಅವರು ಟ್ರಂಪ್‌ಗೆ ಹಾಸ್ಯ ರೀತಿಯಲ್ಲೇ, ನೀವು ಹೇಳಿದಂತೆ ಅಮೆರಿಕಾ ಇಲ್ಲದಿದ್ದರೆ ಯುರೋಪ್ ಜರ್ಮನ್ ಮಾತನಾಡುತ್ತಿತ್ತು, ಆದರೆ, “ಬ್ರಿಟನ್ ಸಹಾಯ ಮಾಡದಿದ್ದರೆ ಇಂದು ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು” ಎಂದು ಕಾಲೆಳೆದರು.

ವೈಟ್ ಹೌಸ್ ಈಸ್ಟ್ ವಿಂಗ್ ಪುನರ್ ನಿರ್ಮಾಣದ ವಿಷಯದಲ್ಲೂ ಚಾರ್ಲ್ಸ್ ಟ್ರಂಪ್ ಅವರನ್ನು ಲಘುವಾಗಿ ಟೀಕಿಸಿದರು. “1814ರಲ್ಲಿ ನಾವು ಬ್ರಿಟಿಷರು ವೈಟ್ ಹೌಸ್‌ನ್ನು ಸುಟ್ಟುಹಾಕಿದ ಘಟನೆ ಕೂಡ ಒಂದು ರೀತಿಯ ರಿಯಲ್ ಎಸ್ಟೇಟ್ ಅಭಿವೃದ್ಧಿಯೇ” ಎಂದು ವ್ಯಂಗ್ಯವಾಡಿದರು.ಅದೇ ವೇಳೆ, 1773ರ ಬೋಸ್ಟನ್ ಟೀ ಪಾರ್ಟಿ ಘಟನೆಯನ್ನು ಉಲ್ಲೇಖಿಸಿ, “ಈ ಭೋಜನ ಅದಕ್ಕಿಂತ ಉತ್ತಮವಾಗಿದೆ” ಎಂದೂ ಚಾರ್ಲ್ಸ್ ಹಾಸ್ಯ ಚಟಾಕಿೃ ಹಾರಿಸಿದರು.

ಟ್ರಂಪ್ ಅವರು ಈ ಹಿಂದೆ “ಅಮೆರಿಕದ ಸಹಾಯವಿಲ್ಲದಿದ್ದರೆ ಯುರೋಪ್ ರಾಷ್ಟ್ರಗಳು ಇಂದು ಜರ್ಮನ್ ಮಾತನಾಡುತ್ತಿದ್ದವು” ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಚಾರ್ಲ್ಸ್ ಈ ಹಾಸ್ಯಮಯ ತಿರುಗೇಟು ನೀಡಿದ್ದಾರೆ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

ರಾಯ್ ಆತ್ಮಹತ್ಯೆ ಪ್ರಕರಣದ ಮೊದಲ ಹಂತದ ತನಿಖೆ ಪೂರ್ಣ

ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಸಾಮಾಜಿಕ ಜವಾಬ್ದಾರಿ‌ – ಡಾ. ಕುಮಾರ

Leave a Comment