NEWS

ತಾಂತ್ರಿಕ ಸಮಸ್ಯೆಗಳಿಂದಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೈತಪ್ಪಿದೆ

ಪಾಲನೆ ನ್ಯೂಸ್

ಬಿಇಒ ಮಹೇಶ್ ಮಾತನಾಡಿ, ಇಬ್ಬರು ಮಕ್ಕಳ ಮಾಹಿತಿಯನ್ನು ಶಾಲೆಯವರು ದಾಖಲಿಸಿಲ್ಲ. ಆಗ ಆ ಇಬ್ಬರು ಮಕ್ಕಳೇ ಇಲ್ಲ ಎಂದಾಗುತ್ತದೆ. ಆದ್ದರಿಂದ ಅವರು ನಮ್ಮ ಲಾಗ್‌ಇನ್‌ಗೆ ಬಂದಿಲ್ಲ. ಒಬ್ಬ ವಿದ್ಯಾರ್ಥಿಗೆ ಟಿಸಿ ಮಂಜೂರು ಹಾಗೂ ಮತ್ತೊಬ್ಬ ವಿದ್ಯಾರ್ಥಿ 2024-25ರಲ್ಲಿಯೇ ಬಿಇಒ ಕಡೆಯಿಂದ ರಿಜೆಕ್ಟ್ ಆಗಿರೋದಾಗಿ ತೋರಿಸಲಾಗಿದೆ. ಆ ಸಮಯದಲ್ಲಿ ನಾನು ಇಲ್ಲಿ ಕರ್ತವ್ಯದಲ್ಲಿರಲಿಲ್ಲ. ಇದು ನನ್ನಿಂದಾದ ತಪ್ಪಲ್ಲ ಎಂದು ಸ್ಪಷ್ಟಪಡಿಸಿದರು. ಈ ವಿಚಾರವಾಗಿ ಮೇಲಧಿಕಾರಿಗಳಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಹೇಮಂತ್ ಮಾತನಾಡಿ, ತಾಂತ್ರಿಕ ಸಮಸ್ಯೆಗಳಿಂದಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೈತಪ್ಪಿದೆ ಎಂದರು. ಶಾಲೆಯ 8 ಮತ್ತು 9ನೇ ತರಗತಿ ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡೂ ತರಗತಿಗಳಿಗೆ ಮಾನ್ಯತೆ ಮಾಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಕಳೆದ ಬಾರಿಯಂತೆ ಈ ಸಲವೂ ಪರೀಕ್ಷೆ ಬರೆಯಲು ಕೋರ್ಟ್ ಆದೇಶ ನೀಡಿದೆ ಎಂದು ಹೇಳಿದ್ದಾರೆ. ಮಂಗಳವಾರ ಸಂಜೆ ಶಾಲೆಯಿಂದ ಕರೆ ಮಾಡಿ ಬೆಳಗ್ಗೆ ಹಾಲ್ ಟಿಕೆಟ್ ಸಿಗಲಿದೆ ಎಂದಿದ್ದರು. ಬೆಳಗ್ಗೆ ಹೋದಾಗ ಇಬ್ಬರಿಗೆ ಹಾಲ್ ಟಿಕೆಟ್ ಸಿಗಲ್ಲ. ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಏಪ್ರಿಲ್‌ನಲ್ಲಿ ಪರೀಕ್ಷೆ ಬರೆದರೂ ಪ್ರಯೋಜನವಾಗಲ್ಲ, ನಾವೇನ್ ಮಾಡೋದು ಎಂದು ಇಬ್ಬರು ವಿದ್ಯಾರ್ಥಿಗಳು ದುಃಖಭರಿತರಾಗಿ ನುಡಿದರು.‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವಿವಿಧ ಜಲಸಾಹಸ ಕ್ರೀಡೆಗಳ ಆರಂಭಕ್ಕೆ ಚಾಲನೆ

ಭರ್ಜರಿ ದಾಖಲೆ ಮಾಡಿದ ‘ಬಜೆಟ್ ರಾಮಯ್ಯ’

ಉದ್ಯೋಗ ನೀಡಿ ಉಚಿತ ಗ್ಯಾರಂಟಿ ಬಿಡಿ

Leave a Comment