NEWS

ರಾಜಧಾನಿ ಬೆಂಗಳೂರಿನ ಜೀವನ ಅತ್ಯಂತ ದುಬಾರಿ.

ಪಾಲನೆ ನ್ಯೂಸ್

ಬೆಂಗಳೂರು: ಮನೆ ಬಾಡಿಗೆ ಹಾಗೂ ದೈನಂದಿನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರು ಜೀವನ ನಡೆಸಲು ಪರದಾಡುವಂತಹ ಸ್ಥಿತಿ ಎದುರಾಗಿದೆ.

ಇದೀಗ ಬ್ಯಾಚುಲರ್ಸ್‌ಗೆಳಿಗೂ ಬೆಂಗಳೂರು ಬಲು ದುಬಾರಿಯಾಗಿದ್ದು, ಅಮೆಜಾನ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ತಿಂಗಳ ಖರ್ಚಿನ ಸಂಪೂರ್ಣ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ ಮತ್ತು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಅಮೆಜಾನ್ ಉದ್ಯೋಗಿಯೊಬ್ಬರು ನಗರದಲ್ಲಿ “ಯೋಗ್ಯ ಜೀವನ” ನಿರ್ವಹಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದರ ವಿವರವಾದ ಅಂದಾಜನ್ನು ಹಂಚಿಕೊಂಡಿದ್ದಾರೆ.

ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ 26 ವರ್ಷದ ಅವಿವಾಹಿತ ಕಾರ್ತಿಕ್ ಸಿಂಗ್ ಪರಿಹಾರ್, ತಮ್ಮ ತಿಂಗಳ ಖರ್ಚು ವೆಚ್ಚ 51,000 ರೂ. ಆಗಿದ್ದು, ಕನಿಷ್ಠ ಇಷ್ಟು ಬೇಕೆ ಬೇಕು ಎಂದು ಹೇಳಿದ್ದಾರೆ. ಪರಿಹಾರ್ ಪ್ರಸ್ತುತ HSR ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 1ಬಿಎಚ್ ಕೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, 20,000 ರೂ ಬಾಡಿಗೆ ಪಾವತಿಸುತ್ತೇನೆ ಎಂದು ಹೇಳಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಒಂದು ಲೋಕಾರೂಢಿಯ ಗಾದೆ ಮಾತಿನ ಸುತ್ತಾ……

ಶಿವಪುರ ಸತ್ಯಾಗ್ರಹ ಸೌಧಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಬಾಲ್ಯವಿವಾಹ ಮುಕ್ತ ಮಂಡ್ಯ ಜಿಲ್ಲೆಯ ಅಭಿಯಾನ

Leave a Comment